More

    ತುಮಕೂರಲ್ಲಿ ಪದವಿ ಸಂಜೆ ಕಾಲೇಜು ಆರಂಭ : ಬಿ.ಕಾಂ, ಬಿಸಿಎ ಪದವಿಗೆ ಅವಕಾಶ ; ಸಂಜೆ 4.30ರಿಂದ ರಾತ್ರಿ 9ರವರೆಗೆ ಕಾಲೇಜು

    ತುಮಕೂರು : ಶೈಕ್ಷಣಿಕ ನಗರ ಎಂಬ ಹೆಗ್ಗಳಿಕೆ ಹೊಂದಿರುವ ತುಮಕೂರು ಮತ್ತೊಂದು ಮುಕುಟವನ್ನು ತನ್ನ ಮುಡಿಗೇರಿಸಿಕೊಂಡಿದೆ. ಉದ್ಯೋಗ ಮಾಡುವ ಯುವಕರು ಪದವಿ ಪಡೆಯಲು ಅನುಕೂಲವಾಗುವಂತೆ ‘ಸಂಜೆ ಪದವಿ ಕಾಲೇಜು’ ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭ ಮಾಡಲಿದ್ದು ಪ್ರವೇಶಾತಿ ಆರಂಭಿಸಿದೆ.

    ಸಕಲ ಮೂಲ ಸೌಲಭ್ಯ ಹೊಂದಿರುವ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ನಗರದ ಸರ್ಕಾರ ಪದವಿ ಕಾಲೇಜಿನಲ್ಲಿ ಸಂಜೆ ಕಾಲೇಜು ಆರಂಭಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ತುಮಕೂರು ವಿವಿ ಎಲ್‌ಐಸಿ ಕಮಿಟಿ ಕಾಲೇಜಿಗೆ ಭೇಟಿ ನೀಡಿ ಸಂಯೋಜನೆಗಳನ್ನು ಆರಂಭಿಸಲು ಅನುಮತಿ ನೀಡಿದ್ದು, ಪ್ರವೇಶಾತಿ ಆರಂಭಿಸಲಾಗಿದೆ.

    ಪ್ರಥಮ ವರ್ಷದ ಪದವಿ ತರಗತಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲಾಗಿದ್ದು ಆರಂಭದಲ್ಲಿ ಬಿ.ಕಾಂ, ಬಿಸಿಎ ಕೋರ್ಸ್‌ಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆ.30ರ ವರಗೂ ಅವಕಾಶವಿದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಕಾಲೇಜು ದಾಖಲಾತಿ ಸಮಿತಿ ಮುಂದೆ ಅಗತ್ಯ ದಾಖಲಾತಿಗಳನ್ನು ನೀಡಿ ಪ್ರವೇಶ ಪಡೆಯಬೇಕಿದೆ.

    ಬಿಕಾಂ ಪದವಿಯಲ್ಲಿ 300, ಬಿಸಿಎ ಪದವಿಯಲ್ಲಿ 100 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ತುಮಕೂರು ವಿವಿ ಅನುಮತಿ ನೀಡಿದ್ದು ಬೋಧನೆಗೆ ಅಗತ್ಯವಿರುವ 7 ಉಪನ್ಯಾಸಕರನ್ನು ಅತಿಥಿ ಉಪನ್ಯಾಸಕರನ್ನಾಗಿ ನೇಮಿಸಿಕೊಳ್ಳಲು ಸರ್ಕಾರ ಅನುಮತಿ ಕೂಡ ನೀಡಿದೆ. ಅಗತ್ಯ, ಕೊಠಡಿ, ಗ್ರಂಥಾಲಯ ಕೂಡ ಲಭ್ಯವಿದೆ.

    ಸಂಜೆ ಕಾಲೇಜಿಗೆ ದಾಖಲಾಗುವ ಎಲ್ಲ ವಿದ್ಯಾರ್ಥಿಗಳಿಗೂ ಸರ್ಕಾರದ ಲಭ್ಯವಿರುವ ಸೌಲಭ್ಯ ಲಭಿಸಲಿದೆ, ದಾಖಲಾತಿ ಪ್ರಕ್ರಿಯೆ, ಶುಲ್ಕ ಕೂಡ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳಲ್ಲಿ ನಿಗದಿ ಪಡಿಸಿದಂತೆಯೆ ಪಡೆಯಲಾಗುತ್ತಿದೆ. ಕಾಲೇಜು ವ್ಯವಹಾರಗಳು ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಸರ್ಕಾರಿ ಪದವಿ ಕಾಲೇಜು ಅಧೀನದಲ್ಲಿಯೇ ನಡೆಯಲಿದ್ದು ಉದ್ಯೋಗಸ್ಥ ಯುವಕರು ಉನ್ನತ ಶಿಕ್ಷಣದ ಕನಸು ನನಸಾಗಿಸಲು ಅವಕಾಶವಾಗಿದೆ.

    ಬೆಳಗ್ಗೆ ಉದ್ಯೋಗ, ಸಂಜೆ ಕಾಲೇಜು : ನಗರ ಪ್ರದೇಶದಲ್ಲಿ ಉದ್ಯೋಗ ಮಾಡುತ್ತಿರುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಸಂಜೆ ಕಾಲೇಜು ಆರಂಭಿಸಲಾಗಿದ್ದು ಸರ್ಕಾರಿ ಪದವಿ ಕಾಲೇಜಿನಲ್ಲಿ ಎಲ್ಲ ಮೂಲಸೌಲಭ್ಯವಿದೆ. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಗ್ರಂಥಾಲಯ ಕೂಡ ಲಭ್ಯವಿದ್ದು ಸದುಪಯೋಗ ಪಡಿಸಿಕೊಳ್ಳಬಹುದು. ಸಂಜೆ 4.30ರಿಂದ 9ರ ವರೆಗೆ ತರಗತಿಗಳು ನಡೆಯಲಿದ್ದು ಕಾಲೇಜು ನಗರದ ಮಧ್ಯದಲ್ಲಿರುವ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಹೋಗಿಬರಲು ಅನುಕೂಲವಾಗಲಿದೆ. ಉದ್ಯೋಗಸ್ಥ ಯುವಕರು ಪದವಿ ಪಡೆಯಲು ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದಾಗಿದೆ. ಪ್ರವೇಶಾತಿ ಬಗ್ಗೆ ಮಾಹಿತಿಗೆ ಸರ್ಕಾರಿ ಪದವಿ ಕಾಲೇಜು ಮೊ.9980020218 ಸಂಪರ್ಕಿಸಬಹುದು.

    ಬೆಳೆಯುತ್ತಿರುವ ತುಮಕೂರು ನಗರದಲ್ಲಿ ಉದ್ಯೋಗಸ್ಥ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸಂಜೆ ಕಾಲೇಜು ಆರಂಭಕ್ಕೆ ನಮ್ಮ ಬೇಡಿಕೆ ಇತ್ತು, ಸರ್ಕಾರ ಅನುಮತಿ ನೀಡಿದ ನಂತರ ಪ್ರವೇಶಾತಿ ಆರಂಭಿಸಲಾಗಿದ್ದು ಬಿಕಾಂಗೆ 300 ಹಾಗೂ ಬಿಸಿಎಗೆ 100 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದು. ಕಾಲೇಜು ಆರಂಭಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
    ಪ್ರೊ.ಟಿ.ಡಿ.ವಸಂತಾ ಪ್ರಾಚಾರ್ಯೆ, ಸರ್ಕಾರಿ ಪದವಿ ಕಾಲೇಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts