More

    ತಾತ್ಕಾಲಿಕ ಲೆಔಟ್ಗಳಿಗೆ ಖಾತಾ ನೀಡಬೇಡಿ


    ಯಾದಗಿರಿ: ಇಲ್ಲಿನ ನಗರಸಭೆಯಲ್ಲಿ ಅಕಾರಿಗಳ ಮಿತಿಮೀರಿದ ಭ್ರಷ್ಟಾಚಾರದಿಂದ ಸಾರ್ವಜನಿಕರು ರೋಸಿ ಹೋಗಿದ್ದು, ಲಕ್ಷಾನುಕಟ್ಟಲೇ ಹಣ ಪಡೆದು, ತಾತ್ಕಾಲಿಕ ಲೆಔಟ್ಗಳಿಗೆ ಖಾತಾ ನಕಲು ನೀಡಲಾಗುತ್ತಿದೆ ಎಂದು ಆರೋಪಿಸಿ ಸೋಮವಾರ ಕಾರ್ಯಕರ್ತರು ಇಲ್ಲಿನ ಜಿಲ್ಲಾಕಾರಿಗೆ ಮನವಿ ಸಲ್ಲಿಸಿದರು.

    ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ಮಾತನಾಡಿ, ಯಾದಗಿರಿ (ಬಿ) ಗ್ರಾಮದ ಸವರ್ೆ ನಂ. 681/2,6,7,8,9 ರ, 4 ಎಕರೆ ಜಮೀನನ್ನು ಕೃಷಿಯೇತರ ಭೂಮಿಯನ್ನಾಗಿ ಅಭಿವೃದ್ಧಿಗೊಳಿಸಲು ಯುಡಾದಿಂದ ತಾತ್ಕಾಲಿಕ ಅನುಮೋದನೆ ನೀಡಲಾಗಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಲೇಔಟ್ ಮಾಲೀಕರಿಂದ ಲಕ್ಷಾಂತರ ಹಣ ಪಡೆದು, ನಿವೇಶನ ನೋಂದಣಿ ಮಾಡಿಸುತ್ತಿದ್ದಾರೆ. ತಾತ್ಕಾಲಿಕ ಆದೇಶದ ಮೇಲೆ ನಗರಸಭೆಯಲ್ಲಿ ಖಾತಾ ನಕಲು ಸಹ ಕೊಡಿಸಲಾಗುತ್ತಿದೆ. ನಗರಸಭೆಯಲ್ಲಿ ಇದೊಂದು ದಂಧೆಯಾಗಿದ್ದು, ಸಾರ್ವಜನಿಕರ ಬಳಿ ಅಕಾರಿಗಳು ನಿತ್ಯ ಸಾವಿರಾರು ಹಣ ಲಪಟಾಯಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ದಂಧೆಯಲ್ಲಿ ಉಪ ನೊಂದಣಾಕಾರಿಗಳೂ ಸಹ ಭಾಗಿಯಾಗಿದ್ದಾರೆ. ಯಾವುದೇ ಒಂದು ಪಟ್ಟಣದಲ್ಲಿ ಜಮೀನನ್ನು ಕೃಷಿಯೇತರ ಭೂಮಿಯನ್ನಾಗಿ ಅಭಿವೃದ್ದಿಗೊಳಿಸಬೇಕಾದರೆ, ಸಂಬಂಧಪಟ್ಟ ಪ್ರಾಕಾರದಿಂದ ಮೊದಲು ತಾತ್ಕಾಲಿಕ ಆದೇಶ ನೀಡಲಾಗುತ್ತದೆ. ಲೇಔಟ್ ಸಂಪೂರ್ಣ ಅಭಿವೃದ್ಧಿಯಾದ ನಂತರವಷ್ಟೇ ಬಡಾವಣೆಯ ಪೂರ್ಣ ಆದೇಶ ಕೊಡಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ನಗರಸಭೆ ಅಕಾರಿ ಹಾಗೂ ಸಿಬ್ಬಂದಿ ಸಕರ್ಾರಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿದರು.

    ಹಣದಾಸೆಗಾಗಿ ಮುಗ್ಧ ಜನರಿಗೆ ವಂಚಿಸಿ, ಅವರ ನಿವೇಶನಗಳಿಗೆ ಅನಕೃತವಾಗಿ ಖಾತಾ ನಕಲು ಕೊಡಿಸಲಾಗುತ್ತಿದೆ. ಆದರೆ ಮುಂದೆ ಮನೆ ಕಟ್ಟಿಕೊಳ್ಳಲು ಮತ್ತು ಬ್ಯಾಂಕ್ ಸಾಲ ಸಹ ಇವರಿಗೆ ಸಿಗುವುದಿಲ್ಲ. ಹೀಗಾಗಿ ತಾತ್ಕಾಲಿಕ ಲೆಔಟ್ ಪರವಾನಗಿ ಪಡೆದ ನಿವೇಶನಗಳನ್ನ ನೋಂದಣಿ ಮಾಡಬಾರದು. ಖಾತಾ ನಕಲು ಕೊಡಬಾರದು. ಅಲ್ಲದೆ ಪ್ರಕರಣದಲ್ಲಿ ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts