More

    ಡಿಸಿ ದಿವ್ಯಾಪ್ರಭು ವರ್ಗಾವಣೆ ಸಲ್ಲದು,ಮನವಿ ಸಲ್ಲಿಕೆ

    ಚಿತ್ರದುರ್ಗ: ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರನ್ನು ವರ್ಗಾವಣೆ ಮಾಡದಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಡಿಸಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
    ಜಿಲ್ಲಾಧಿಕಾರಿಯಾಗಿ ನೇಮಕ ದಿನದಿಂದಲೂ ದಕ್ಷತೆಯಿಂದ ಕೆಲಸ ಮಾಡುತ್ತಿರುವ ದಿವ್ಯಾಪ್ರಭು, ರೈತರು, ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ.
    ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ವೇದಾವತಿ ನದಿ ಪಾತ್ರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಗಣಿಗಾರಿಕೆಗೆ ಕಡಿವಾಣ ಹಾಕಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಕಟ್ಟುನಿಟ್ಟಿನಿಂದ ವಿಧಾನಸಭಾ ಚುನಾವಣೆ ನಡೆಸಿದ್ದಾರೆ. ಬರ ಪೀಡಿತ ತಾಲೂಕು ಪಟ್ಟಿಯಿಂದ ಬಿಟ್ಟುಹೋಗಿದ್ದ ಚಳ್ಳಕೆರೆ, ಹಿರಿಯೂರು ತಾಲೂಕುಗಳನ್ನು ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
    ಆಡಳಿತವನ್ನು ಚುರುಕುಗೊಳಿಸಿರುವ ಡಿಸಿ, ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ಐದು ತಾಸು ವಿದ್ಯುತ್ ಪೂರೈಕೆಗೂ ಕ್ರಮ ವಹಿಸಿದ್ದಾರೆ. ಬೆಳೆ ವಿಮಾ ಪರಿಹಾರ ವಿತರಣೆ ನಿಟ್ಟಿನಲ್ಲೂ ಸೂಕ್ತ ಕ್ರಮ ತೆಗೆದುಕೊಂಡಿದ್ದಾರೆ.
    ಗ್ರಾಮಗಳಿಗೆ ತೆರಳಿ ಸರ್ಕಾರದ ಸೌಲಭ್ಯಗಳ ಕುರಿತು ಜನರಿಗೆ ಮನವರಿಕೆ ಮಾಡುತ್ತಿರುವ ದಿವ್ಯಾಪ್ರಭು ಅವರನ್ನು ಒಂದು ವೇಳೆ ವರ್ಗಾಯಿಸಿದರೆ ರಾಷ್ಟ್ರೀಯ ಹೆದ್ದಾರಿ ತಡೆ ಹಾಗೂ ಜಿಲ್ಲೆ ಪ್ರವೇಶಿಸುವ ಸಚಿವರಿಗೆ ೇರಾವ್ ಹಾಕುವ ಮೂಲಕ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
    ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾ ಕಾರ‌್ಯಾಧ್ಯಕ್ಷ ಕೆ.ಸಿ.ಹೊರಕೆರಪ್ಪ, ತಾಲೂಕಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಮುಖಂಡರಾದ ಮಲ್ಲಾಪುರ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಟಿ.ಹಂಪಣ್ಣ, ಕುಮಾರ, ಸುಧಾ, ಎಂ.ಶಶಿಕಲಾ, ವಿ.ಶ್ರೀನಿವಾಸರೆಡ್ಡಿ, ಆರ್.ಚೇತನ್ ಯಳನಾಡು, ಜೆ.ಗುರುಮೂರ್ತಿ, ಜಿ.ಟಿ.ಸುರೇಶ್, ಎಂ.ಎಲ್.ಸುರೇಶ್‌ಮೂರ್ತಿ, ರೇಣುಕಮ್ಮ, ಮಹದೇವಮ್ಮ, ಇ.ಗೌರಮ್ಮ, ಎಸ್.ಬಿ.ಹನುಮಂತರಾಯ, ಜೆ.ಮಂಜಪ್ಪ, ಈರಣ್ಣ, ಗಂಗಮ್ಮ, ಪ್ರೇಮಕ್ಕ, ಮಾರಣ್ಣ, ವರಲಕ್ಷ್ಮೀ, ಅಂಬಿಕಾ, ತಿಮ್ಮಕ್ಕ, ಮಾರಕ್ಕ, ಉಷಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts