More

    ಜ್ಞಾನದ ಕೌಶಲ ಸಮಾಜ ಸೇವೆಗೆ ಬಳಸಿ

    ಬಾಗಲಕೋಟೆ: ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ಔಷಧ ವಿಜ್ಞಾನ ಸಂಶೋಧನಾ ಕೌಶಲ್ಯವನ್ನು ಸಮಾಜಸೇವೆಗೆ ಬಳಸಿರಿ ಎಂದು ಪುಣೆಯ ಬಿವಿಜಿ ಲೈಪ್ ಸೈನ್ಸಸ್ ಲಿಮೀಟೇಡ್ ನಿದೇಶಕರಾದ ಡಾ.ಪವನಕುಮಾರ ಸಿಂಗ್ ಹೇಳಿದರು.

    ಬ.ವಿ.ವ. ಸಂಘದ ಸಭಾಂಗಣದಲ್ಲಿ ಮಂಗಳವಾರ ನಡೆದ ಬಾಗಲಕೋಟೆಯ ಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯ ಬಿ.ಪಾರ್ಮ, ಎಂ.ಪಾರ್ಮ,ಹಾಗೂ ಫಾರ್ಮ ಡಿ ಮತ್ತು ಪಿಎಚ್ ಡಿ ಪದವಿ ಪ್ರಧಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿ ಮಾತನಾಡಿದರು.

    ದ್ಯಾರ್ಥಿಗಳು ಅಧ್ಯಯನವನ್ನು ನಿರಂತರವಾಗಿಸಿ ಬರುವ ಸೋಲುಗಳನ್ನು ಗೆಲುವಿನ ಮೆಟ್ಟಿಲಾಗಿಸಿಕೊಂಡು ಗಟ್ಟಿಯಾದ ಪರಿಶ್ರಮದಿಂದ ದೊಡ್ಡಗುರಿ ಸಾಧಿಸುವಲ್ಲಿ ಸಾಗಬೇಕು ಆಗ ಸಾಧನೆ ಸರಳವಾಗುತ್ತದೆ, ಇಂದು ಜಗತ್ತಿನ ತುಂಬಾ ಭಾರತೀಯ ವಿಜ್ಞಾನಿಗಳು, ಸಂಶೋಧಕರು, ವೈಧ್ಯರು ಇದ್ದಾರೆ, ಕಲಿತ ಶಿಕ್ಷಣವನ್ನು ಅಭಿವೃದ್ಧಿಗೊಳಿಸಿಕೊಂಡು ಉತ್ತಮ ಕಾರ್ಯಕ್ಷಮತೆಯೊಂದಿಗೆ ಸಾಗಿರಿ ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಸಂಘದ ಗೌರವ ಕಾರ್ಯದರ್ಶಿಗಳಾದ ಮಹೇಶ.ಎನ್. ಅಥಣಿ ಭಾರತದಲ್ಲಿ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಮುಂಚೂನಿಯಲ್ಲಿ ಸಾಗುತ್ತಿದ್ದು ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದು ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಲಿ ಎಂದರು.

    ಪ್ರಸ್ತಾವಿಕವಾಗಿ ವಾರ್ಷಿಕ ವರದಿಯನ್ನು ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ: ಚಂದ್ರಶೇಖರ ವಿ.ಎಮ್ ಮಹಾವಿದ್ಯಾಲಯ ನಡೆದು ಬಂದ ಬಗ್ಗೆ ಮಾಹಿತಿ ನೀಡಿದರು. ಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ .ಎಸ್. ಸಾಸನೂರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts