More

    ತ್ಯಾಗಲಿಯಲ್ಲಿ ಶ್ರೀಲಕ್ಷ್ಮೀನರಸಿಂಹ ದೇವರ ಮಹಾರಥೋತ್ಸವ ನಾಳೆ

    ಸಿದ್ದಾಪುರ: ತಾಲೂಕಿನ ತ್ಯಾಗಲಿಯ ಲಕ್ಷ್ಮೀನರಸಿಂಹ ದೇವರ ಮಹಾ ರಥೋತ್ಸವ ಮಾ. 7ರಂದು ನಡೆಯಲಿದೆ.

    ಮಹಾರಥೋತ್ಸವದಂದು ಬೆಳಗ್ಗೆ ಧಾರ್ವಿುಕ ಕಾರ್ಯಕ್ರಮ, ಸಂಜೆ 5.30ರಿಂದ ಮಹಾಪೂಜೆ, ಹಣ್ಣು ಕಾಯಿ, ರಥ ಕಾಣಿಕೆ ಸಮರ್ಪಣೆ ಬಳಿಕ ಮಹಾರಥೋತ್ಸವ ನಡೆಯಲಿದೆ. ದೇವಸ್ಥಾನದ ಅರ್ಚಕ ಪರಮೇಶ್ವರ ಭಟ್ಟ ತ್ಯಾಗಲಿ ಹಾಗೂ ಗೋಕರ್ಣದ ವಿ. ಗಜಾನನ ಭಟ್ಟ ಹಿರೆ ಅವರ ನೇತೃತ್ವ ವಹಿಸುವರು.

    ಸಂಜೆ 6.30ರಿಂದ ದಿ.ಚಿಟ್ಟಾಣಿ ರಾಮಚಂದ್ರ ಹೆಗಡೆ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿ ಸಲಾಗಿದ್ದು, ತ್ಯಾಗಲಿ-ಹಂಗಾರಖಂಡ ಶ್ರೀಲಕ್ಷ್ಮೀನರಸಿಂಹ ರಥೋತ್ಸವ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಡಿ. ಹೆಗಡೆ ಬುಳ್ಳಿ ನೇತೃತ್ವ ವಹಿಸುವರು. ಲಕ್ಷ್ಮೀನರಸಿಂಹ ಡೊಳ್ಳು ಸಮಿತಿ ಹಂಗಾರಖಂಡ ಅವರಿಂದ ಡೊಳ್ಳು ಕುಣಿತ, ಸ್ಥಳೀಯ ಮಕ್ಕಳಿಂದ ಮನೋರಂಜನೆ, ರಜತ್ ಹೆಗಡೆ ದೇವಿಸರ ಅವರಿಂದ ಸಂಗೀತ ವೈಭವ. ರಾತ್ರಿ 10ರಿಂದ ವೀರಾಂಜನೇಯ ಯಕ್ಷಮಿತ್ರಮಂಡಳಿ ಬಂಗಾರಮಕ್ಕಿ ಮತ್ತು ಪೆರ್ಡರು ಮೇಳದ ಆಯ್ದ ಹಾಗೂ

    ಅತಿಥಿ ಕಲಾವಿದರಿಂದ ಕಾರ್ತವೀರ್ಯಾರ್ಜುನ ಮತ್ತು ಶನೈಶ್ಚರ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

    ಹಿಮ್ಮೇಳದಲ್ಲಿ ಸುರೇಶ ಶೆಟ್ಟಿ, ರಾಘವೇಂದ್ರ ಆಚಾರ್ಯ ಜನ್ಸಾಲೆ, ಶಂಕರ ಭಟ್ಟ ಬ್ರಹ್ಮೂರು, ಶಂಕರ ಭಾಗ್ವತ್, ಸುನೀಲ್ ಭಂಡಾರಿ, ವಿಘ್ನೕಶ್ವರ ಕೆಸರಕೊಪ್ಪ, ಪ್ರಸನ್ನ ಹೆಗ್ಗಾರ ಸಹಕರಿಸಲಿದ್ದಾರೆ.

    ಮುಮ್ಮೇಳದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಸುಬ್ರಹ್ಮಣ್ಯ ಚಿಟ್ಟಾಣಿ, ಗಣಪತಿ ಹೆಗಡೆ ತೋಟಿಮನೆ, ಶ್ರೀಧರ ಭಟ್ಟ ಕಾಸರಕೋಡ, ಅಶೋಕ ಭಟ್ಟ ಸಿದ್ದಾಪುರ, ಸಂಜಯ ಬಿಳಿಯೂರು, ಸದಾಶಿವ ಮಲವಳ್ಳಿ,ಕಾರ್ತಿಕ ಚಿಟ್ಟಾಣಿ, ನಾಗೇಂದ್ರ ಮೂರೂರು, ರಕ್ಷಿತ್ ಶೆಟ್ಟಿ ಪಡ್ರೆ, ಅವಿನಾಶ ಕೊಪ್ಪ, ನಿರಂಜನ ಜಾಗನಳ್ಳಿ, ನಾಗೇಶ ಕುಳಿಮನೆ ಮಾರಯತಿ ಬೈಲಗದ್ದೆ, ಮಂಜು ಗೌಡ ಗುಣವಂತೆ ವಿವಿಧ ಪಾತ್ರ ನಿರ್ವಹಿಸಲಿದ್ದಾರೆ. ಮಾ.8ರಂದು ಬೆಳಗ್ಗೆ ಪಲ್ಲಕ್ಕಿ ಉತ್ಸವ, ಅನ್ನಸಂತರ್ಪಣೆ ನಡೆಯಲಿದೆ.

    ರಥಕಟ್ಟುವ ಸಂಪ್ರದಾಯ: ಮಹಾರಥೋತ್ಸವ ಆರಂಭವಾ ದಾಗಿನಿಂದ ಅಂದರೆ ಒಂದು ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿಯ ರಥ ಕಟ್ಟುವ ಕೆಲಸವನ್ನು ಹಂಗಾರಖಂಡದ ಗ್ರಾಮಸ್ಥರು ನಿರ್ವಹಿಸುತ್ತಿದ್ದಾರೆ. ರಥಕಟ್ಟುವ ಕೌಶಲವನ್ನು ಒಬ್ಬರಿಂದೊಬ್ಬರು ಮುಂದುವರಿಸಿಕೊಂಡು ಬರುತ್ತಿದ್ದಾರೆ.

    ರಥ 8ಅಡಿ ಅಗಲ ಹಾಗೂ 35ಅಡಿಯಷ್ಟು ಎತ್ತರವಿದ್ದು, 15ಜನ ಮೂರ್ನಾಲ್ಕು ದಿನಗಳಲ್ಲಿ ರಥಕಟ್ಟಿ ಮುಗಿಸುತ್ತಾರೆ. ರಥೋತ್ಸವ ಆರಂಭವಾದಾಗಿನಿಂದ ಎರಡು ರಥಗಳು ಬಳಕೆಯಾಗಿದ್ದು, ಈಗ ಮೂರನೇ ರಥವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಗ್ರಾಮದ ಹಿರಿಯರು ಹೇಳಿದರು.

    ಮಹಾರಥೋತ್ಸವ ನಡೆಯುವ ಒಂದು ವಾರ ಮೊದಲು ದೇವಸ್ಥಾನದ ಆಡಳಿತ ಮಂಡಳಿಯವರು ಹಂಗಾರಖಂಡ ಗ್ರಾಮಕ್ಕೆ ತೆರಳಿ ರಥಕಟ್ಟುವುದಕ್ಕೆ ವೀಳ್ಯ ಕೊಟ್ಟು ಬರುತ್ತೇವೆ. | ಗಣಪತಿ ರಾಮಚಂದ್ರ ಹೆಗಡೆ, ಬೂರನ್ ತ್ಯಾಗಲಿ | ದೇವಸ್ಥಾನ ಕಮಿಟಿ ಅಧ್ಯಕ್ಷ

    ರಥ ಕಟ್ಟಲು ಅಂದಾಜು 25 ವರ್ಷದಿಂದ ಕೆಲಸ ಮಾಡುತ್ತಿದ್ದೇವೆ. ರಥ ಕಟ್ಟಲು ಹಣ ತೆಗೆದುಕೊಳ್ಳುವುದಿಲ್ಲ. ಇದು ನಮ್ಮ ಸೇವೆ. ರಥ ಕಟ್ಟಲು ಕೌಶಲ ಬೇಕು. ಊರಿನ ಹಿರಿಯರು ನಡೆಸಿಕೊಂಡು ಬಂದ ಸಂಪ್ರದಾಯವನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. | ರಮೇಶ ಎನ್.ನಾಯ್ಕ ಬಾಳೇಕೈ ಹಾಗೂ ರಮೇಶ ತಿಮ್ಮ ನಾಯ್ಕ ಹಂಗಾರಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts