More

    ತಿಕೋಟಾದ ಹವಾ ಮಲ್ಲಿನಾಥ ದೇಗುಲದಲ್ಲಿ ಲಿಂಗ ಸ್ಥಾಪನೆ

    ತಿಕೋಟಾ: ನಿರಗುಡಿ ಹವಾ ಮಲ್ಲಿನಾಥ ಮಹಾರಾಜ ಅವರದು ಧಾರ್ಮಿಕ ಲೋಕದ ಅಚಲ ಪ್ರೀತಿಯಾಗಿದೆ. ಕರಾರುವಕ್ಕಾಗಿ ಹೇಳಲಾಗದ, ಹೇಳದಿರಲಾಗದ ಸ್ಥಿತಪ್ರಜ್ಞೆ ಅವರದಾಗಿದೆ ಎಂದು ತಿಕೋಟಾ ದಾನಮ್ಮದೇವಿ ದೇವಸ್ಥಾನದ ಅರ್ಚಕ ಚಂದ್ರಶೇಖರಯ್ಯ ಹಿರೇಮಠ ಹೇಳಿದರು.

    ಪಟ್ಟಣದ ಹವಾ ಮಲ್ಲಿನಾಥ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಲಿಂಗ ಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಾರಾಜರು ಸೀದಾ ಸಾದಾ ವ್ಯಕ್ತಿಗಳಾಗಿದ್ದು ಸಮಾಜಮುಖಿಯಾಗಿ ಜೀವಿಸಲು ಹೆಚ್ಚಿನ ಆದ್ಯತೆ ನೀಡುತ್ತಾರೆ. ಜನಪ್ರಿಯತೆಯ ಭಂಡಾರ ಅವರಲ್ಲಿದೆ. ಉಲ್ಲಸಿತ ಚಿತ್ತದ ವಿಚಿತ್ರ ವ್ಯಕ್ತಿತ್ವ ಅವರದಾಗಿದೆ. ಕೋಶ ಓದದಿದ್ದರೂ ದೇಶ ತಿರುಗಾಟದ ಪ್ರಚಂಡ ಅಲೆಮಾರಿ. ಜಗತ್ತಿನಾದ್ಯಂತ ಅಂದಾಜು 6 ಸಾವಿರ ದೇವಾಲಯಗಳನ್ನು ನಿರ್ಮಿಸಿ ಅಧ್ಯಾತ್ಮ ಪ್ರಸಾರಕ್ಕೆ ಆದ್ಯತೆ ನೀಡಿದ್ದಾರೆ. ಜಾತ್ಯತೀತವಾಗಿ ಎಲ್ಲ ಧರ್ಮದವರು ನಿರಗುಡಿ ಹವಾ ಮಲ್ಲಿನಾಥ ಮಹಾರಾಜ ಕಾರ್ಯಕ್ಕೆ ಕೈಜೋಡಿಸಬಹುದು ಎಂದರು.

    ಸಾನ್ನಿಧ್ಯ ವಹಿಸಿದ್ದ ಹಿರೇಮಠದ ಶಿವಬಸವ ಶಿವಾಚಾರ್ಯರು ಮಾತನಾಡಿ, ನಿರಗುಡಿ ಮಹಾರಾಜರು ದೇಶದಲ್ಲಿ ಮಠ, ಕುಟೀರ, ಅಶ್ರಮಗಳನ್ನು ನೂರಾರು ಸಂಖ್ಯೆಯಲ್ಲಿ ಸ್ಥಾಪಿಸಿದ್ದಾರೆ. ಕನ್ನಡ, ಮರಾಠಿ, ತೆಲಗು, ಹಿಂದಿ ಸೇರಿ ಐದಾರು ಭಾಷೆಗಳಲ್ಲಿ ನಿರರ್ಗಳವಾಗಿ ಮಾತಾಡಬಲ್ಲರು ಎಂದರು.

    ಪಿಕೆಪಿಎಸ್ ನಿವೃತ್ತ ಕಾರ್ಯ ನಿರ್ವಾಹಕ ಸದಾಶಿವ ಮಂಗಸೂಳಿ ಮಾತನಾಡಿದರು. ಬೀದರ್ ಜಿಲ್ಲೆಯ ನಿರಗುಡಿ ಹವಾ ಮಲ್ಲಿನಾಥ ಮಹಾರಾಜರು ಲಿಂಗ ಸ್ಥಾಪನೆ ಪೂಜೆ ನೆರವೇರಿಸಿದರು. ದೇವಸ್ಥಾನ ನಿರ್ಮಿಸಲು ಭೂಮಿ ದಾನ ಮಾಡಿದ ಶಿಕ್ಷಕ ಮಲ್ಲಯ್ಯ ಕಣಬೂರ ದಂಪತಿಗೆ ಹವಾ ಮಲ್ಲಿನಾಥ ಮಹಾರಾಜರು ಗೌರವಿಸಿದರು. ಮನಗೂಳಿಯ ನಿವೃತ್ತ ಬಿಇಒ ಹೂನ್ನಕಸ್ತೂರಿ, ಮಲ್ಲಿಕಾರ್ಜುನ ಭೂಸಗೂಂಡ, ಜಗದೀಶ ಕೂಳ್ಳುಲಮಠ ಹಾಗೂ ತಿಕೋಟಾ ಹಾಗೂ ಪಕ್ಕದ ಗ್ರಾಮಗಳ ಭಕ್ತರು ಇದ್ದರು. ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts