More

    ಟಿಎಂಎಸ್​ಗೆ 16 ಸದಸ್ಯರ ಅವಿರೋಧ ಆಯ್ಕೆ

    ಸಿದ್ದಾಪುರ: ತಾಲೂಕಿನ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ (ಟಿಎಂಎಸ್) ಕ್ಕೆ 16 ಸದಸ್ಯರು ಅವಿರೋಧವಾಗಿ ಆಯ್ಕೆ ಆಗಿದ್ದು, ಅದರಲ್ಲಿ ಒಂಬತ್ತು ಜನ ಹಳಬರು ಹಾಗೂ ಏಳು ಜನ ಹೊಸಬರಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಹೇಳಿದರು.

    ಪಟ್ಟಣದ ಟಿಎಂಎಸ್ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 25 ಜನ ನಾಮಪತ್ರ ಸಲ್ಲಿಸಿದ್ದರು. ಅ. 8ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಒಂಬತ್ತು ಜನರು ನಾಮಪತ್ರ ವಾಪಸ್ ಪಡೆದಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದೇವೆ ಎಂದರು.

    ಉಂಬಳಮನೆ ಹೋಬಳಿಗೆ ಆರು ಸದಸ್ಯರು: ಸಂಘದ ಇತಿಹಾಸದಲ್ಲಿಯೇ ಇದು ಪ್ರಥಮ ಎನ್ನುವಂತೆ ಉಂಬಳಮನೆ ಹೋಬಳಿಗೆ ಆರು ಸದಸ್ಯರಿಗೆ ಪ್ರಾತಿನಿಧ್ಯ ನೀಡಲಾಗಿದ್ದು , ಎಲ್ಲರೂ ಸಹಕಾರಿ ಸಂಘಗಳ ಬಗ್ಗೆ ತಿಳಿವಳಿಕೆ ಉಳ್ಳವರೇ ಆಗಿದ್ದಾರೆ ಎಂದು ಹೇಳಿದರು.

    ಈ ಹಿಂದಿನ ಆಡಳಿತ ಮಂಡಳಿಯವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಕೆಲಸ ಮಾಡಿದ್ದಾರೆ. ಮುಂಬರುವ ಹೊಸ ಆಡಳಿತ ಮಂಡಳಿಯೂ ಉತ್ತಮವಾಗಿ ಸಂಘದ ಸದಸ್ಯರ ಸಮಸ್ಯೆಗೆ ಸ್ಪಂದಿಸಿ ಕಾರ್ಯನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಂಘದ ಚುನಾವಣೆ ಘೊಷಣೆ ಆದ ನಂತರ ಕೆಲವರು ಅನವಶ್ಯಕ ಗೊಂದಲ ಉಂಟು ಮಾಡಿದ್ದಾರೆ. ಯಾವ ಉದ್ದೇಶದಿಂದಲೂ ಸಂಘವು ತಪ್ಪು ಮಾಡಿಲ್ಲ. ಸಹಕಾರಿ ಸಂಘಗಳ ನೂತನ ನಿಯಮಾವಳಿಯಂತೆ ಸಂಘದ ಸದಸ್ಯನಾದವನು ಸತತ ಮೂರು ವರ್ಷ ವಾರ್ಷಿಕ ಮಹಾಸಭೆಗೆ ಆಗಮಿಸಿ ಸಹಿ ಹಾಕಿರಬೇಕು ಹಾಗೂ ಮಹಸೂಲನ್ನು ಸಂಘದಲ್ಲಿ ವಿಕ್ರಿ ಮಾಡಿರಬೇಕಾಗುತ್ತದೆ. ಸಹಕಾರಿ ನಿಯಮಾಳಿಯನ್ನು ಸಂಘ ಪಾಲಿಸಿದೆ ಎಂದು ಹೇಳಿದರು.

    ಅವಿರೋಧವಾಗಿ ಆಯ್ಕೆ ಆದ ಎಲ್ಲ ಸದಸ್ಯರು, ಪ್ರಮುಖರಾದ ಎಂ.ಆರ್. ಹೆಗಡೆ ನೈಗಾರ, ಎಂ.ಆರ್. ಭಟ್ಟ ತಟ್ಟಿಕೈ, ಕೆ.ಜಿ.ನಾಗರಾಜ, ಎಂ.ಐ. ನಾಯ್ಕ ಕೆಳಗಿನಸಸಿ, ಸಿ.ಪಿ. ಗೌಡ, ವ್ಯವಸ್ಥಾಪಕ ಸತೀಶ ಹೆಗಡೆ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts