More

    ಡಾ.ಖರ್ಗೆ ಸಾಹೇಬ್​ಗೆ ಅಭಿಮಾನದ ಸ್ವಾಗತ

    ಕಲಬುರಗಿ: ಕಣ್ಣು ಹಾಯಿಸಿದ ಕಡೆ ಜನಸಾಗರ, ಮೆರವಣಿಗೆಯುದ್ದಕ್ಕೂ ಪುಷ್ಪವೃಷ್ಟಿ, ಬೃಹತ್ ಹಾರಗಳು, ಸ್ವಾಗತ, ಡೊಳ್ಳು, ಹಲಗೆ, ನಾಸಿಕ್ ಢೋಲು, ವಾದ್ಯ, ಲಂಬಾಣಿ ನೃತ್ಯ, ಎಲ್ಲೆಡೆ ರಾರಾಜಿಸಿದ ಕಾಂಗ್ರೆಸ್ ಧ್ವಜಗಳು, ಮೊಳಗಿದ ಖರ್ಗೆ ಸಾಹೇಬ್ ಕೀ ಜೈಕಾರ… ಕಾಂಗ್ರೆಸ್ ರಾಷ್ಟಾçಧ್ಯಕ್ಷರಾದ ಬಳಿಕ ಮೊದಲ ಸಲ ನಗರಕ್ಕೆ ಬಂದ ಡಾ.ಮಲ್ಲಿಕಾರ್ಜುನ ಖರ್ಗೆ ಅವರಿಗೆ ಲಕ್ಷಾಂತರ ಅಭಿಮಾನಿಗಳು, ಕಾರ್ಯಕರ್ತರು ತೋರಿದ ಅಭಿಮಾನದ ಸ್ವಾಗತದ ವೇಳೆ ಕಂಡುಬಂದ ದೃಶ್ಯಗಳಿವು. ನೆಹರು ಗಂಜ್ ನಗರೇಶ್ವರ ಶಾಲೆಯಿಂದ ಬೆಳಗ್ಗೆ ೧೧.೩೦ಕ್ಕೆ ಶುರುವಾದ ಮೆರವಣಿಗೆಯಲ್ಲಿ ಶಾಸಕರು, ಟಿಕೆಟ್ ಆಕಾಂಕ್ಷಿಗಳು, ಸ್ಥಳೀಯ ಮುಖಂಡರು, ಅಭಿಮಾನಿಗಳು ತಮ್ಮ ತಮ್ಮ ತಂಡಗಳೊಂದಿಗೆ ವಾದ್ಯ, ಮೇಳಗಳೊಂದಿಗೆ ಆಗಮಿಸಿ ಹೆಜ್ಜೆ ಹಾಕಿದರು. ವಿಮಾನ ನಿಲ್ದಾಣಕ್ಕೆ ಖರ್ಗೆ ಬರುತ್ತಲೇ ಸುರ್ಜೆವಾಲಾ, ಹರಿಪ್ರಸಾದ್, ಮುನಿಯಪ್ಪ, ಡಿಕೆಶಿ, ಸಿದ್ದರಾಮಯ್ಯ, ಡಾ.ಅಜಯಸಿಂಗ್ ಅಭಿನಂದಿಸಿ ಸ್ವಾಗತಿಸಿದರು. ಶ್ರೀನಿವಾಸ ಸರಡಗಿ ಕ್ರಾಸ್ ಬಳಿ ಮುಖಂಡ ಡಾ.ರವಿ ಚವ್ಹಾಣ್ ಮತ್ತವರ ಬೆಂಬಲಿಗರು ಬೃಹತ್ ಹಾರ ಹಾಕಿ ಸ್ವಾಗತ ಕೋರಿದರು. ಅಲ್ಲಿಂದ ನೇರವಾಗಿ ನಗರೇಶ್ವರ ಶಾಲೆ ಬಳಿ ಬಂದ ಎಲ್ಲ ಮುಖಂಡರು ವಾಹನವೇರಿದ ನಂತರ ಬಲೂನ್ ಹಾರಿ ಬಿಟ್ಟು ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ಜಗತ್ ವೃತ್ತದವರೆಗೆ ಸುಮಾರು ಮೂರು ತಾಸು ಸಾಗಿದ ಮೆರವಣಿಗೆಯುದ್ದಕ್ಕೂ ವಾದ್ಯ-ಮೇಳಗಳೊಂದಿಗೆ ಕಲಾ ತಂಡಗಳ ಪ್ರದರ್ಶನ ಗಮನ ಸೆಳೆಯಿತು.

    ಬೃಹತ್ ಹಾರಗಳ ಸರಮಾಲೆ: ಡಾ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಸ್ವಾಗತಿಸಲು ಅಭಿಮಾನಿಗಳೊಂದಿಗೆ ವಿಧಾನಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಗಳು ಸಹ ಶಕ್ತಿ ಪ್ರದರ್ಶನ ಮಾಡಿದರು. ಗಂಜ್, ಸುಪರ್ ಮಾರ್ಕೆಟ್, ಪೊಲೀಸ್ ಚೌಕ್, ತಹಸಿಲ್ ಕಚೇರಿ, ಜಗತ್ ಸೇರಿ ಮೆರವಣಿಗೆ ಮಾರ್ಗದುದ್ದಕ್ಕೂ ೨, ೩, ೫, ೧೦ ಕ್ವಿಂಟಾಲ್‌ಗಳ ಬೃಹತ್ ಹೂವಿನ ಹಾರಗಳನ್ನು ದೊಡ್ಡ ದೊಡ್ಡ ಕ್ರೇನ್‌ಗಳ ಮೂಲಕ ಹಾಕಿದರು. ಜಗತ್ ವೃತ್ತದ ಬಳಿ ಸೇಬಿನ ಹಣ್ಣಿನ ಬೃಹತ್ ಹಾರವನ್ನು ಹಾಕಿ ಸ್ವಾಗತಿಸಿದರು. ನಾಲ್ಕೈದು ಕಡೆ ಜೆಸಿಬಿಗಳ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts