More

    ಟಿಎಪಿಸಿಎಂಎಸ್ 3.42 ಲಕ್ಷ ರೂ. ನಿವ್ವಳ ಲಾಭ

    ಅರಕಲಗೂಡು: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು (ಟಿಎಪಿಸಿಎಂಎಸ್)2021-22ನೇ ಸಾಲಿನಲ್ಲಿ 3.32 ಕೋಟಿ ರೂ. ವಹಿವಾಟು ನಡೆಸಿದ್ದು, 3.42 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ. ಸತೀಶ್ ತಿಳಿಸಿದರು.

    ಪಟ್ಟಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು, 1949ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಕೆಲಕಾಲ ಸ್ಥಗಿತಗೊಂಡಿತ್ತು. ಹಿರಿಯ ಸಹಕಾರಿಗಳ ಪ್ರಯತ್ನದಿಂದ ಪುನರುಜ್ಜೀವನಗೊಂಡು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದು, ಲಾಭ ಗಳಿಕೆಯತ್ತ ಮುಖ ಮಾಡಿದೆ ಎಂದರು.

    ಸಂಘಕ್ಕೆ ಸಗಟು ರಸಗೊಬ್ಬರ ಮಾರಾಟ ಕೇಂದ್ರವನ್ನು ಮಂಜೂರು ಮಾಡಿಕೊಡುವಂತೆ ಕೋರಲಾಗಿದೆ. ಪೊಲೀಸ್ ಠಾಣೆ ಬಳಿ ಇರುವ ಖಾಲಿ ನಿವೇಶನದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಪ್ರಯತ್ನ ನಡೆದಿದೆ. ಇದಕ್ಕೆ ಮರಾಟ ಮಾಹಾಮಂಡಲದಿಂದ 10 ಲಕ್ಷ ರೂ. ಹಣದ ಭರವಸೆ ದೊರೆತಿದೆ. ತಾಲೂಕಿನ ರುದ್ರಪಟ್ಟಣದಲ್ಲಿ ಇರುವ ಸಂಘದ ಕಟ್ಟಡವನ್ನು ನವೀಕರಿಸಿ ವಹಿವಾಟು ನಡೆಸುಲು ಸಿದ್ಧತೆ ನಡೆದಿದೆ. ಸಂಘವು ರಸಗೊಬ್ಬರ, ಕೀಟನಾಶಕ, ಬಿತ್ತನೆ ಬೀಜಗಳ ವಹಿವಾಟು ನಡೆಸುತ್ತಿದ್ದು, ಸದಸ್ಯರು ಸಂಘದ ಅಭಿವೃದ್ಧಿ ಕಾರ್ಯಕ್ಕೆ ಸಲಹೆ, ಸಹಕಾರ ನೀಡುವಂತೆ ಕೋರಿದರು.

    ಕಾರ್ಯದರ್ಶಿ ಡಿ.ಜೆ. ಜಯಶಂಕರ್ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷ ಶಾಮಿರ್ ಷರೀಪ್, ನಿರ್ದೇಶಕರಾದ ಪಿ. ಬೊಮ್ಮೇಗೌಡ, ಆರ್. ನಿಂಗೇಗೌಡ, ಎಸ್.ಕೆ. ಕೃಷ್ಣ, ಎಂ.ಎಸ್. ರವೀಂದ್ರ, ನಂಜುಂಡಸ್ವಾಮಿ, ಎಂ. ಚಂದ್ರಪ್ಪ, ಆರ್.ಬಿ. ಬಸವಲಿಂಗಪ್ಪ, ಕೆಂಪಯ್ಯ, ದೇವರಾಜು, ಕೆ.ಕೆ. ಯೋಗೇಶ್ವರಿ, ಲಕ್ಷ್ಮಮ್ಮ ಮತ್ತು ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts