More

    ತಾಜ್ಯ ವಿಲೇ ಘಟಕ ಕೆಲಸ ಡಿಲೇ

    ಕುಮಟಾ: ತಾಲೂಕಿನ ಹನೇಹಳ್ಳಿ, ವಾಲಗಳ್ಳಿ, ಕಲಭಾಗ ಹಾಗೂ ಹೆಗಡೆ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಇತರ ಪಂಚಾಯಿತಿಗಳಲ್ಲಿ ಜಾಗದ ಸಮಸ್ಯೆಯಿಂದ ಯೋಜನೆ ನಿಧಾನಗತಿಯಲ್ಲಿ ಸಾಗಿದೆ.

    ಸ್ವಚ್ಛ ಭಾರತ ಯೋಜನೆಯಡಿ ಗ್ರಾಮ ಮಟ್ಟದಲ್ಲೂ ಕಸ ವಿಲೇವಾರಿ ಸಮರ್ಪಕವಾಗಿ ನಡೆಯಬೇಕು. ಪ್ಲಾಸ್ಟಿಕ್ ಮತ್ತು ಇತರ ಪರಿಸರ ಮಾರಕ ತ್ಯಾಜ್ಯಗಳನ್ನು ಬೇರ್ಪಡಿಸಿ ವಿಲೇವಾರಿ ಮಾಡಿ ಆದಾಯ ಗಳಿಸುವ ಉದ್ದೇಶವನ್ನು ಯೋಜನೆ ಒಳಗೊಂಡಿದೆ. ಕುಮಟಾದಲ್ಲಿ ಕಳೆದ 4 ವರ್ಷದಿಂದ ಕಸದ ವಾಹನಗಳು ಮನೆ ಬಾಗಿಲಿಗೆ ತೆರಳಿ ಒಣ ಹಾಗೂ ಹಸಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡುತ್ತಿವೆ. ಆದರೆ, ಪಟ್ಟಣ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ಮೂಡಿದ ಸ್ವಚ್ಛತೆ ಜಾಗೃತಿ ಗ್ರಾಮ ಮಟ್ಟದಲ್ಲಿ ಸಾಧ್ಯವಾಗಿಲ್ಲ.

    ಒಟ್ಟು 22ರ ಪೈಕಿ 17 ಗ್ರಾಪಂಗಳಲ್ಲಿ ತ್ಯಾಜ್ಯ ವಿಲೇವಾರಿ ಈವರೆಗೆ ಸಾಧ್ಯವಾಗಿಲ್ಲ. ಸದ್ಯ ಹನೇಹಳ್ಳಿ, ವಾಲಗಳ್ಳಿ, ಹೆಗಡೆ ಹಾಗೂ ಕಲಭಾಗ ಪಂಚಾಯಿತಿಗಳಲ್ಲಿ ಜಾಗ ಗುರುತಿಸಿ ವಿಲೇವಾರಿಗೆ ಪೂರಕ ಕಾಮಗಾರಿ ನಡೆಸಲಾಗುತ್ತಿದೆ.

    ಸದ್ಯ 4 ಪಂಚಾಯಿತಿಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಆರಂಭವಾದರೂ ಕೇವಲ ಒಣ ಕಸ ಮಾತ್ರ ಸಂಗ್ರಹಿಸಿ ಬೇರ್ಪಡಿಸಿ ವಿಲೇವಾರಿ ಮಾಡುವ ಗುರಿ ಹೊಂದಲಾಗಿದೆ. ಕಸ ಸಂಗ್ರಹಣೆಗೆ ಇನ್ನೂ ವಾಹನ ಖರೀದಿ ಆಗಿಲ್ಲ.

    ಜಿಲ್ಲೆಯ ಒಟ್ಟು 231 ಗ್ರಾಪಂಗಳ ಪೈಕಿ 8 ಕಡೆ ಈಗಾಗಲೇ ಒಣ ತ್ಯಾಜ್ಯ ವಿಲೇವಾರಿ ಘಟಕ ನಿರ್ವಿುಸಲಾಗಿದೆ. 34 ಕಡೆ ಕಾಮಗಾರಿ ಪ್ರಗತಿಯಲ್ಲಿದೆ. 17 ಕಡೆ ಅನುಮೋದನೆ ಸಿಕ್ಕಿದ್ದು ಶೀಘ್ರ ಕೆಲಸ ಪ್ರಾರಂಭವಾಗಲಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಎಲ್ಲ ಗ್ರಾ.ಪಂ. ಗಳಲ್ಲಿ ಘಟಕ ನಿರ್ವಿುಸಲಾಗುತ್ತಿದೆ.

    ತಾಲೂಕಿನ ಎಲ್ಲ ಪಂಚಾಯಿತಿಗಳಲ್ಲೂ ತ್ಯಾಜ್ಯ ವಿಲೇವಾರಿ ಘಟಕ ನಿರ್ವಣಕ್ಕೆ ಯತ್ನ ನಡೆದಿದೆ. ಆದರೆ, ಬಾಡ, ಕಾಗಾಲ, ಹೊಲನಗದ್ದೆ ಹಾಗೂ ದೇವಗಿರಿ ಗ್ರಾಪಂಗಳಲ್ಲಿ ಜಾಗದ ಕೊರತೆ ಇದೆ. ಅರಣ್ಯ ಇಲಾಖೆ ಜಾಗ ಪಡೆಯುವ ಪ್ರಕ್ರಿಯೆಗೆ ಹೆಚ್ಚು ಸಮಯ ಬೇಕಾಗುತ್ತದೆ.

    | ಸಿ.ಟಿ. ನಾಯ್ಕ ಕುಮಟಾ ತಾಪಂ ಇಒ

    ಹೆಗಡೆ ಪಂಚಾಯಿತಿ ಸಮೀಪ ಖಾಲಿ ಇದ್ದ ಸಂತೆಕಟ್ಟೆಯನ್ನೇ ಕಸ ವಿಂಗಡಣೆ ಕಾರ್ಯಕ್ಕೆ ಬಳಸಲು ಸಿದ್ಧತೆ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಹಸಿಕಸದ ಸಮಸ್ಯೆ ಅಷ್ಟಾಗಿ ಇಲ್ಲ. ಹೀಗಾಗಿ ಇಲ್ಲಿ ಒಣ ಕಸವನ್ನು ಮಾತ್ರ ಜನರಿಂದ ಸಂಗ್ರಹಿಸಿ ವಿಲೇವಾರಿ ಮಾಡುವ ಪ್ರಯತ್ನ ನಡೆದಿದೆ.

    | ಶಿವಾನಂದ ಜೋಯಿಸ್ಹೆಗಡೆ ಪಂಚಾಯಿತಿ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts