More

    ಡಿಮ್ಹಾನ್ಸ್​ನಲ್ಲಿ ಕೋವಿಡ್ ಟೆಸ್ಟಿಂಗ್ ಕೇಂದ್ರ

    ಧಾರವಾಡ: ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ಟೆಸ್ಟಿಂಗ್ ಲ್ಯಾಬ್​ಗಳನ್ನು ಪ್ರಾರಂಭಿಸಲು ಮುಂದಾಗಿದೆ. ಅದರಂತೆ ಜಿಲ್ಲೆಯ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್)ಯಲ್ಲಿ ಸಹ ಕೇಂದ್ರ ಪ್ರಾರಂಭಿಸಲು ಸೂಚನೆ ನೀಡಿದ್ದು, ಮಂಗಳವಾರ ಅಥವಾ ಬುಧವಾರದಿಂದ ಅಧಿಕೃತವಾಗಿ ಕಾರ್ಯಾರಂಭಗೊಳ್ಳಲಿದೆ.

    ಒಂದು ವರ್ಷದ ಹಿಂದೆಯೇ ಸಂಶೋಧನೆಗಾಗಿ ಡಿಮ್ಹಾನ್ಸ್​ನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಲ್ಯಾಬ್ ಪ್ರಾರಂಭಿಸಲಾಗಿತ್ತು. ಇದೀಗ ಅದೇ ಲ್ಯಾಬ್​ನಲ್ಲಿ ಕೋವಿಡ್ ಟೆಸ್ಟಿಂಗ್ ನಡೆಸಲು ತಯಾರಿ ಮಾಡಿಕೊಳ್ಳಲಾಗಿದೆ. ಸಿಂಗಪುರದ ಕಿಟ್ ಸೇರಿ ಅಗತ್ಯವಿರುವ ಯಂತ್ರಗಳು ಬಂದಿದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ಸಹ ಸೋಮವಾರ ಬೆಳಗ್ಗೆ ಟೆಸ್ಟಿಂಗ್ ನಡೆಸಲು ಸೂಚನೆ ನೀಡಿದೆ.

    ಜಿಲ್ಲೆಯಲ್ಲಿ ಕಿಮ್ಸ್​ನಲ್ಲಿ ಮಾತ್ರ ಕೇಂದ್ರ ಪ್ರಾರಂಭಿಸ ಲಾಗಿತ್ತು. ಇದೀಗ ಬಹಳಷ್ಟು ಜನರ ಪರೀಕ್ಷೆ ನಡೆಸಬೇಕಿರುವ ಹಿನ್ನೆಲೆಯಲ್ಲಿ ಈ ಕೇಂದ್ರ ಪ್ರಾರಂಭಿಸಲಾಗಿದೆ. ಇದರಿಂದ ಧಾರವಾಡ ಜಿಲ್ಲೆ ಮಾತ್ರವಲ್ಲದೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಅನುಕೂಲವಾಗಲಿದೆ.

    ಡಿಮ್ಹಾನ್ಸ್​ನಲ್ಲಿ ಕೇಂದ್ರ ಪ್ರಾರಂಭಿಸಲು ಒಪ್ಪಿಗೆ ದೊರಕುತ್ತಿದ್ದಂತೆ ಸಿಬ್ಬಂದಿಗೆ ಸೂಕ್ತ ತರಬೇತಿ ಸಹ ನೀಡಲಾಗಿದೆ. ಈಗಾಗಲೇ ಪ್ರಾಯೋಗಿಕ ಪ್ರಕ್ರಿಯೆ ನಡೆಸಿದ್ದನ್ನು ಐಸಿಎಂಆರ್ ಪರಿಶೀಲನೆ ನಡೆಸಿದೆ. ಈ ಪರೀಕ್ಷೆಗಳನ್ನು 5 ಜನರನ್ನು ಒಳಗೊಂಡ 2 ತಂಡಗಳು ನಿರ್ವಹಿಸಲಿವೆ. ಅಗತ್ಯ ಬಿದ್ದರೆ ಇನ್ನೂ ಒಂದು ತಂಡ ಸಹ ಕಾರ್ಯ ನಿರ್ವಹಿಸಲಿದೆ. ಈ ಕೇಂದ್ರದಲ್ಲಿ ಒಂದು ದಿನಕ್ಕೆ ಸುಮಾರು 200 ಪರೀಕ್ಷೆಗಳನ್ನು ನಡೆಸಬಹುದಾಗಿದೆ.

    ಜಿಲ್ಲೆಯಲ್ಲಿ 2ನೇ ಕೇಂದ್ರ ಆರಂಭವಾಗುತ್ತಿರುವುದರಿಂದ ಕಿಮ್್ಸ ಕೇಂದ್ರದ ಸಿಬ್ಬಂದಿ ಮೇಲಿನ ಒತ್ತಡ ಸಹ ಕಡಿಮೆಯಾಗಲಿದೆ. ಇನ್ನು ಎಸ್​ಡಿಎಂ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲೂ ಶೀಘ್ರದಲ್ಲಿ ಕೇಂದ್ರಗಳು ಪ್ರಾರಭವಾದರೆ ತ್ವರಿತ ಗತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾದರಿ ಪರೀಕ್ಷೆಗಳನ್ನು ನಡೆಸಲು ಸಹಾಯವಾಗಲಿದೆ.

    ಈ ಕೇಂದ್ರದಲ್ಲಿ ನೀಡಿದ ಪ್ರಾಯೋಗಿಕ ಪರೀಕ್ಷೆಗಳ ಪರಿಶೀಲನೆ ನಡೆಸಿದ ಐಸಿಎಂಆರ್ ಸೋಮವಾರ ಬೆಳಗ್ಗೆ ಮಾದರಿ ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದೆ. ಬಹುತೇಕ ಮಂಗಳವಾರದಿಂದ ಪರೀಕ್ಷೆಗಳು ಆರಂಭವಾಗಬ ಹುದು. ನಿರ್ದೇಶಕ ಡಾ. ಮಹೇಶ ದೇಸಾಯಿ ನೇತೃತ್ವ ದಲ್ಲಿ ಸಭೆ ನಡೆಸಿದ ಬಳಿಕ ಯಾವ ಜಿಲ್ಲೆಗಳ ಮಾದರಿ ಸಂಗ್ರಹಿಸಬಹುದು ಎಂಬುದರ ಮಾಹಿತಿ ಲಭಿಸಲಿದೆ.
    | ಡಾ. ವಿಜಯ ಏಣಗಿ ವಿಜ್ಞಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts