More

    ಡೌಗಿ ನಾಲೆಗೆ ಹರಿದ ಕೆರೆ ನೀರು

    ಅಳ್ನಾವರ: ಖಾಲಿಯಾದ ಪಟ್ಟಣದ ಡೌಗಿ ನಾಲೆಗೆ ತಾಲೂಕಿನ ಹುಲಿಕೇರಿ ಗ್ರಾಮದ ಇಂದಿರಮ್ಮನ ಕೆರೆಯ ನೀರನ್ನು ಶನಿವಾರದಿಂದ ಹರಿಸಲು ಆರಂಭಿಸಲಾಯಿತು. ಕಳೆದ ಆರು ವರ್ಷಗಳಿಂದ ಪ್ರತಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿತ್ತು. ಆಗ ಸುತ್ತಲಿನ ಹೊಲಗಳಲ್ಲಿದ್ದ ಬೋರ್​ವೆಲ್​ಗಳ ನೀರನ್ನು ಟ್ಯಾಂಕರ್​ಗಳ ಮೂಲಕ ಸಂಗ್ರಹಿಸಿ ಎಂಟು ದಿನಗಳಿಗೊಮ್ಮೆ ಮನೆಗಳ ನಲ್ಲಿಗಳಿಗೆ ನೀಡಲಾಗುತ್ತಿತ್ತು. ಕಳೆದ ಆಗಸ್ಟ್​ನಲ್ಲಿ ಅತಿವೃಷ್ಟಿಯಿಂದಾಗಿ ಡೌಗಿ ನಾಲೆಯ ಬಾಂದಾರದ ಅಕ್ಕ ಪಕ್ಕದಲ್ಲಿ 15 ಅಡಿಗಳಷ್ಟು ಅಗಲ ಮಣ್ಣು ಕೊಚ್ಚಿಕೊಂಡು ಹೋಗಿತ್ತು. ಇದರಿಂದ ನೀರು ಸಂಗ್ರಹಗೊಳ್ಳದಂತೆ ಆಗಿತ್ತು.ಇತ್ತೀಚೆಗೆ ಜಿಲ್ಲಾಡಳಿತದ ನಿರ್ದೇಶನದಂತೆ 45 ಲಕ್ಷ ರೂಪಾಯಿ ವೆಚ್ಚದಲ್ಲಿ ಡೌಗಿ ನಾಲೆಯಲ್ಲಿ ನೀರು ಸಂಗ್ರಹಗೊಳ್ಳುವಂತೆ ದುರಸ್ತಿ ಮಾಡಲಾಗಿದೆ.

    ಫೆ. 20ರಂದು ನಡೆದ ಪಟ್ಟಣ ಪಂಚಾಯಿತಿಯ 2020-21ನೇ ಸಾಲಿನ ಆಯವ್ಯಯ ಮಂಡನೆ ಸಭೆಯಲ್ಲಿ ಹಲವು ಸದಸ್ಯರು ಈ ಬಾರಿ ಹುಲಿಕೇರಿಯ ಇಂದಿರಮ್ಮನ ಕೆರೆಯಿಂದ ನೀರು ತರಲು ಗ್ರಾಮಸ್ಥರನ್ನು ಓಲೈಸುವ ಕá-ರಿತು ರ್ಚಚಿಸಿದ್ದರು. ಅದೇ ರೀತಿ ಪಟ್ಟಣದ ಹಲವು ಮುಖಂಡರು ಹುಲಿಕೇರಿ ಗ್ರಾಮದಲ್ಲಿ ಶನಿವಾರ ಸಭೆ ನಡೆಸಿದರು. ನೀರು ಪೋಲು ಮಾಡದೇ ಕೆರೆಯ ಹೂಳು ತೆಗೆಯಲು ಇಲಾಖೆಯೊಂದಿಗೆ ಸಹಕರಿಸುವುದಾಗಿ ಮುಖಂಡರು ಭರವಸೆ ನೀಡದರು. ಇದಕ್ಕೆ ಒಪ್ಪಿದ ಗ್ರಾಮಸ್ಥರು ಬೇಸಿಗೆ ಮುಗಿಯುವರೆಗೂ ನೀರು ಹರಿಸಲು ಒಪ್ಪಿಗೆ ಸೂಚಿಸಿದರು ಎಂದು ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ ತಿಳಿಸಿದ್ದಾರೆ.

    ಪ್ರಸ್ತುತ ಪಟ್ಟಣದಲ್ಲಿರುವ ಬೋರ್​ವೆಲ್ ಮೂಲಕ 10 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಕೆರೆ ನೀರು ಸಂಗ್ರಹಿಸಿ ಈ ಮೊದಲಿನಂತೆ ವಾರಕ್ಕೊಮ್ಮೆ ನೀರು ಬಿಡಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಎಚ್ಚರಿಕೆಯಿಂದ ನೀರನ್ನು ಮಿತವಾಗಿ ಬಳಿಸಿಕೊಳ್ಳಬೇಕು.
    | ಅಮರೇಶ ಪಮ್ಮಾರ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts