More

    ಡಿಪ್ಲೊಮಾ ಪ್ರವೇಶ ಪ್ರಕ್ರಿಯೆ ಆರಂಭ

    ಚಿತ್ರದುರ್ಗ:ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯ ರಾಜ್ಯದ 30 ಸರ್ಕಾರಿ ಪಾಲಿಟೆಕ್ನಿಕ್ ಹಾಗೂ 10 ಖಾಸಗಿ ಪಾಲಿ ಟೆಕ್ನಿಕ್ ಕಾಲೇಜುಗಳಲ್ಲಿ ಪ್ರಥಮ ಸೆಮಿಸ್ಟರ್ ಡಿಪ್ಲೊಮಾ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು,ಕೌನ್ಸಿಲಿಂಗ್ ಮೂಲಕ ಪ್ರವೇಶ ನೀಡಲಾಗು ತ್ತದೆ. ಅರ್ಹ ವಿದ್ಯಾರ್ಥಿಗಳು ಮೇ 21ರವರೆಗೆ  www.dtek.karnatak.gov.inಮೂಲಕ ಅರ್ಜಿ ಪಡೆದು 21ರೊಳಗೆ ಸಲ್ಲಿಸಬೇಕು. 22ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಮೆರಿಟ್ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಬಹುದು. 23ರಂದು ಸಂಜೆ 5.30ಕ್ಕೆ ಅಂತಿ ಮ ಮೆರಿಟ್‌ಪಟ್ಟಿ ಪ್ರಕಟಿಸಲಾಗುವುದು. 27ರಂದು ಸಂಜೆ 6 ಗಂಟೆ ನಂತರ ಸೀಟು ಹಂಚಿಕೆ ಮಾಡಲಾಗುವುದು.ಆಯ್ಕೆಯಾದ ಅಭ್ಯ ರ್ಥಿಗಳು 28ರಿಂದ ಎರಡು ದಿನಗಳ ಕಾಲ ನಿಗದಿತ ಶುಲ್ಕದೊಂದಿಗೆ ಸಂಬಂಧಿಸಿದ ಕಾಲೇಜಿಗಳಲ್ಲಿ ಪ್ರವೇಶ ಪಡೆಯಬಹುದಾಗಿದೆ. ಆನ್‌ಲೈನ್ ಮೂಲಕ ಹಂಚಿಕೆಯಾಗದೆ ಉಳಿದ ಸೀಟುಗಳ ಭರ್ತಿಗೆ 30ರಿಂದ ಜೂನ್ 6ರವರೆಗೆ ಆಯಾ ಕಾಲೇಜು ಪ್ರಾಂಶುಪಾಲರ ಹಂತದಲ್ಲಿ ರೋಸ್ಟರ್ ಅನುಗುಣವಾಗಿ ಸೀಟು ಹಂಚಿಕೆ ಮಾಡಲಾಗುವುದು. ಅಗತ್ಯ ಮಾಹಿಗಳು ಹಾಗೂ ಇ-ಪುಸಕವನ್ನು  www.dtek.karnatak.gov.inಅಥವಾ dtetech.karnataka.gov.in/kartechnical   ವೆಬ್‌ಸೈಟ್ ಮೂಲಕ ಪಡೆದುಕೊಳ್ಳಬಹುದೆಂದು ಚಿತ್ರದುರ್ಗ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರ ಕಚೇರಿ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts