More

    ಜ್ಞಾನಾರ್ಜನೆಗೆ ಪಠ್ಯೇತರ ಚಟುವಟಿಕೆ ಅಗತ್ಯ

    ಚಿತ್ರದುರ್ಗ:ಒಳ್ಳೆಯ ಸಂಸ್ಕಾರ ಮಕ್ಕಳ ಉತ್ತಮ ಭವಿಷ್ಯಕ್ಕೆ ಪೂರಕವೆಂದು ಹಿರಿಯ ವಕೀಲ ಬಿ.ಕೆ.ರೆಹಮತ್‌ವುಲ್ಲಾ ಹೇಳಿದರು.
    ನಗರದ ಮಿಲ್ ಏರಿಯಾ ಬಡಾವಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ‘ಆಟಗಳಲ್ಲಿ ಪಾಠ’ ಪಠ್ಯೇತರ ಚಟುವಟಿಕೆಗಳ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಅಧ್ಯಯನ ಜತೆ ಪಠ್ಯೇತರ ಚಟುವಟಿಕೆಗಳು ಜ್ಞಾನಾರ್ಜನೆಗೆ ಹೆಚ್ಚು ಸಹಕಾರಿ ಆಗಲಿದೆ. ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಬಾಲ್ಯ ವಿವಾಹಕ್ಕೆ ಅಸ್ಪದ ಕೊಡಬಾರದು ಎಂದರು.
    ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕಿ ದಯಾ ಪುತ್ತೂರ್ಕರ್ ಮಾತನಾಡಿ, ಪ್ರತಿ ವಿದ್ಯಾರ್ಥಿಯಲ್ಲಿರು ಪ್ರತಿಭೆ ಅನಾವರಣಕ್ಕೆ ಇಂಥ ಕಾರ್ಯಕ್ರಮಗಳು ಸಹಕಾರಿ ಎಂದು ತಿಳಿಸಿದರು.
    ಲೋಕೋಪಯೋಗಿ ಇಲಾಖೆ ವ್ಯವಸ್ಥಾಪಕ ಮೊಹಮ್ಮದ್ ಸಾದತ್ ಮಾತನಾಡಿದರು. ರಸಪ್ರಶ್ನೆ ಸ್ಪರ್ಧೆವಿಜೇತ ವಿದ್ಯಾರ್ಥಿಗಳಾದ ಆಕಾಶ್ (ಪ್ರ), ಆಧ್ಯಾ (ದ್ವಿ) ಹಾಗೂ ಪೂರ್ವಿತಾ (ತೃತೀಯ) ಅವರಿಗೆ ಬಹುಮಾನ ವಿತರಿಸಲಾಯಿತು.
    ಮುಖ್ಯಶಿಕ್ಷಕ ರಾಜಣ್ಣ, ಶಿಕ್ಷಕಿಯರಾದ ಸರಸ್ವತಿ, ಗಿರಿಜಮ್ಮ ಇದ್ದರು. ಶಿಕ್ಷಕಿ ಶೋಭಾ ಮಲ್ಲಿಕಾರ್ಜುನ್ ಕಾರ್ಯಕ್ರಮ ನಿರೂಪಿಸಿದರು.
    ಜಿಲ್ಲಾ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಹಾಗೂ ಕೊರ‌್ಲಕುಂಟೆ ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts