More

    ತರಕಾರಿ ಖರೀದಿಗೆ ಮುಗಿಬಿದ್ದ ಜನ

    ರೋಣ: ಪಟ್ಟಣದ ಹೊಸ ಸಂತೆ ಮಾರುಕಟ್ಟೆಯಲ್ಲಿ ಗುರುವಾರ ತರಕಾರಿ ಖರೀದಿಗೆ ಏಕಾಏಕಿ ನೂರಾರು ಜನರು ಸೇರಿದ್ದರು. ‘ಎಲ್ಲರೂ ನಿಮ್ಮ ನಿಮ್ಮ ಮನೆಗಳಿಗೆ ಹೋಗಿ’ ಎಂದು ಪೊಲೀಸರು ಮನವಿ ಮಾಡಿದರೂ ಯಾರೊಬ್ಬರು ಕ್ಯಾರೆ ಎನ್ನಲಿಲ್ಲ. ಹೀಗಾಗಿ ಪೊಲೀಸರು ಲಾಠಿ ರುಚಿ ತೋರಿಸಿದ್ದರಿಂದ ವ್ಯಾಪಾರಸ್ಥರು, ಸಾರ್ವಜನಿಕರು ಚದುರಿ ಅಲ್ಲಿಂದ ಮನೆಗಳತ್ತ ಓಡಿದರು.

    ಬೆಳಗ್ಗೆ 8 ಗಂಟೆಯೊಳಗೆ ಎಲ್ಲ ವ್ಯವಹಾರ ಮುಗಿಸಿ ಜಾಗ ಖಾಲಿ ಮಾಡಬೇಕು ಎಂದು ಪ್ರಚಾರ ಮಾಡುತ್ತಿದ್ದ ಪುರಸಭೆಯವರು ಪಟ್ಟಣದ ಮುಖ್ಯ ರಸ್ತೆಯಲ್ಲಿ ಅಂಗಡಿಗಳನ್ನೆಲ್ಲ ಬಂದ್ ಮಾಡಿಸಿದರು. ಈ ವೇಳೆಗೆ ಸಂತೆ ಮಾರುಕಟ್ಟೆಯಲ್ಲಿ ಜನಜಂಗುಳಿ ತುಂಬಿರುವುದನ್ನು ಮನಗಂಡ ಪುರಸಭೆ ಮುಖ್ಯಾಧಿಕಾರಿ ನೂರುಲ್ಲಾಖಾನ್ ಸಂತೆಯನ್ನು ತೆರವುಗೊಳಿಸುವಂತೆ ಸೂಚಿಸಿದರು. ಈ ವೇಳೆ ಅಲ್ಲಿದ್ದ ಯುವಕನೊಬ್ಬ ತನ್ನ ಮೊಬೈಲ್​ನಲ್ಲಿ ಪುರಸಭೆ ಮುಖ್ಯಾಧಿಕಾರಿಯ ವಿಡಿಯೋ ಮಾಡುವುದರ ಜೊತೆಗೆ ಅವರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದನ್ನು ಮನಗಂಡ ಪಿಎಸ್​ಐ ಪರಮೇಶ್ವರ ಕವಟಗಿ ಆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ಠಾಣೆಗೆ ಕರೆದೊಯ್ದು ಮತ್ತೆ ಥಳಿಸಿದರು.

    ಪಟ್ಟಣದ ಪುರಸಭೆ ಸಭಾಭವನದಲ್ಲಿ ಕಾಯಿಪಲ್ಲೆ ವ್ಯಾಪಾರಸ್ಥರ ಸಭೆ ನಡೆಸಿದ ಪುರಸಭೆ ಮುಖ್ಯಾಧಿಕಾರಿ ನೂರುಲ್ಲಾಖಾನ್, ಪಟ್ಟಣದ 22 ವಾರ್ಡ್​ಗಳಿಗೆ ಒಬ್ಬೊಬ್ಬರಂತೆ ತರಕಾರಿ ವ್ಯಾಪಾರಸ್ಥರನ್ನು ನಿಯುಕ್ತಿಗೊಳಿಸಲಾಗಿದ್ದು, ಅವರು ಶುಕ್ರವಾರದಿಂದ ಪ್ರತಿ ದಿನ ಬೆಳಗ್ಗೆ 6 ರಿಂದ 9 ಗಂಟೆವರೆಗೆ ಮನೆ ಮನೆಗೆ ತೆರಳಿ ಕಾಯಿಪಲ್ಲೆ ಸರಬುರಾಜಿಗೆ ವ್ಯವಸ್ಥೆ ಕಲ್ಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts