More

    ಡಾ. ಎಂ.ವಿ. ಜಾಲಿಗೆ ಸರ್ಕಾರದಿಂದ ಫೆಲೋಶಿಪ್​

    ಬೆಳಗಾವಿ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಟಕ 2022ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಫೆಲೋಶಿಪ್​ ಅನ್ನು ಕೆಎಲ್​ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕಿಯ ನಿರ್ದೇಶಕ ಡಾ. ಎಂ.ವಿ. ಜಾಲಿ ಅವರಿಗೆ ಲಭಿಸಿದೆ.

    ಬೆಂಗಳೂರಿನಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹೆಗಾರ ಪ್ರೊ. ಅಜಯ್​ ಸೂದ್​ ಪ್ರದಾನ ಮಾಡಿದರು. ಡಾ. ಎಂ.ವಿ. ಜಾಲಿ ಅವರ ಪರವಾಗಿ ಅವರ ಪುತ್ರಿ ನೇಹಾ ಜಾಲಿ ಅವರು ಪ್ರಶಸ್ತಿ ಸ್ವೀಕರಿಸಿದರು.

    ಡಾ. ಎಂ.ವಿ. ಜಾಲಿ ಅವರು ವೈದ್ಯಕಿಯ ಮತ್ತು ಸಂಶೋಧನಾ ೇತ್ರದಲ್ಲಿ 38 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಅದರಲ್ಲೂ ವಿಶೇಷವಾಗಿ ಸಕ್ಕರೆ ಕಾಯಿಲೆ ಕುರಿತು ಅನೇಕ ಸಂಶೋಧನೆ, ಪ್ರಬಂಧ ಮಂಡಿಸಿ, ಸಾಧನೆಗೈದಿದ್ದರಿಂದ ಪ್ರಶಸ್ತಿ ಲಭಿಸಿದೆ. ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್​. ಅಶ್ವತ್ಥನಾರಾಯಣ ಉಪಸ್ಥಿತರಿದ್ದರು. ಡಾ. ಎಂ.ವಿ. ಜಾಲಿ ಅವರು ಕೆಎಲ್​ಇ ಆಸ್ಪತ್ರೆಯ ವೈದ್ಯಕಿಯ ನಿರ್ದೇಶಕರಾಗಿದ್ದು, ಕಾಹೇರ್​ನ ಪ್ರಾಧ್ಯಾಪಕರಾಗಿ, ಮಧುಮೇಹ ಮತ್ತು ಸಂಶೋಧನೆಗೆ ಕೊಡುಗೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts