More

    ತಬ್ಲಿಘಿಗಳಿಂದಲೇ ವೃದ್ಧೆಗೆ ಸೋಂಕು?

    ಗದಗ: ಜಿಲ್ಲೆಯಲ್ಲಿ ಕರೊನಾ ಸೋಂಕಿಗೆ ಬಲಿಯಾದ ವೃದ್ಧೆಗೆ ಸೋಂಕು ತಗುಲಿದ್ದು ಹೇಗೆ ಎಂದು ತಿಳಿಯಲು ಜಿಲ್ಲಾಡಳಿತ ನೇಮಿಸಿರುವ ಟಾಸ್ಕ್ ಫೋರ್ಸ್ ಪತ್ತೆ ಕಾರ್ಯ ಆರಂಭಿಸಿದ್ದು, ದೆಹಲಿಯ ತಬ್ಲಿಘಿ ಜಮಾತ್​ಗೆ ಹೋಗಿ ಬಂದವರ ಸಂಪರ್ಕದಿಂದಲೇ ವೃದ್ಧೆಗೆ ಬಂದಿದೆ ಎಂಬ ಅನುಮಾನ ಶುರುವಾಗಿದೆ.

    ಮೂಲಗಳ ಪ್ರಕಾರ ದೆಹಲಿಯ ನಿಜಾಮುದ್ದೀನ್ ಮರ್ಕಜ್​ನಲ್ಲಿ ಮಾರ್ಚ್ 14, 15 ರಂದು ಜರುಗಿದ ತಬ್ಲಿಘಿ ಜಮಾತ್ ಧಾರ್ವಿುಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇನ್ನೂ ಮೂವರು ನಗರದಲ್ಲಿದ್ದು, ಅವರಿನ್ನೂ ತಪಾಸಣೆ ಮಾಡಿಸಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ.

    ಈ ಮೂವರೂ ಕಂಟೇನ್​ವೆುಂಟ್ ಪ್ರದೇಶದ ಸಮೀಪದಲ್ಲಿದ್ದು, ಇವರ ಸಂಪರ್ಕಕ್ಕೆ ಬಂದಿರುವ ಅಥವಾ ಇವರ ಸಂಪರ್ಕಕ್ಕೆ ಬಂದಿದ್ದ ಬೇರೆಯವರಿಂದ ಸೋಂಕು ವೃದ್ಧೆಗೆ ತಗುಲಿರಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ.

    ಏ. 7ರಂದು ಗದಗನಲ್ಲಿ ಮೊದಲ ಕರೊನಾ ಪ್ರಕರಣ ದೃಢಪಟ್ಟಿತ್ತು. ರಂಗನವಾಡಿ ಗಲ್ಲಿಯ 80 ವರ್ಷದ ವೃದ್ಧೆಗೆ ಸೋಂಕು ಇರುವುದು ಖಚಿತವಾಗಿತ್ತು. ವೃದ್ಧೆಯ ಸಂಪರ್ಕದಲ್ಲಿದ್ದ ಜನ ಮತ್ತು ಚಿಕಿತ್ಸೆ ನೀಡಿದ ವೈದ್ಯರು, ಸಿಬ್ಬಂದಿ ಸೇರಿದಂತೆ ಈವರೆಗೆ ಒಟ್ಟು 60 ಜನರ ಮಾದರಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅವರೆಲ್ಲರ ವರದಿಗಳು ನಕಾರಾತ್ಮಕವಾಗಿ ಬಂದಿವೆ.

    ಮುಖ್ಯವಾಗಿ ವೃದ್ಧೆಯ ಸಂಪರ್ಕದಲ್ಲಿದ್ದ ಗೋವಾಕ್ಕೆ ಹೋಗಿ ಬಂದವರು, ಅಂತಾರಾಜ್ಯದಿಂದ ಬಂದಿದ್ದಾನೆ ಎನ್ನಲಾದ ಅಜ್ಜಿಯ ಮೊಮ್ಮಗನ ವೈದ್ಯಕೀಯ ವರದಿಯೂ ನಕಾರಾತ್ಮಕವಾಗಿ ಬಂದಿದೆ. ಇವರ ವೈದ್ಯಕೀಯ ವರದಿ ನೆಗೆಟಿವ್ ಎನ್ನುವುದಾದರೆ ವೃದ್ಧೆಗೆ ಸೋಂಕು ತಗುಲಿದ್ದು ಯಾವ ಮೂಲದಿಂದ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸ ನಡೆದಿದೆ.

    ದೆಹಲಿ ಸಭೆಗೆ ಹೋಗಿ ಬಂದವರು ಕೆಲವರು ಇದೇ ಏರಿಯಾದಲ್ಲಿದ್ದು ಅವರಿಂದಲೇ ಸೋಂಕು ಬಂದಿದೆ ಎಂದು ಕೆಲವು ಸ್ಥಳೀಯರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.

    ಇಲ್ಲಿಯವರೆಗೆ ದೆಹಲಿಗೆ ಹೋಗಿ ಬಂದ 13 ಜನರ ತಪಾಸಣೆ ಆಗಿದ್ದು ಇವರ ವರದಿ ನೆಗೆಟಿವ್ ಬಂದಿವೆ. ಇವರೆಲ್ಲ ಕಾಯ್ದಿರಿಸಿದ ಬೋಗಿಗಳಲ್ಲಿ ಬಂದಿದ್ದ ಕಾರಣದಿಂದ ರೈಲ್ವೆ ಇಲಾಖೆಗೆ ಸುಲಭವಾಗಿ ಮಾಹಿತಿ ಸಿಕ್ಕಿತ್ತು.

    ಆದರೆ ದ್ವಿತೀಯ ದರ್ಜೆ ಬೋಗಿಗಳಲ್ಲಿ ದೆಹಲಿಗೆ ಹೋಗಿ ಬಂದವರ ಮಾಹಿತಿ ಲಭ್ಯವಾಗಿಲ್ಲ. ಸಾಮಾನ್ಯ ಬೋಗಿಯಲ್ಲಿ ಮೂವರು ಬಂದಿರಬಹುದೆಂದು ಅನುಮಾನವಿದ್ದು ಅವರನ್ನು ಪತ್ತೆ ಮಾಡಿ ಪರೀಕ್ಷೆಗೆ ಒಳಪಡಿಸಲು ಜಿಲ್ಲಾಡಳಿತ ಹರಸಾಹಸ ಮಾಡುತ್ತಿದೆ.

    ದೆಹಲಿ ಮಸೀದಿಗೆ ಹೋಗಿ ಬಂದಿರುವ 13 ಜನರಲ್ಲದೇ ಇನ್ನೂ ಮೂರ್ನಾಲ್ಕು ಜನರು ಗದಗ ನಗರದಲ್ಲಿದ್ದಾರೆ. ಅದೂ ನಿಯಂತ್ರಿತ ಪ್ರದೇಶ ಎಂದು ಘೊಷಣೆ ಮಾಡಿರುವ ರಂಗನವಾಡಿ ಗಲ್ಲಿ, ಎಸ್.ಎಂ. ಕೃಷ್ಣಾ ನಗರ ಆಸುಪಾಸಿನಲ್ಲಿಯೇ ಇದ್ದಾರೆ ಎಂಬ ಗುಸುಗುಸು ಕೇಳಿಬಂದಿದೆ. ದೆಹಲಿಗೆ ಹೋಗಿ ಬಂದಿರುವ 13 ಜನರನ್ನು ವಿಚಾರಣೆಗೆ ಒಳಪಡಿಸಿದರೆ ಇನ್ನಷ್ಟು ಮಾಹಿತಿ ಲಭ್ಯವಾಗಬಹುದು ಎಂದು ಜನರು ಒತ್ತಾಯಿಸುತ್ತಿದ್ದಾರೆ.

    ಎಸ್ಪಿ ಎಚ್ಚರಿಕೆ: ಶುಕ್ರವಾರ ಎಸ್ಪಿ ಯತೀಶ್ ಬಿಡುಗಡೆ ಮಾಡಿರುವ ವಿಡಿಯೋ ಸಂದೇಶದಲ್ಲಿ, ದೆಹಲಿ ಸಭೆಗೆ ಹೋಗಿ ಬಂದವರು ಕೂಡಲೇ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕು. ಉದಾಸೀನ ಮಾಡಿ ಸುಮ್ಮನೆ ಕುಳಿತಿದ್ದು ಪೊಲೀಸರಿಗೆ ಗೊತ್ತಾದರೆ ಅಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ. ಪೊಲೀಸ್ ಇಲಾಖೆಯ ಎಚ್ಚರಿಕೆ ಸಂದೇಶ ನಗರದಲ್ಲಿ ದೆಹಲಿಗೆ ಹೋಗಿ ಬಂದವರು ಇದ್ದಾರೆ ಎಂಬ ಅನುಮಾನ ಹುಟ್ಟಿಸಿದೆ.

    ವೃದ್ಧೆಗೆ ಸೋಂಕು ಹೇಗೆ ತಗುಲಿದೆ ಎಂಬುದು ಇನ್ನೂ ಪತ್ತೆಯಾಗಿಲ್ಲ. ನಮ್ಮ ಟಾಸ್ಕ್ಫೋರ್ಸ್ ತನಿಖೆ ಮಾಡುತ್ತಿದೆ. ಸದ್ಯಕ್ಕೆ ಏನನ್ನೂ ಹೇಳಲು ಆಗುವುದಿಲ್ಲ. ದೆಹಲಿ ಸಭೆಗೆ ಹೋಗಿ ಬಂದು, ತಪಾಸಣೆ ಮಾಡಿಸಿಕೊಳ್ಳದೇ ಇರಬಹುದಾದವರನ್ನು ಹುಡುಕುತ್ತಿದ್ದೇವೆ

    |ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts