More

    ಟ್ರಜರಿ ಲಾಕ್ ಭೀತಿ,ಕಚೇರಿಗಳಿಗೆ ಹಿಂತಿರುಗಲು ಪೈಪೋಟಿ

    ಚಿತ್ರದುರ್ಗ: ಪಾಲನಾ ವರದಿ ಮೇಲಿನ ಚರ್ಚೆ ಸ್ಕಿಫ್,ಹರಿಬರಿಯಲ್ಲಿ ಪ್ರಗತಿ ಮಾಹಿತಿ ನೀಡಿ ಕಚೇರಿಗಳಿಗೆ ಮರಳಲು ನಾಮುಂದು ನೀ ಮುಂದೆಂದು ಪೈಪೋಟಿ ನಡೆಸಿದ ಅಧಿಕಾರಿಗಳು. ಇದು ಜಿಪಂದಲ್ಲಿ ಶುಕ್ರವಾರ ಮಾಸಿಕ ಕೆಡಿಪಿ ಸಭೆಯ ಹೈಲೈಟ್ಸ್.
    ಸಭೆ ಆರಂಭವಾಗುತ್ತಿದ್ದಂತೆ ಪಾಲನಾ ವರದಿ ಚರ್ಚೆಗೆ ಮುಂದಾದ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಅವರಿಗೆ ಸಿಇಒ ಓಂಕಾ ರಪ್ಪ,ಟ್ರಜರಿ ಇಂದು ಲಾಕ್ ಆಗಲಿದ್ದು,ಬಿಲ್‌ಗಳನ್ನು ಸಲ್ಲಿಸ ಬೇಕಿದೆ ಎಂದು ಮನವಿ ಮಾಡಿದರು. ಆಗ ಅಧ್ಯಕ್ಷರು ಶಿವರಾತ್ರಿ ಹಿನ್ನೆಲೆ 12 ರಂದು ಸಭೆ ಕರೆಯಲಾಗಿದೆ. ಮಾರ್ಚ್ 10ರ ಬದಲು 12 ರಂದು ಖಜಾನೆ ಲಾಕ್ ಆಗುತ್ತಿದೆ. ಜಿಲ್ಲೆಗೆ ಬಂದ ಅನುದಾನ ಯಾವುದೇ ಕಾರಣಕ್ಕೂ ಹಿಂದಕ್ಕೆ ಹೋಗಬಾರದೆಂದರು. ಮೊದಲಿಗೆ ಸಿಎಒ ಬಳಿಕ ಶಿಕ್ಷಣ,ಪಿಆರ್‌ಇಡಿ ಮತ್ತಿತರ ಇಲಾಖೆ ಅಧಿಕಾರಿಗಳು ಅವಸರದಲ್ಲಿ ಸಭೆಯಿಂದ ಹೊರ ನಡೆದರು. ಸುತ್ತೋಲೆ ಉಲ್ಲಂಘಿಸಿ 1ರಿಂದ 5ನೇ ತರಗತಿಗಳನ್ನು ನಡೆಸುತ್ತಿರುವ ಹಾಗೂ ಪೂರ್ಣ ಪ್ರಮಾಣದ ಶುಲ್ಕ ಭರ್ತಿಗೆ ಒತ್ತಾಯಿಸುವ ಖಾಸಗಿ ಶಾಲಾಡಳಿತಗಳಿಗೆ ನೋಟಿಸ್ ಜಾರಿ ಮಾಡುವಂತೆ ಅಧ್ಯಕ್ಷರು ಡಿಡಿಪಿಐ ರವಿಶಂಕರ್ ರೆಡ್ಡಿ ಅವರಿಗೆ ತಾಕೀತು ಮಾಡಿದರು. ಹಾಸ್ಟೆಲ್‌ಗಳ ಅವ್ಯವಸ್ಥೆ ವಿರುದ್ಧ ಅಧ್ಯಕ್ಷರು ತೀವ್ರ ಅಸಮಾಧಾನ ಹೊರ ಹಾಕಿದರು.

    15ರಿಂದ ದುಡಿಯೋಣ ಬಾ: ಜಿಲ್ಲಾದ್ಯಂತ ಮಾ.15ರಿಂದ ಮೂರು ತಿಂಗಳ ಕಾಲ ದುಡಿಯೋಣ ಬಾ ಅಭಿಯಾನ ಹಮ್ಮಿ ಕೊಳ್ಳ ಲಾಗಿದೆ ಎಂದು ಸಿಇಒ ನಂದಿನಿದೇವಿ ಹೇಳಿದರು. ವಲಸೆ ತಡೆಗೆನರೇಗಾದಡಿ ಹಮ್ಮಿಕೊಂಡಿರುವ ಈ ಅಭಿಯಾನ ಯಶಸ್ವಿಯಾಗ ಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts