More

    ಡಿಜಿಟಲ್​ ಗ್ರಂಥಾಲಯ ಪ್ರಯೋಜನ ಪಡೆಯಿರಿ

    ಬೈಲಹೊಂಗಲ, ಬೆಳಗಾವಿ: ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗಲು ಡಿಜಿಟಲ್​ ಗ್ರಂಥಾಲಯ ನಿರ್ಮಿಸಲಾಗಿದ್ದು, ಅದರ ಸದುಪಯೋಗ ಪಡೆಯಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. ತಾಲೂಕಿನ ಸಂಗ್ರೆಶಕೊಪ್ಪ ಗ್ರಾಪಂ ವ್ಯಾಪ್ತಿಯ ಯಡಹಳ್ಳಿ ಕೆಂಚರಾಮನಹಾಳ ಅವಳಿ ಗ್ರಾಮಗಳಲ್ಲಿ ನವೀಕರಣ ಮಾಡಲಾಗಿರುವ ಡಿಜಿಟಲ್​ ಗ್ರಂಥಾಲಯ ಉದ್ಘಾಟನೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾಗಿರುವ ಹೊಸ ತರಗತಿ ಕೊಠಡಿ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

    ಸಂಗ್ರೇಶಕೊಪ್ಪ ಗ್ರಾಪಂ ಅಧ್ಯಕ್ಷ ಮಹೇಶಗೌಡ ದೇಸಾಯಿ, ಗ್ರಾಪಂ ಉಪಾಧ್ಯೆ ರೇಣುಕಾ ಲೋಕಾಪುರ, ಸವದತ್ತಿ ತಾಪಂ ಇಒ ಯಶವಂತಕುಮಾರ, ಗ್ರಾಪಂ ಸದಸ್ಯರಾದ ನಿರಂಜನ ಕೆಂಗಾನೂರ, ದೇವರೆಡ್ಡಿ ವೆಂಕರೆಡ್ಡಿಯವರ, ಯಲ್ಲಪ್ಪ ನರಸನ್ನವರ, ಸುರೇಖಾ ಮಾಸನವರ, ರಜಿಯಾಬೇಗ್​ಂ ಶೆರೆಗಾರ, ಬಸವರಾಜ ತಾರಲಕಟ್ಟಿ, ಮಂಜುಳಾ ಬಾಣಿ, ಈರಪ್ಪ ಬೂದನೂರ, ಇಂದ್ರವ್ವ ಹೊಳಿ, ದೊಡ್ಡವ್ವ ಮಾದರ, ಪಿಡಿಒ ಎಸ್​.ಎಲ್​.ಕೋಚರಿಕರ, ಕಾರ್ಯದರ್ಶಿ ಜಿ.ಎನ್​.ಬಳ್ಳಾರಿ, ಎಸ್​.ಎಚ್​.ಕೆಲವಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts