More

    ತಟ್ಟಿಹಳ್ಳದಲ್ಲಿ ಶಿಲಾಚಿತ್ರಗಳು ಪತ್ತೆ

    ಹಳಿಯಾಳ: ತಾಲೂಕಿನ ಹವಗಿ ಗ್ರಾಮದ ತಟ್ಟಿಹಳ್ಳದಲ್ಲಿ ಇತಿಹಾಸ ಪೂರ್ವದ(ಪ್ರಾಗೈತಿಹಾಸಿಕ) ಶಿಲಾಚಿತ್ರಗಳು ಪತ್ತೆಯಾಗಿವೆ.

    ಹಳಿಯಾಳದ ಇತಿಹಾಸ ಹಾಗೂ ಪ್ರಾಚ್ಯ ವಸ್ತುಗಳ ಸಂಶೋಧಕರಾದ ಡಾ.ಶಿವಾನಂದ ಎಸ್. ಕಲ್ಲೂರ ಅವರು ಈ ಶಿಲಾಚಿತ್ರಗಳನ್ನು ಪತ್ತೆ ಮಾಡಿ ಅವುಗಳ ಅಧ್ಯಯನ ಆರಂಭಿಸಿದ್ದಾರೆ.

    ತಮ್ಮ ಸಂಶೋಧನೆಯ ಕುರಿತು ‘ವಿಜಯವಾಣಿ’ ಜತೆ ಮಾತನಾಡಿದ ಡಾ. ಕಲ್ಲೂರ ಅವರು ‘ಕಳೆದ ವರ್ಷ ತಾಲೂಕಿನಲ್ಲಿ ಉಂಟಾದ ನೆರೆಯಿಂದಾಗಿ ತಟ್ಟಿಹಳ್ಳದಲ್ಲಿ ನೀರು ಉಕ್ಕೇರಿ ಬಂದು ಭೂಮಿಯ ಒಡಲಿನಲ್ಲಿ ಅಡಗಿದ ಬೃಹತ್ ಬಂಡೆಗಳು ಹೊರಬಂದಿವೆ. ಅಂತಹ ಕೆಲ ಬೃಹತ್ ಬಂಡೆಗಳ ಮೇಲೆ ಜಿಂಕೆಗಳ ಹಿಂಡಿನ ಚಿತ್ರ ಬಿಡಿಸಲಾಗಿದೆ. ಆದಿಮಾನವನ ಕಾಲದಲ್ಲಿ ಈ ವನ್ಯ ಪ್ರಾಣಿಗಳನ್ನು ಧಾರ್ವಿುಕ ದೃಷ್ಟಿಯಿಂದ ನೋಡಿ ಪೂಜ್ಯ ಭಾವನೆಯಿಂದ ಅವುಗಳನ್ನು ಚಿತ್ರಿಸಲಾಗಿದೆ ಎಂಬ ವಿಷಯ ಇಲ್ಲಿ ವ್ಯಕ್ತವಾಗುತ್ತಿದೆ. ಆದಿಮಾನವನು ತನ್ನ ದಿನನಿತ್ಯದ ಕಾರ್ಯಗಳಿಗೆ ಬಳಸುತ್ತಿದ್ದ ಸಲಕರಣೆಗಳು ಈ ಹಳ್ಳದಲ್ಲಿನ ಬಂಡೆಗಳ ಅಕ್ಕಪಕ್ಕದಲ್ಲಿಯೇ ಇರುವ ಸಾಧ್ಯತೆಗಳಿದ್ದು, ಅವುಗಳನ್ನು ಪತ್ತೆ ಮಾಡುವ ಅವಶ್ಯಕತೆಯಿದೆ. ಹವಗಿ ಹಳ್ಳದ ಪಾತ್ರದಲ್ಲಿ ಸಂಶೋಧನೆ ನಡೆಸಲಾಗುವುದು. ಈ ಬಂಡೆ ದೊರೆತಿರುವ ಸ್ಥಳವನ್ನು ಸಂರಕ್ಷಿಸಿಡಬೇಕು, ಭವಿಷ್ಯದಲ್ಲಿ ಈ ಸ್ಥಳ ಪ್ರವಾಸಿ ತಾಣವೂ ಆಗಬಹುದು ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts