More

    ಜ್ವರ-ಕೆಮ್ಮು ಬಂದರೆ ಕಿಮ್ಸ್​ ಗತಿ

    ಹುಬ್ಬಳ್ಳಿ: ತೀವ್ರ ಉಸಿರಾಟದ ತೊಂದರೆ (ಎಸ್​ಎಆರ್​ಐ), ಸಣ್ಣದಾಗಿ ಜ್ವರ-ಕೆಮ್ಮು (ಐಎಲ್​ಐ) ಬಂದವರಿಗೆ ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯೇ (ಕಿಮ್್ಸ) ಗತಿಯಾಗಿದೆ. ಕರೊನಾ ಸೋಂಕು ತಮಗೂ ಬಂದೀತು ಎಂಬ ಆತಂಕದಿಂದ ಇಂಥ ಕಾಯಿಲೆಯುಳ್ಳವರನ್ನು ಕೆಲ ಖಾಸಗಿ ಆಸ್ಪತ್ರೆಯವರು ಸಾಗ ಹಾಕುತ್ತಿದ್ದಾರೆ.

    ಕಿಮ್ಸ್​ನಲ್ಲಿ ಕರೊನಾ ಸೋಂಕಿತ ವ್ಯಕ್ತಿಗಳು ದಾಖಲಾಗಿದ್ದಾರೆ. ಕರೊನಾ ಪೀಡಿತರಿಗಾಗಿ ಪ್ರತ್ಯೇಕ ಕಟ್ಟಡದಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದಾಗ್ಯೂ ಹಲವು ರೋಗಿಗಳು ಕಿಮ್್ಸ ಒಪಿಡಿಗೆ ಬರಲು ಹಿಂದು ಮುಂದು ನೋಡುತ್ತಿದ್ದಾರೆ. ಒಂದು ವೇಳೆ ತೀವ್ರ ಉಸಿರಾಟದ ತೊಂದರೆ, ಸಣ್ಣದಾಗಿ ಜ್ವರ-ಕೆಮ್ಮು ಬಂದರೆ ಖಾಸಗಿ ಆಸ್ಪತ್ರೆ ಬದಲು ನೇರವಾಗಿ ಕಿಮ್ಸ್​ಗೆ ಬರುವಂತಾಗಿದೆ.

    ಕೆಲ ಖಾಸಗಿ ಆಸ್ಪತ್ರೆಯವರು ದೂರ: ಜ್ವರ-ಕೆಮ್ಮು, ಉಸಿರಾಟದ ತೊಂದರೆಯಿರುವವರಿಗೆ ಕೆಲವು ಖಾಸಗಿ ಆಸ್ಪತ್ರೆಯವರು ಹೊರ ರೋಗಿಗಳ ವಿಭಾಗದಲ್ಲೂ ಚಿಕಿತ್ಸೆ ನೀಡುತ್ತಿಲ್ಲ. ಕರೊನಾ ಸೋಂಕು ಇರಬಹುದೆ ಎಂಬ ಆತಂಕದಿಂದ ಅಂಥವರಿಗೆ ಕಿಮ್್ಸ ದಾರಿ ತೋರಿಸುತ್ತಿದ್ದಾರೆ ಎನ್ನಲಾಗಿದೆ. ಹಾಗಾಗಿ ಕಿಮ್್ಸ ಮೇಲೆ ಮತ್ತಷ್ಟು ಒತ್ತಡ ಬೀಳಲಾರಂಭಿಸಿದೆ.

    ಕೋವಿಡ್ ಟೆಸ್ಟ್ ಕಡ್ಡಾಯ

    ತೀವ್ರ ಉಸಿರಾಟದ ತೊಂದರೆ, ಜ್ವರ-ಕೆಮ್ಮಿನಿಂದ ಬಳಲುತ್ತಿರುವ ವ್ಯಕ್ತಿಗಳು ಚಿಕಿತ್ಸೆಗೆ ಬಂದರೆ ಅಂಥವರಿಗೆ ಗಂಟಲ ದ್ರವ ಮಾದರಿ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಏಕೆಂದರೆ, ಈಗಾಗಲೇ ನೇರವಾಗಿ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆಗೆ ಬಂದ ಇಬ್ಬರು ವ್ಯಕ್ತಿಗಳಲ್ಲಿ ನಂತರ ಕರೊನಾ ಸೋಂಕು ಪತ್ತೆಯಾಗಿ ತೀವ್ರ ಗೊಂದಲಕ್ಕೆ ಕಾರಣವಾಗಿತ್ತು. ಹೀಗಾಗಿ ಮತ್ತಷ್ಟು ಜಾಗೃತಿ ವಹಿಸಲಾಗುತ್ತಿದೆ.

    ತೀವ್ರ ಉಸಿರಾಟದ ತೊಂದರೆ, ಕೆಮ್ಮು-ಜ್ವರ ಬಂದವರು ನೇರವಾಗಿ ಕಿಮ್ಸ್​ಗೆ ಬರುತ್ತಿದ್ದಾರೆ. ಆದರೆ ಆತಂಕವೇನಿಲ್ಲ. ಸ್ವಲ್ಪ ಒತ್ತಡ ಅನಿಸಿದರೂ ನಮ್ಮ ವೈದ್ಯರ ತಂಡ ಕರ್ತವ್ಯ ನಿರ್ವಹಣೆ ಮಾಡುತ್ತಿದೆ.

    | ಡಾ. ರಾಜಶೇಖರ ದ್ಯಾಬೇರಿ, ಉಪ ವೈದ್ಯಕೀಯ ಅಧೀಕ್ಷಕ, ಕಿಮ್್ಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts