More

    ಡಾ.ಜಿ.ಪರಮೇಶ್ವರ್ ಮೇಲೆ ಹಲ್ಲೆ ಖಂಡನೀಯ


    ಮಂಡ್ಯ : ಚುನಾವಣಾ ಪ್ರಚಾರ ನಡೆಸುತ್ತಿದ್ದ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ಅವಮಾನ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಖಂಡಿಸಿದರು.

    ನಾಗಮಂಗಲ ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಜಿ.ಪರಮೇಶ್ವರ್ ಅವರ ಮೇಲೆ ಹಲ್ಲೆ ನಡೆದಿರುವುದು ನಿಜಕ್ಕೂ ಅಮಾನವೀಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಪಕ್ಷಗಳ ನಾಯಕರ ಮೇಲೆ ಇಂತಹ ಕೃತ್ಯಗಳು ನಡೆಯಬಾರದು. ಡಾ.ಜಿ.ಪರಮೇಶ್ವರ್ ಸರಳ ವ್ಯಕ್ತಿತ್ವವುಳ್ಳವರು. ಅಂತಹ ವ್ಯಕ್ತಿಯ ಮೇಲೆಯೇ ಇಂತಹ ಹೀನ ಕೃತ್ಯಗಳು ನಡೆಯುತ್ತವೆ ಎಂದರೆ ಇನ್ನು ಸಾಮಾನ್ಯ ಜನರ ಗತಿ ಏನು ? ಸೋಲಿನ ಹತಾಶೆಯಿಂದ ವಿರೋಧ ಪಕ್ಷದವರು ಈ ಕೃತ್ಯ ಮಾಡಿಸಿರಬಹುದು. ರಾಜ್ಯದಲ್ಲಿ ನ್ಯಾಯಸಮ್ಮತ ಹಾಗೂ ಮುಕ್ತ ಚುನಾವಣೆ ನಡೆಯಲು ಸಾಧ್ಯವೇ ಎಂಬ ಅನುಮಾನ ಮೂಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.


    ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಸಂಪೂರ್ಣ ವೈಫಲ್ಯದಿಂದಾಗಿ ಇಂತಹ ಕೃತ್ಯ ಸಂಭವಿಸಿದೆ. ಗೃಹ ಇಲಾಖೆ ಈ ಕೂಡಲೇ ಎಚ್ಚೆತ್ತು ಕಾನೂನು ಕ್ರಮ ಜರುಗಿಸಬೇಕು. ಜತೆಗೆ ಪರಮೇಶ್ವರ್ ಅವರಿಗೆ ಸೂಕ್ತ ಭದ್ರೆತೆ ಒದಗಿಸಬೇಕು. ಇದೇ ರೀತಿ ಮರುಕಳಿಸಿದರೆ ಪಕ್ಷದ ವತಿಯಿಂದ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts