More

    ಟ್ರಸ್ಟ್, ಸಂಘಟನೆಗಳು ಹೆಸರಿಗೆ ಸೀಮಿತವಾಗದಿರಲಿ

    ಕೆ.ಆರ್.ನಗರ: ಟ್ರಸ್ಟ್‌ಗಳು, ಸಂಘಟನೆಗಳು ಹೆಸರಿಗೆ ಸೀಮಿತವಾಗದೆ ನಿರಂತರ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಸುಬ್ರಮಣ್ಯ ಹೇಳಿದರು.

    ಪಟ್ಟಣದ ಕನಕನಗರದಲ್ಲಿ ಸೋಮವಾರ ಮಾಜಿ ಶಾಸಕ ಹಾಗೂ ರಾಜ್ಯಸಭೆ ಮಾಜಿ ಸದಸ್ಯ ಗಂಧನಹಳ್ಳಿ ಎಂ.ಬಸವರಾಜು ಚಾರಿಟಬಲ್ ಟ್ರಸ್ಟ್ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಕುರುಬ ಸಮುದಾಯದ ಪ್ರಥಮ ರಾಜ್ಯಸಭಾ ಸದಸ್ಯರಾಗಿದ್ದ ತಾಲೂಕಿನವರೇ ಆದ ಎಂ.ಬಸವರಾಜು ಅವರ ಬಗ್ಗೆ ಇಂದಿನ ಪೀಳಿಗೆಗೆ ತಿಳಿದಿಲ್ಲ. ಮುಂದಿನ ದಿನಗಳಲ್ಲಿ ಈ ಟ್ರಸ್ಟ್ ಮೂಲಕ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಪ್ರತಿ ಗ್ರಾಮದ ಮನೆ ಮನೆಗೂ ಅವರ ಸಾಧನೆ ತಿಳಿಯುವಂತಾಗಲಿ ಎಂದು ಆಶಿಸಿದರು.

    ಟ್ರಸ್ಟ್ ಅಧ್ಯಕ್ಷ ಜಿ.ಎಸ್.ವೆಂಕಟೇಶ್ ಮಾತನಾಡಿ, ಸಾಮಾಜಿಕ ಕಾರ್ಯಗಳನ್ನು ಮಾಡುವ ಉದ್ದೇಶದಿಂದ ಟ್ರಸ್ಟ್ ರಚಿಸಿದ್ದೇವೆ. ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕೊಡಿಸುವುದು, 3 ತಿಂಗಳಿಗೊಮ್ಮೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಉಚಿತ ರೋಗ್ಯ ತಪಾಸಣಾ ಶಿಬಿರ, ಮಹಿಳೆಯರಿಗೆ ಹೊಲಿಗೆ ತರಬೇತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದರು.

    ಕೇರಳದ ಮಾಜಿ ಶಾಸಕ ಅನಿರುದ್ಧ್, ಪುರಸಭೆ ಅಧ್ಯಕ್ಷ ಸೈಯದ್ ಸಿದ್ದಿಕ್, ಸದಸ್ಯರಾದ ಕೋಳಿಪ್ರಕಾಶ್, ನಟರಾಜ್, ಟ್ರಸ್ಟ್‌ನ ಗೌರವಾಧ್ಯಕ್ಷ ಪುರುಷೋತ್ತಮ ಪ್ರಭು, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಜಿಪಂ ಮಾಜಿ ಸದಸ್ಯ ಶಿವಕುಮಾರಸ್ವಾಮಿ, ಟಿಎಪಿಸಿಎಂಎಸ್ ಮಾಜಿ ಸದಸ್ಯ ರಾಜೇಗೌಡ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ದೆಗ್ಗನಹಳ್ಳಿ ಆನಂದ್, ಟ್ರಸ್ಟ್‌ನ ಕಾರ್ಯದರ್ಶಿ ಅನುರಾಧಾ ವಸಂತಕುಮಾರ್, ಖಜಾಂಚಿ ಬಿ.ಎಂ.ಗೋವರ್ಧನ್, ನಿರ್ದೇಶಕರಾದ ಬಿ.ಎನ್.ಮಂಜುನಾಥ್, ರಾಘವೇಂದ್ರಸ್ವಾಮಿ, ತಾಲೂಕು ಕುರುಬರ ಸಂಘದ ನಿರ್ದೇಶಕ ಕೃಷ್ಣೇಗೌಡ, ಗಂಧನಹಳ್ಳಿ ರಘು, ಪ್ರಸನ್ನಕುಮಾರ್ ಹಾಜರಿದ್ದರು.

    ಪಟ್ಟಣದ ಪ್ರಮುಖ ರಸ್ತೆಗೆ ಅಥವಾ ಪಟ್ಟಣದಿಂದ ಮುಳ್ಳೂರಿಗೆ ಹೋಗುವ ರಸ್ತೆಗೆ ಎಂ.ಬಸವರಾಜು ಅವರ ಹೆಸರು ನಾಮಕರಣ ಮಾಡುವಂತೆ ಪುರಸಭೆ ಅಧ್ಯಕ್ಷರಿಗೆ ಟ್ರಸ್ಟ್‌ನ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts