More

    ತೋಪಮ್ಮ ದೇಗುಲದ ಬಸವ ಭವನ ಶೀಘ್ರವೇ ಪೂರ್ಣ

    ಕೆ.ಆರ್.ನಗರ: ಪಟ್ಟಣದ ತೋಪಮ್ಮನವರ ದೇವಾಲಯದ ಬಳಿ ನಿರ್ಮಾಣ ಹಂತದಲ್ಲಿರುವ ಬಸವ ಭವನದ ಕಾಮಗಾರಿಗೆ ಸರ್ಕಾರದಿಂದ 1 ಕೋಟಿ ರೂ. ಅನುದಾನ ಕೊಡಿಸಲಾಗಿದ್ದು, ಇನ್ನಷ್ಟು ಅನುದಾನ ತಂದು ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.

    ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿ 1.50 ಕೋಟಿ ರೂ. ವೆಚ್ಚದ ಅನುದಾನದಲ್ಲಿ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೀಡಿ ಮಾತನಾಡಿದ ಅವರು, ಪುರಸಭೆಗೆ ನೀಡುವ ನಗರೋತ್ಥಾನ ಅನುದಾನ 10 ಕೋಟಿ ರೂ.ಗಳಲ್ಲಿ ಈ ಬಡಾವಣೆಯ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉಳಿದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ ಎಂದರು.

    ಬಸವ ಭವನವನ್ನು ವೀರಶೈವಲಿಂಗಾಯತ ಸಮಾಜಕ್ಕೆ ನೀಡಬಾರದು ಎಂಬ ದುರುದ್ದೇಶದಿಂದ ಕೆಲ ಕಿಡಿಗೇಡಿಗಳು ಲೋಕಾಯುಕ್ತಕ್ಕೆ ದೂರು ನೀಡಿದ್ದರಿಂದ ಬಿಸಿಎಂ ಇಲಾಖೆಯ ವತಿಯಿಂದ ಭವನ ನಿರ್ಮಾಣ ಮಾಡಲಾಗುತ್ತಿದ್ದು ಶೀಘ್ರದಲ್ಲೇ ಸಮಾಜಕ್ಕೆ ಭವನ ಹಸ್ತಾಂತರಿಸಲಾಗುತ್ತದೆ. ಇದಕ್ಕೆ ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತಿದೆ ಎಂದು ಮಾಹಿತಿ ನೀಡಿದರು.

    ಬಿಳಿಕೆರೆಯಿಂದ ಹೊಳೆನರಸೀಪುರ ತಾಲೂಕು ದೊಡ್ಡಹಳ್ಳಿ ಗ್ರಾಮದವರೆಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು 700 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದಿಂದ ಮಂಜೂರು ಮಾಡಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದ ಶಾಸಕರು, ಕೆ.ಆರ್.ನಗರ ಪಟ್ಟಣ ವ್ಯಾಪ್ತಿಯಲ್ಲಿ ಯಾರಿಗೂ ತೊಂದರೆಯಾಗದಂತೆ ರಸ್ತೆ ವಿಸ್ತರಣೆ ಮಾಡಲಾಗುತ್ತದೆ. ಗಾಳಿ ಸುದ್ದಿಗಳಿಗೆ ಸಾರ್ವಜನಿಕರು ಮತ್ತು ವರ್ತಕರು ಕಿವಿಗೊಡಬಾರದು ಎಂದು ಮನವಿ ಮಾಡಿದರು.

    ಯಾರೇ ಅಭಿವೃದ್ಧಿ ಕೆಲಸ ಮಾಡಿದರೂ ಅದು ನೀವು ಕಟ್ಟಿದ ತೆರಿಗೆ ಹಣದಿಂದ. ಆದ್ದರಿಂದ ಕಾಮಗಾರಿ ಮಾಡುವಾಗ ಗುಣಮಟ್ಟದಿಂದ ಮಾಡಿಸಿಕೊಳ್ಳುವ ಜವಾಬ್ದಾರಿ ನಿಮ್ಮದಾಗಿದೆ ಎಂದು ಕಿವಿಮಾತು ಹೇಳಿದರು.

    ಪುರಸಭಾ ಮುಖ್ಯಾಧಿಕಾರಿ ಡಾ.ಜಯಣ್ಣ, ಇಂಜಿನಿಯರ್ ಪುಟ್ಟಸ್ವಾಮಿ, ಸದಸ್ಯರಾದ ಕೆ.ಬಿ.ವೀಣಾವೃಷಬೇಂದ್ರ, ಮಂಜುಳಾಚಿಕ್ಕವೀರು, ಕೆ.ಪಿ.ಪ್ರಭುಶಂಕರ್, ಕೆ.ಎಲ್.ಜಗದೀಶ್, ರಂಗಸ್ವಾಮಿ, ನಂಜುಂಡ, ಮಾಜಿ ಸದಸ್ಯ ರಾಜ ಶ್ರೀಕಾಂತ್, ಮುಖಂಡರಾದ ಡೇರಿಪ್ರಕಾಶ್, ಎಲ್.ಎಸ್.ಮಹೇಶ್, ದೊಳ್ಳದಿನೇಶ್, ರುದ್ರೇಶ್, ರೇಖಾರವೀಂದ್ರ, ಗೀತಾದೇವರಾಜು, ರೂಪಾಸತೀಶ್, ವೈ.ಎಸ್.ಸುರೇಶ್, ಉಸ್ತಾದ್‌ರಘು, ಕೆಂಡಗಣ್ಣಪ್ಪ, ಲಾರಿಸುರೇಶ್, ಬಿ.ಎಂ.ನಾಗರಾಜು, ಸೇರಿದಂತೆ ಇನ್ನಿತರರು ಹಾಜರಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts