More

    ಡಿ.೨ ರಂದು ಶ್ರೀಶೈಲದಲ್ಲಿ ಬಿವಿವಿಎಸ್ ನಿತ್ಯ ಅನ್ನದಾನ ಛತ್ರ ಉದ್ಘಾಟನೆ

    ಬಾಗಲಕೋಟೆ: ನಗರದ ಪ್ರತಿಷ್ಠಿತ ಬಸವೇಶ್ವರ ವಿರಶೈವ ವಿದ್ಯಾವರ್ಧಕ ಸಂಘದಿಂದ ಆಂಧ್ರಪ್ರದೇಶದ ಶ್ರೀಶೈಲಂ ಪುಣ್ಯಕ್ಷೇತ್ರದಲ್ಲಿ ೧೨ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಬಿವಿವಿಎಸ್ ನಿತ್ಯ ಅನ್ನದಾನ ಛತ್ರದ ವಾಸ್ತುಶಾಂತಿ, ಹೋಮ ಹಾಗೂ ಪೂಜಾ ಕಾರ್ಯಕ್ರಮ ಡಿ.೨ ರಂದು ಬೆಳಗ್ಗೆ ೯.೩೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
    ಸಮಾರಂಭದಲ್ಲಿ ವಾರಣಾಶಿಯ (ಕಾಶಿ) ಶ್ರೀಶ್ರೀಶ್ರೀ ೧೦೦೮ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ಶ್ರೀಶೈಲಂನ ಶ್ರೀಶ್ರೀಶ್ರೀ ೧೦೦೮ ಜಗದ್ಗುರು ಡಾ. ಚನ್ನಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಬಿವಿವಿ ಸಂಘದ ಅಧ್ಯಕ್ಷ ಚರಂತಿಮಠದ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶ್ರೀಶೈಲ ಜಗದ್ಗುರುಗಳ ಪಾದಯಾತ್ರೆಯಲ್ಲಿ ಭಾಗವಹಿಸಿದ ಹರಗುರು ಚರಮೂರ್ತಿಗಳು ಉಪಸ್ಥಿತರಿರುವರು.
    ಶ್ರೀಶೈಲಂ ದೇವಸ್ಥಾನ ಟ್ರಸ್ಟದಿಂದ ೨ ಎಕರೆ ಜಮೀನನ್ನು ಪಡೆದುಕೊಂಡು ಈ ಭಾಗದ ಭಕ್ತರಿಗೆ ಅನುಕೂಲವಾಗಲಿ ಎಂಬ ಉದ್ದೇಶವನ್ನು ಇಟ್ಟುಕೊಂಡು ಸುಸಜ್ಜಿತವಾದ ಬಿವಿವಿಎಸ್ ನಿತ್ಯ ಅನ್ನದಾನ ಛತ್ರವನ್ನು ಶ್ರೀಶೈಲಂ ಮಹಾದ್ವಾರಕ್ಕೆ ಹೊಂದಿಕೊಂಡತೆ ಇರವು ಬಲಗಡೆಯ ರಿಂಗ್ ರೋಡಗೆ ಹೊಂದಿಕೊಂಡಂತೆ ನಿರ್ಮಿಸಲಾಗಿದೆ. ೨ ಎಕರೆ ಜಮೀನಿನಲ್ಲಿ ೬೫೦೦೦ ಚದುರ ಅಡಿ ವಿಸ್ತೃತವಾದ ೧೦೦ ಸುಸಜ್ಜಿತವಾದ ಕೊಠಡಿಗಳು ಮತ್ತು ೫ ಡಾರಮಿಟರ (೨ ಮಹಿಳೆಯರಿಗಾಗಿ, ೩ ಪುರುಷರಿಗಾಗಿ)ಗಳನ್ನು ೪ ಅಂತಸ್ತಿನಲ್ಲಿ ನಿರ್ಮಿಸಲಾಗಿದೆ. ಲಿಫ್ಟ್ ಸೌಲಭ್ಯವನ್ನು ಅಳವಡಿಸಲಾಗಿದೆ. ೬೦೦೦ ಚದುರ ಅಡಿಯಲ್ಲಿ ಸಭಾಭವನ ಹಾಗೂ ಸೆಂಟರ ಹಾಲ್‌ನಲ್ಲಿ ಮಹಿಳೆಯರಿಗಾಗಿ ೧೦ ಸ್ನಾನಗೃಹ, ೧೦ ಶೌಚಗೃಹ ವ್ಯವಸ್ಥೆ ಇದೆ. ಅದೇ ರೀತಿ ಪುರುಷರಿಗಾಗಿ ೧೦ ಸ್ನಾನಗೃಹ, ೧೦ ಶೌಚಗೃಹ ಕೊಠಡಿಗಳನ್ನು ನಿರ್ಮಿಸಲಾಗಿದೆ. ಅನ್ನದಾನ ಛತ್ರದ ಕಟ್ಟಡದ ೪ ದಿಕ್ಕುಗಳಲ್ಲಿ ಪ್ರವೇಶ ದ್ವಾರದ ಸೌಲಭ್ಯವಿರುತ್ತದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts