More

    ತಾಳಿ ಕಿತ್ತುಕೊಳ್ಳುವ ಮೋದಿ ಹೇಳಿಕೆ ಅಪಾಯಕಾರಿ

    ಬಾಗಲಕೋಟೆ: ಕಾಂಗ್ರೆಸ್ ಅಽಕಾರಕ್ಕೆ ಬಂದರೆ ಹಿಂದು ಮಹಿಳೆಯರ ಕಿತ್ತುಕೊಂಡು ಮುಸ್ಲಿಂರಿಗೆ ಕೊಡುತ್ತಾರೆ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಬಾಗಲಕೋಟೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಸ್.ಆರ್.ಪಾಟೀಲ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಮೋದಿ ಅವರು ಹೇಳಿದಂತೆ ಯಾರದ್ದೋ ಆಸ್ತಿಯನ್ನು ಕಿತ್ತುಕೊಂಡು ಇನ್ನ್ಯಾರಿಗೋ ಕೊಡಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಮೂಲಭೂತ ಹಕ್ಕುಗಳಲ್ಲಿ ಇದು ಒಂದಾಗಿದೆ. ಇದು ಮೋದಿ ಅವರಿಗೆ ತಿಳಿದಿಲ್ಲವೇ? ಆಗಿದ್ದರೂ ಸಹ ಉನ್ನತ ಸ್ಥಾನದಲ್ಲಿ ಇದ್ದುಕೊಂಡು ಇಂತ ಕೀಳುತನದ ಹೇಳಿಕೆ ಕೊಡಬಾರದಿತ್ತು ಎಂದರು.

    ಬಸವಾದಿ ಶರಣರ ಆಶಯ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು. ಸಮ ಸಮಾಜದ ಕಲ್ಪನೆ ಅಡಿಯಲ್ಲಿ ಕಾಂಗ್ರೆಸ್ ಪಕ್ಷ ಕಾರ್ಯನಿರ್ವಹಿಸುತ್ತಿದೆ. ಹಾಗೆಂದ ಕೂಡಲೇ ಜನರ ಮನೆಗಳನ್ನು ಕಿತ್ತುಕೊಳ್ಳುವುದು ಅಲ್ಲ. ಅದಕ್ಕೆ ಸಂವಿಧಾನದಲ್ಲಿ ಅವಕಾಶವೂ ಇಲ್ಲ. ಇದನ್ನು ಜನರು ಅರ್ಥೆÊಸಿಕೊಳ್ಳಬೇಕು. ಸರ್ಕಾರದ ಯೋಜನೆಗಳು ಎಲ್ಲರಿಗೂ ತಲುಪಬೇಕು, ಸರ್ವ ಜನಾಂಗದವರಿಗೂ ನ್ಯಾಯ ಕೊಡೆಸುವುದು ಸಂಪತ್ತು ಹಂಚಿಕೆ ಎನ್ನುತ್ತಾರೆ. ಅದನ್ನು ಮೋದಿ ಅವರ ತಿರುಚಿ, ತಾಳಿ ಕಿತ್ತುಕೊಳ್ಳುತ್ತಾರೆ ಎಂದು ಜನರ ದಿಕ್ಕು ತಪ್ಪಿಸುವ ಹೇಳಿಕೆ ಕೊಟ್ಟಿದ್ದಾರೆ ಎಂದು ವಿವರಿಸಿದರು.

    ಕೃಷ್ಣೆಗೆ ಅನ್ಯಾಯ ಆಗುತ್ತಿದೆ :
    ಕೃಷ್ಣಾ ಮೇಲ್ದಂಡೆ ಹಂತ-೩ ಅನುಷ್ಠಾನ ವಿಳಂಬ ಆಗುತ್ತಿದೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಬ್ರಜೇಶಕುಮಾರ್ ತೀರ್ಪು ಬಂದು ೧೧ ವರ್ಷ ಕಳೆದರೂ ಇನ್ನೂ ಸಹ ನೀರಿನ ಹಂಚಿಕೆಯನ್ನು ಕೇಂದ್ರ ಸರ್ಕಾರ ಅಽಸೂಚನೆ ಹೊರಡಿಸಿಲ್ಲ. ಕಾವೇರಿ ವಿಚಾರ ಬಂದರೆ ಇಡೀ ನಾಡು ಎದ್ದು ನಿಲ್ಲುತ್ತದೆ. ಬೆಂಗಳೂರ ಹೊತ್ತಿ ಉರಿಯುತ್ತದೆ. ಕೃಷ್ಣೆಯ ವಿಚಾರದಲ್ಲಿ ಯಾರೂ ಕೇಳುವವರೇ ಇಲ್ಲವಾಗಿದೆ. ಇದೀಗ ಕೃಷ್ಣೆಯ ನೀರಿನ ಮೇಲೂ ಆ ಭಾಗದವರ ಕಣ್ಣು ಬಿದ್ದಿದೆ. ಪ್ರಧಾನಿ ಮೋದಿ ಎದುರಲ್ಲೇ ಮಾಜಿ ಪ್ರಧಾನಿ ದೇವೇಗೌಡರು ಸೂಕ್ಷ÷್ಮವಾಗಿ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಕೃಷ್ಣಾ ತೀರದ ಜನರು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.


    ಆಲಮಟ್ಟಿ ಜಲಾಶಯವನ್ನು ೫೧೯.೫೦ ರಿಂದ ೫೨೪.೨೫೬ ಮೀಟರ್ ಗೆ ಎತ್ತರಿಸಿ ೧೩೦ ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಇನ್ನೂ ಸಹ ನಮಗೆ ಸಾಧ್ಯವಾಗಿಲ್ಲ. ನೀರು ಹಂಚಿಕೆ ಅಽಸೂಚನೆಯನ್ನು ಹೊರಡಿಸದೇ ಕೇಂದ್ರ ಸರ್ಕಾರ ನಮಗೆ ಅನ್ಯಾಯ ಮಾಡುತ್ತಿದೆ. ಈ ಬಗ್ಗೆ ಪಕ್ಷಾತೀತವಾಗಿ ಧ್ವನಿ ಎತ್ತಬೇಕಾಗಿತ್ತು. ಆದರೆ, ನಮ್ಮ ದುರ್ದೈವ ಇದರಲ್ಲೂ ರಾಜಕೀಯ ನಡೆದಿದೆ. ಇದೇ ಕಾರಣಕ್ಕೆ ನಾನು ಪಾದಯಾತ್ರೆ, ಟ್ರ‍್ಯಾಕ್ಟರ್ ರ‍್ಯಾಲಿ ನಡೆಸಿದೆ. ಸದನದ ಒಳಗೆ, ಹೊರಗೆ ಹೋರಾಟ ಮಾಡಿದ್ದೇನೆ. ಆಗ ಕೃಷ್ಣೆಯ ನೀರಿನ ಮೇಲೆ ಆ ಭಾಗದವರ ಕಣ್ಣು ಬೀಳುತ್ತದೆ ಎಂದು ಎಚ್ಚರಿಸಿದ್ದೆ. ಆಗ ಯಾರೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಈಗ ದೇವೇಗೌಡರ ಬಾಯಲ್ಲೆ ಆ ಮಾತು ಬಂದಿದೆ. ಈಗಲೂ ನಾವು ಸುಮ್ಮನೆ ಇದ್ದರೆ ಉತ್ತರ ಕರ್ನಾಟಕಕ್ಕೆ ಉಳಿಗಾಲ ಇಲ್ಲ ಎಂದು ಆತಂಕ ಹೊರಹಾಕಿದರು.

    ಸುದ್ದಿಗೋಷ್ಠಿಯಲ್ಲಿ ದೇವೇಗೌಡರ ಹೇಳಿಕೆಯ ಆಡಿಯೋವನ್ನು ಕೇಳಿಸಿದ ಎಸ್.ಆರ್.ಪಾಟೀಲ, ಕೃಷ್ಣೆಯ ನೀರು ಉಳಿಸಿಕೊಳ್ಳಲು ದೊಡ್ಡಮಟ್ಟದ ಹೋರಾಟಕ್ಕೆ ಉತ್ತರ ಕರ್ನಾಟಕದ ಜನರು ಪಕ್ಷಬೇಧ ಮರೆತು ಮುಂದಾಗಬೇಕು. ವಿಜಯಪುರ ಸೇರಿ -Àಲಾನುಭವಿ ಜಿಲ್ಲೆಗಳಿಗೆ ಒಂಭತ್ತು ಉಪಯೋಜನೆಗಳಿಗೆ ೧೩೦ ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಈಗ ಕೃಷ್ಣೆಯ ನೀರನ್ನು ತಿರುಗಿಸಿಕೊಂಡು ಹೋದರೆ ನಾವೆಲ್ಲ ಬೀದಿಗೆ ಬಂದು ನಿಲ್ಲಬೇಕಾಗುತ್ತದೆ. ಪ್ರಾದೇಶಿಕ ಅಸಮಧಾನದಿಂದ ಉತ್ತರ ಕರ್ನಾಟಕ ಮೊದಲೇ ನಲುಗಿ ಹೋಗುತ್ತಿದೆ. ಇಂಥದ್ದರಲ್ಲಿ ಇರುವ ಜೀವನದಿ ಕೃಷ್ಣೆಯ ನೀರನ್ನು ಕಳೆದುಕೊಂಡು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಮೊದಲೇ ಎಚ್ಚೆತ್ತುಕೊಳ್ಳೋಣ. ದೇವೇಗೌಡರ ಹೀಗೆಲ್ಲ ಸುಖಾಸುಮ್ಮನೆ ಹೇಳುವವರಲ್ಲ. ಅವರ ಕಣ್ಣು ಬಿದ್ದಿದೆ. ಹುಷಾರಾಗಿರಬೇಕು ಎಂದು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts