More

    ತಾಂತ್ರಿಕತೆಯಿಂದ ಶೈಕ್ಷಣಿಕ ಅಭಿವೃದ್ಧಿ



    ನರಗುಂದ: ಶೈಕ್ಷಣಿಕವಾಗಿ ಮುಂದುವರಿಯಲು ವಿದ್ಯಾರ್ಥಿಗಳಿಗೆ ವಿವಿಧ ತಾಂತ್ರಿಕತೆಗಳ ಅವಶ್ಯಕತೆಯಿದೆ ಎಂದು ಬಸವೇಶ್ವರ ಶಿಕ್ಷಣ ಸಂಸ್ಥೆ ಚೇರ್ಮನ್ ಚನ್ನಬಸಪ್ಪ ಕಂಠಿ ಹೇಳಿದರು.

    ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ ನಿಮಿತ್ತ ಪಟ್ಟಣದ ಬಸವೇಶ್ವರ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2020 ನೇ ಸಾಲಿನ ಐಟಿ ಚಾಂಪ್ಸ್ ಕಂಪ್ಯೂಟರ್ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದ ಮೊಟ್ಟ ಮೊದಲ ಶಿಕ್ಷಕಿಯಾಗಿ ಅಪಾರ ಸೇವೆ ಸಲ್ಲಿಸಿರುವ ಕೀರ್ತಿ ಸಾವಿತ್ರಿಬಾಯಿ ಫುಲೆಯವರಿಗೆ ಸಲ್ಲುತ್ತದೆ. ಪ್ರತಿಯೊಬ್ಬ ಹೆಣ್ಣು ಕಡ್ಡಾಯ ಶಿಕ್ಷಣ ಪಡೆಯಬೇಕೆಂಬುದು ಸಾವಿತ್ರಿಬಾಯಿಯವರ ಮಹದಾಸೆಯಾಗಿತ್ತು. ವಿದ್ಯಾರ್ಥಿಗಳು ಆದರ್ಶ ಬದುಕಿನ ಉತ್ತಮ ಧೋರಣೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಶೈಕ್ಷಣಿಕ ರಂಗದಲ್ಲಿ ಹೆಮ್ಮರವಾಗಿ ಬೆಳೆಯುವಂತಾಗಬೇಕು ಎಂದು ತಿಳಿಸಿದರು.

    ಶಾಲೆಯ ಎಲ್​ಕೆಜಿಯಿಂದ 9ನೇ ತರಗತಿಯವರೆಗಿನ ಎಲ್ಲ ಮಕ್ಕಳಿಂದ ಆಧುನಿಕ ತಂತ್ರಜ್ಞಾನದ ರೋಬಾಟ್, ಮಾರ್ಡನ್ ಟೆಕ್ನಾಲಜಿ, ಗಣಕ ಯಂತ್ರದ ಉಪಯೋಗ, ಮೆಟ್ರೋ ತಂತ್ರಜ್ಞಾನ, ಗೂಗಲ್, ವೈಫೈ ಹಾಗೂ ವಿವಿಧ ಸಾಫ್ಟ್​ವೇರ್​ಗಳ ಪ್ರದರ್ಶನ ಸೇರಿ ಒಟ್ಟು 50 ಕ್ಕೂ ಅಧಿಕ ತಂತ್ರಜ್ಞಾನಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಶಾಲಾ ವಿದ್ಯಾರ್ಥಿಗಳಾದ ವೈಷ್ಣವಿ ಮಿಕ್ಕಲ್, ಅಪೂರ್ವ ಹುಣಸೀಮರದ, ಹರ್ಷ ನಡಮನಿ, ಅಮೀನ ನದಾಫ್, ಜ್ಯೋತಿ ಹನಸಿ, ಸುಷ್ಮೀತ ದೇಮಶೆಟ್ಟಿ ಅವರು ವಿವಿಧ ತಂತ್ರಜ್ಞಾನದ ವಸ್ತು ಪ್ರದರ್ಶನಗಳ ಬಗ್ಗೆ ವಿವರಿಸಿದರು.

    ಶಿಕ್ಷಣ ಸಂಸ್ಥೆ ನಿರ್ದೇಶಕ ಮಂಡಳಿ ಸದಸ್ಯರಾದ ಶಿವಕುಮಾರ ಕಂಠಿ, ನಾಗಪ್ಪ ಕಂಠಿ, ಲೋಹಿತ ಗುಂಡಾರ, ಕಿರಣಕುಮಾರ ಕೊನೆಸಾಗರ, ಶಾಲೆ ಮುಖ್ಯೋಪಾಧ್ಯಾಯಿನಿ ಆಫ್ರಿನ್ ಪಟೇಲ್, ಕಾವೇರಿ ಪಾಟೀಲ, ರಾಜೇಸಾಬ್ ಆಸೇಖಾನವರ, ಪ್ರಶಾಂತ ಪಲ್ಲೇದ, ವಿಠಲ ಭೂತಾಳೆ, ಸಂಗೀತಾ ಹಡಪದ, ಸೌಮ್ಯಾ ಪೇಠೆ, ಕಾವೇರಿ ಸಿರಿಯಣ್ಣವರ, ಅನ್ನಪೂರ್ಣ ಯಳಮಲಿ, ಅನ್ನಪೂರ್ಣ ಪೇಠೆ ಇತರರು ಉಪಸ್ಥಿತರಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts