More

    ಡಿ.5ರಿಂದ 22ರವರೆಗೆ ಸೇನಾ ನೇಮಕಾತಿ

    ಬೀದರ್: ಅಗ್ನಿಪಥ ಯೋಜನೆಯಡಿ ಅಗ್ನಿ ವೀರರಿಗಾಗಿ ಸೇನಾ ನೇಮಕಾತಿ ರ್ಯಾಲಿ ನಗರದ ನೆಹರು ಕ್ರೀಡಾಂಗಣದಲ್ಲಿ ಡಿ.5ರಿಂದ 22 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದರಡ್ಡಿ ತಿಳಿಸಿದರು.

    ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸೇನಾ ನೇಮಕಾತಿ ರ್ಯಾಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರ್ಯಾಲಿಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

    ಡಿ.5ರಿಂದ ಆರಂಭವಾಗುವ ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸುವ ವಿದ್ಯಾಥರ್ಿಗಳು ಆ.1ರಿಂದ 30ರವರೆಗೆ ಆನ್ಲೈನ್ ನೋಂದಣಿ ಮಾಡಿಕೊಳ್ಳಬೇಕು. ಈ ಸಮಯದಲ್ಲಿ ವಿದ್ಯಾಥರ್ಿಗಳು ಮಾಹಿತಿಯೊಂದಿಗೆ ಹೆಸರನ್ನು ವೆಬ್ಸೈಟ್ (www.joinindianarmy.nic.in) ನಲ್ಲಿ ನೋಂದಾಯಿಸಿಕೊಳ್ಳಬೇಕು. ಕಲ್ಯಾಣ ಕನರ್ಾಟಕ ಹಿಂದುಳಿದ ಭಾಗವಾಗಿದ್ದು, ಇಲ್ಲಿನ ಯುವ ಪಡೆಗೆ ಇದೊಂದು ಸದಾವಕಾಶವಾಗಿದೆ ಎಂದರು.

    ರ್ಯಾಲಿಗೆ ಎಲ್ಲ ರೀತಿಯ ಸಹಾಯ, ಸಹಕಾರವನ್ನು ಜಿಲ್ಲಾಡಳಿತದಿಂದ ಸೇನೆಯ ಅಧಿಕಾರಿಗಳಿಗೆ ನೀಡಲಾಗುವುದು ಮತ್ತು ಇದಕ್ಕೆ ಸಂಬಂಧಿಸಿದ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ನಗರದ ನೆಹರು ಕ್ರೀಡಾಂಗಣದಲ್ಲಿ ಡಿಸೆಂಬರ್ ತಿಂಗಳಲ್ಲಿ ಸೇನಾ ನೇಮಕಾತಿ ರ್ಯಾಲಿ ಇರುವುದರಿಂದ ಇತರ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳದಂತೆ ಕ್ರೀಡಾ ಅಧಿಕಾರಿಗಳಿಗೆ ನಿದರ್ೇಶನ ನೀಡಿದರು. ಕ್ರೀಡಾಂಗಣ ಮತ್ತು ಅದರ ಅಕ್ಕ ಪಕ್ಕದಲ್ಲಿಯೂ ರ್ಯಾಲಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಹೇಳಿದರು.

    ಬೆಳಗಾವಿಯ ಸೇನಾ ನೇಮಕಾತಿ ಕಚೇರಿ ನಿದರ್ೇಶಕ ಕರ್ನಲ್ ನಿಶಾಂತಶೆಟ್ಟಿ ಮಾತನಾಡಿ, ಅಗ್ನಿಪಥ ಯೋಜನೆಯಡಿ ಅಗ್ನಿ ವೀರರ ನೇಮಕಾತಿ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಈ ರ್ಯಾಲಿಯಲ್ಲಿ ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಯ 65ರಿಂದ 85 ಸಾವಿರ ವಿದ್ಯಾಥರ್ಿಗಳು ಭಾಗವಹಿಸುವ ನಿರೀಕ್ಷೆ ಇದೆ. ನೇಮಕಾತಿ ರ್ಯಾಲಿಗೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ಸಹಾಯ ಮತ್ತು ಸಹಕಾರ ನೀಡಬೇಕು ಎಂದರು.

    ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾಂ ಎಂ., ಬೀದರ್ನ ವಾಯುನೆಲೆ ಕೇದ್ರದ ಅಧಿಕಾರಿ ಡಿ.ಕೆ.ಮಿಶ್ರಾ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಸಹಾಯಕ ಆಯುಕ್ತ ಮಹ್ಮದ್ ನಯೀಮ್ ಮೋಮಿನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್, ತಹಸೀಲ್ದಾರ್ ಅಣ್ಣಾರಾವ ಪಾಟೀಲ್ ಇತರರಿದ್ದರು.

    ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ: ಭಾರತೀಯ ಸೇನೆಯಲ್ಲಿ ಸೇರುವ ವಿದ್ಯಾಥರ್ಿಗಳಿಗೆ ಹೆಚ್ಚಿನ ಅವಕಾಶಗಳಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಳಗಾವಿಯ ಸೇನಾ ನೇಮಕಾತಿ ಕಚೇರಿ ನಿರ್ದೇಶಕ ಕರ್ನಲ್ ನಿಶಾಂತ ಶೆಟ್ಟಿ ಹೇಳಿದರು. ಶುಕ್ರವಾರ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಸೇನಾ ತರಬೇತಿಯಲ್ಲಿ ಮಾತನಾಡಿ, ಡಿ.5ರಿಂದ 22 ರವರೆಗೆ ನಗರದಲ್ಲಿ ರ್ಯಾಲಿ ಆಯೋಜಿಸಲಾಗಿದೆ. ಆ.1ರಿಂದ 30 ರವರೆಗೆ ಅಗತ್ಯ ದಾಖಲಾತಿಗಳೊಂದಿಗೆ ಆನ್ಲೈನ್ ಮೂಲಕ ಅಜರ್ಿ ಸಲ್ಲಿಸಬೇಕು ಮತ್ತು ವಿದ್ಯಾಥರ್ಿಗಳು ಕಡ್ಡಾಯವಾಗಿ ಮೊಬೈಲ್ ನಂಬರ್ ಮತ್ತು ಇ-ಮೇಲ್ ಐಡಿ ಹಾಕಬೇಕು ಎಂದರು. ದೇಶ ಸೇವೆ ಮಾಡಲು ಇದೊಂದು ಸದಾವಕಾಶವಿದ್ದು, ಭಾರತೀಯ ಸೇನೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಥರ್ಿಗಳು ಸೇರಬೇಕು. ಸೇನೆಗೆ ಸೇರಬೇಕಾದರೆ ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು ನಿತ್ಯವೂ ದೈಹಿಕ ಕಸರತ್ತಿನ ಜತೆಗೆ ಓದಿನ ಕಡೆಗೆ ಗಮನ ಹರಿಸಬೇಕು. ಸೇನೆಯಲ್ಲಿ ಯಾವ ಜಾತಿ, ಧರ್ಮ ಇರುವುದಿಲ್ಲ. ಇಲ್ಲಿ ಎಲ್ಲರೂ ಭಾರತೀಯರಾಗಿ ದೇಶ ಸೇವೆ ಮಾಡಬೇಕು ಎಂದು ಹೇಳಿದರು. ಬೆಳಗಾವಿ ಸೇನಾ ವಿಭಾಗದ ಮೇಜರ್ ರಾಜೇಂದ್ರಸಿಂಗ್, ಪದವಿಪೂರ್ವ ಶಿಕ್ಷಣ ಉಪನಿರ್ದೇಶಕ ಚಂದ್ರಕಾಂತ ಶಾಹಾಬಾದಕರ್, ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಸೇನೆಯ ಹವಾಲ್ದಾರ್ ಮುತ್ತು ಕುಮಾರ, ಚಂದ್ರಕಾಂತ ಗಂಗಶೆಟ್ಟಿ ಹಾಗೂ ವಿವಿಧ ಕಾಲೇಜಿನ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಹಿಂದೆ ಜಿಲ್ಲೆಯಲ್ಲಿ ನಡೆದ ಸೇನಾ ನೇಮಕಾತಿ ರ್ಯಾಲಿಯಲ್ಲಿ ಸ್ಥಳೀಯ ವಿದ್ಯಾಥರ್ಿಗಳು ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಡಿಸೆಂಬರ್ನಲ್ಲಿ ನಡೆಯುವ ರ್ಯಾಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಭಾಗವಹಿಸಬೇಕು.
    | ಕರ್ನಲ್ ನಿಶಾಂತ ಶೆಟ್ಟಿ, ಬೆಳಗಾವಿ ಸೇನಾ ನೇಮಕಾತಿ ಕಚೇರಿ ನಿರ್ದೇಶಕ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts