More

    ಟಿಆರ್​ಸಿಗೆ 73.45 ಲಕ್ಷ ರೂ. ನಿವ್ವಳ ಲಾಭ

    ಶಿರಸಿ: ಇಲ್ಲಿನ ತೋಟಗಾರ್ಸ್ ರೂರಲ್ ಕೋ- ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿ (ಟಿಆರ್​ಸಿ)ಯ 2019-20ನೇ ಸಾಲಿನಲ್ಲಿ 73.45 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಹೇಳಿದರು.

    ಟಿಎಸ್​ಎಸ್ ಸಭಾಂಗಣದಲ್ಲಿ ಮಂಗಳವಾರ ಸಂಘದ 107ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸಂಘವು ಷೇರು ಬಂಡವಾಳ ಸ್ವೀಕಾರ, ನಿಧಿಗಳ ಶೇಖರಣೆ, ಸದಸ್ಯರಿಂದ ಠೇವು ಸಂಗ್ರಹ ಹೀಗೆ ಎಲ್ಲ ವಿಭಾಗಗಳಲ್ಲೂ ಸಂಘವು ಪ್ರಗತಿ ದಾಖಲಿಸಿದೆ ಎಂದರು.

    ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಬೆಳೆಸಾಲ ಸಿಗುತ್ತಿದ್ದರಿಂದ ಕೃಷಿ ಚಟುವಟಿಕೆಗೆ ಪೋ›ತ್ಸಾಹ ನೀಡಿದಂತಾಗುತ್ತಿತ್ತು. ಇದೀಗ ಈ ಸಾಲಕ್ಕೆ ಸರ್ಕಾರವು ಕೆಲವು ಷರತ್ತುಗಳನ್ನು ವಿಧಿಸಿದೆ. ಈ ಷರತ್ತುಗಳು ಅವಾಸ್ತವಿಕವಾಗಿದ್ದು, ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು.

    ಇದೇ ವೇಳೆ ಸಂಘದ ಅಧಿಕೃತ ಜಾಲತಾಣ ಹಾಗೂ ರೈತನಾಡಿ ಪುಸ್ತಕ ಬಿಡುಗಡೆಗೊಳಿಸಲಾಯಿತು. ರೈತನಾಡಿ ಸಂಚಿಕೆಯ ಪ್ರಧಾನ ಸಂಪಾದಕ ಹಾಗೂ ಸಂಘದ ನಿರ್ದೇಶಕ ಜಿ.ವಿ. ಜೋಶಿ ಕಾಗೇರಿ, ಶಿವಾನಂದ ಭಟ್ಟ ನಿಡಗೋಡ ಪುಸ್ತಕದ ಕಿರು ಪರಿಚಯ ಮಾಡಿದರು. ಸಂಪಾದಕ ಮಂಡಳಿ ಸದಸ್ಯ ರಮಾನಂದ ಐನಕೈ ಅವರನ್ನು ಗೌರವಿಸಲಾಯಿತು.

    ಸಂಘದ ಉಪಾಧ್ಯಕ್ಷ ಲೋಕೇಶ ಹೆಗಡೆ ಹುಲೇಮಳಗಿ ಹಾಗೂ ಸಂಘದ ಎಲ್ಲ ನಿರ್ದೇಶಕರು ಇದ್ದರು. ಮುಖ್ಯ ಕಾರ್ಯನಿರ್ವಾಹಕ ರಮೇಶ ಹೆಗಡೆ ಬಾಳೆಗದ್ದೆ ವಾರ್ಷಿಕ ವರದಿ ವಾಚಿಸಿದರು. ಜಿ.ಜಿ. ಹೆಗಡೆ ಕುರುವಣಿಗೆ, ಸಂಘದ ನಿರ್ದೇಶಕ ವಿ.ಎನ್. ಹೆಗಡೆ ಮೂಲೇಮನೆ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts