More

    ತರಕಾರಿ ಮಾರುಕಟ್ಟೆ ನಿರ್ಮಾಣ

    ಚಿತ್ತಾಪುರ: ಪಟ್ಟಣದ ಹೃದಯ ಭಾಗದಲ್ಲಿ ಓರಿಯಂಟ್ ಸಿಮೆಂಟ್ ಲಿಮಿಟೆಡ್‌ನಿಂದ ೭೫ ಲಕ್ಷ ರೂ. ಖರ್ಚಿನಲ್ಲಿ ಬೃಹತ್ ತರಕಾರಿ ಮಾರುಕಟ್ಟೆಯನ್ನು ನಿರ್ಮಿಸಿ, ಜನರಿಗೆ ಅನುಕೂಲ ಕಲ್ಪಿಸಲಾಗಿದೆ. ತಾಲೂಕಿನ ಜನರು ವಿಶೇಷವಾಗಿ ರೈತರು, ಖರೀದಿದಾರರಿಗೆ ತರಕಾರಿ ವ್ಯಾಪಾರ ವಹಿವಾಟಿಗೆ ಒಂದೇ ಕಡೆ ಮಾರುಕಟ್ಟೆ ಒದಗಿಸಿ ನೆರವು ನೀಡಲು ಸಿ.ಕೆ.ಬಿರ್ಲಾ ಗ್ರೂಪ್ ಆಫ್ ಕಂಪನೀಸ್‌ನ ಓರಿಯಂಟ್ ಸಿಮೆಂಟ್ ಕಂಪನಿಯೂ ೭೫ ಲಕ್ಷ ರೂ. ಖರ್ಚು ಮಾಡಿ, ೩೮ ಮಳಿಗೆಗಳನ್ನು ನಿರ್ಮಿಸಿಕೊಟ್ಟಿದೆ.
    ತಾಲೂಕಿನಲ್ಲಿರುವ ಕಂಪನಿಯೂ ಇಲ್ಲಿನ ಸ್ಥಳೀಯ ಸಾರ್ವಜನಿಕರಿಗೆ, ಸಮಾಜಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ತರಕಾರಿ ಮಾರುಕಟ್ಟೆ ನಿರ್ಮಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಮಾರುಕಟ್ಟೆಯಿಂದ ರಸ್ತೆ ಬದಿ ಕುಳಿತು ತರಕಾರಿ ಮಾರುವವರಿಗೆ ನೆಲೆ ಒದಗಿಸಿದಂತಾಗಿದೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts