More

    ತಲಕಾಡಲ್ಲಿ ನೀರು ಪರೀಕ್ಷಾ ವಿಧಾನದ ಪ್ರಾತ್ಯಕ್ಷಿಕೆ

    ತಲಕಾಡು: ಇಲ್ಲಿನ ನಾಯಕರ ಸಮುದಾಯ ಭವನದಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿಯಿಂದ ಆಗಮಿಸಿದ್ದ ಪ್ರಯೋಗಾಲಯದ ಪರೀಕ್ಷಕರು ಪ್ರಾತ್ಯಕ್ಷಿಕೆ ಮೂಲಕ ಕುಡಿಯುವ ನೀರಿನ ಪರೀಕ್ಷಾ ವಿಧಾನಗಳನ್ನು ತಿಳಿಸಿಕೊಟ್ಟರು.


    ಪಂಚಾಯಿತಿ ವ್ಯಾಪ್ತಿಯ ವಿವಿಧ ಬೋರ್‌ವೆಲ್ ಹಾಗೂ ತೊಟ್ಟಿಗಳಿಂದ ಬಾಟಲ್ಗಳಲ್ಲಿ ಶೇಖರಿಸಿ ತಂದಿದ್ದ ನೀರನ್ನು ಪಂಚಾಯಿತಿ ವಾಟರ್‌ಮನ್‌ಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಇಲ್ಲಿ ತಿಳಿಸಿ ಕೊಡಲಾಯಿತು.


    ಬೋರ್‌ವೆಲ್ ನೀರನ್ನು ಸರಳ ವಿಧಾನದಲ್ಲಿ ಗುಣಮಟ್ಟ ಪರೀಕ್ಷೆ ನಡೆಸುವ ವಿಧಾನವನ್ನು, ಒಟ್ಟು ನೀರಿನ ಗಡಸುತನ, ಫ್ಲೋರೈಡ್, ಕ್ಲೋರೈಡ್, ಕಬ್ಬಿಣ, ನೈಟ್ರೇಟ್ ಅಂಶಗಳು ಎಷ್ಟು ಪ್ರಮಾಣದಲ್ಲಿದೆ ಎಂದು ಪರೀಕ್ಷೆಗೆ ಒಳಪಡಿಸಲಾಯಿತು.


    ಕಲುಷಿತ ನೀರಿನ ಸೇವನೆಯಿಂದ ಕಿಡ್ನಿಯ ಮೇಲೆ ಆಗುವ ದುಷ್ಪಪರಿಣಾಮ, ಒಣಚರ್ಮ, ಕೂದಲು ಉದುರುವಿಕೆ, ಚರ್ಮದ ಶುಷ್ಕತೆ ಮತ್ತು ತುರಿಕೆ, ವಿವಿಧ ಆರೋಗ್ಯದ ಸಮಸ್ಯೆಗೆ ಕಲುಶಿತ ನೀರಿನ ಸೇವನೆ ಕಾರಣವಾಗಲಿದೆ ಎಂದು ಜಾಗೃತಿ ಮೂಡಿಸಲಾಯಿತು.


    ಗ್ರಾಪಂ ಕಾರ್ಯದರ್ಶಿ ಚಿಕ್ಕರಾಜಶೆಟ್ಟಿ, ಜಿಪಂ ಪ್ರಯೋಗಾಲಯ ಜಲ ಪರೀಕ್ಷರಾದ ರಾಜಶೇಖರ್, ರಾಮ್ ಶೆಟ್ಟಿ, ಪಂಚಾಯಿತಿ ವಾಟರ್‌ಮನ್‌ಗಳು, ಅಂಗನವಾಡಿ ಗೂ ಆಶಾ ಕಾರ್ಯಕರ್ತೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts