More

    ಟೆಂಡರ್​ಶ್ಯೂರ್ ರಸ್ತೆ ಮತ್ತೆ ಅತಿಕ್ರಮಣ

    ಹುಬ್ಬಳ್ಳಿ: ಇಲ್ಲಿನ ಶ್ರೀ ಕಾಡಸಿದ್ಧೇಶ್ವರ ಕಾಲೇಜ್ ಬಳಿಯಿಂದ ತೋಳನಕೆರೆವರೆಗೆ ನಿರ್ವಣವಾಗಿರುವ ಟೆಂಡರ್​ಶ್ಯೂರ್ ರಸ್ತೆ ಮತ್ತೆ ಅತಿಕ್ರಮಣವಾಗಿದೆ. ವ್ಯಾಪಾರಿಗಳು, ಕೆಲ ಮನೆಗಳ ಮಾಲೀಕರು ತಮ್ಮ ಸಾಮಗ್ರಿಗಳನ್ನು ಸಂಗ್ರಹಿಸಿಡಲು ಬಳಸಿಕೊಳ್ಳುತ್ತಿದ್ದಾರೆ.

    ನಗರದ ಅಂದ ಹೆಚ್ಚಿಸಬೇಕಿದ್ದ ಟೆಂಡರ್​ಶ್ಯೂರ್ ರಸ್ತೆ ಅತಿಕ್ರಮಣಕ್ಕೆ ಕಾರಣವಾಗುತ್ತಿದೆ. ಆರಂಭದಲ್ಲಿ ಎಲ್ಲರೂ ಟೆಂಡರ್​ಶ್ಯೂರ್ ರಸ್ತೆ ಬಗೆಗೆ ಹೊಗಳುತ್ತಿದ್ದರು. ಈಗ ಅಧಿಕಾರಿಗಳ ನಿರ್ಲಕ್ಷ್ಯಂದ ಉಗಿಯುತ್ತಿದ್ದಾರೆ.

    ರಸ್ತೆಯಲ್ಲೇ ಎಳನೀರು ಮಾರಾಟ ಜೋರಾಗಿ ನಡೆಯುತ್ತಿದೆ. ರಸ್ತೆಗುಂಟ ಕಾಲೇಜ್​ಗಳಿರುವುದರಿಂದ ವಿದ್ಯಾರ್ಥಿಗಳನ್ನು ಆಕರ್ಷಿಸಲು ಪಾನಿಪೂರಿ, ಬೇಲ್​ಪೂರಿ ಸೇರಿ ಇತರ ವ್ಯಾಪಾರಿಗಳು ಠಿಕಾಣಿ ಹೂಡಿದ್ದಾರೆ. ಕೆಲ ಅಂಗಡಿ ಹಾಗೂ ಮನೆಗಳ ಮಾಲೀಕರು ಇಟ್ಟಿಗೆ ಮತ್ತಿತರ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿದ್ದಾರೆ.

    ಇದು ಒಂದು ದಿನದ ಸಮಸ್ಯೆಯಲ್ಲ. ಸೈಕಲ್ ಟ್ರ್ಯಾಕ್, ಪಾದಚಾರಿ ರಸ್ತೆಗಳು ಈಗಾಗಲೇ ಛಿದ್ರಗೊಂಡಿವೆ. ಜನರು ಓಡಾಡಲು ಮನಸು ಮಾಡುತ್ತಿಲ್ಲ. ಏಕೆಂದರೆ ಅಲ್ಲಿ ರಸ್ತೆಯೇ ಇಲ್ಲ. ಟೆಂಡರ್​ಶ್ಯೂರ್ ರಸ್ತೆ ಬೈಕ್ ಓಡಿಸುವವರ ಸ್ವರ್ಗವಾಗಿದೆ. ಅದೆಷ್ಟೋ ಅವಘಡಗಳು ಸಂಭವಿಸಿವೆ. ಆದರೂ ಆ ರಸ್ತೆಗುಂಟ ಸರಿಯಾದ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪವಿದೆ.

    ಈಗಾಗಲೇ ಮೂರು ಜನರಿಗೆ ದಂಡ ವಿಧಿಸಲಾಗಿದೆ. ಎಳನೀರು, ಪಾನಿಪೂರಿ ಅಂಗಡಿಗಳನ್ನು ಸೀಜ್ ಮಾಡಲಾಗಿದೆ. ಆದರೂ ಮತ್ತೆ ಅತಿಕ್ರಮಿಸಿರುವುದು ಗೊತ್ತಿಲ್ಲ. ಮತ್ತೊಮ್ಮೆ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು.

    | ಆನಂದ ಝುಳಕಿ, ಪಾಲಿಕೆ ವಲಯ 5ರ ಸಹಾಯಕ ಆಯುಕ್ತ,

    ಅಧಿಕಾರಿಗಳ ನಿರ್ಲಕ್ಷ್ಯ

    ಮೊದಲಿನಿಂದಲೂ ರಸ್ತೆ ಅತಿಕ್ರಮಣ, ಒತ್ತುವರಿ ಸೇರಿ ಬಹಳಷ್ಟು ಅವಘಡಗಳು ಆಗುತ್ತಿರುವುದನ್ನು ಸಾರ್ವಜನಿಕರು ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೂ ದಪ್ಪ ಚರ್ಮದ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ವ್ಯಾಪಾರಿಗಳು ಹಾಗೂ ಮನೆ ಕಟ್ಟಿಸುವವರಿಗೆ ಹೆದರಿಕೆ ಇಲ್ಲವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯಂದ ಮತ್ತೇ ಮತ್ತೆ ಅತಿಕ್ರಮಣ ಜಗಜ್ಜಾಹೀರಾ ಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts