More

    ಜೋಗದಲ್ಲಿ ರ್ಪಾಂಗ್ 4 ಗಂಟೆ ಮಾತ್ರ

    ಕಾರ್ಗಲ್: ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಹೆಚ್ಚುತ್ತಿರುವ ಪ್ರವಾಸಿಗರ ದಟ್ಟಣೆ ಸಮರ್ಪಕವಾಗಿ ನಿರ್ವಹಿಸಲು ಮುಂದಾಗಿರುವ ಜಿಲ್ಲಾಡಳಿತ ಮತ್ತು ಜೋಗ ನಿರ್ವಹಣಾ ಪ್ರಾಧಿಕಾರ ಪ್ರವಾಸಿಗರು ರ್ಪಾಂಗ್ ಪ್ರದೇಶದಲ್ಲಿ ಕೇವಲ ನಾಲ್ಕು ತಾಸು ಮಾತ್ರ ತಮ್ಮ ವಾಹನ ನಿಲ್ಲಿಸಲು ಅವಕಾಶ ನೀಡಿದ್ದು ಅದು ಮೀರಿದರೆ ಹೆಚ್ಚುವರಿ ಪ್ರತಿ ಗಂಟೆಗೆ ದಂಡ ಹಾಕಲಾಗá-ತ್ತದೆ.

    ಗುರá-ವಾರ ಎಸ್ಪಿ ಜತೆ ಜೋಗಕ್ಕೆ ಭೇಟಿ ನೀಡಿ ಪರಿಶೀಲಿಸಿದ ಡಿಸಿ ಕೆ.ಬಿ.ಶಿವಕá-ಮಾರ್ ಈ ಘೊಷಣೆ ಮಾಡಿದ್ದು ಜೋಗದಲ್ಲಿ ಪ್ರವಾಸಿಗರಿಗೆ ನಾಲ್ಕು ಕಡೆ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಗುತ್ತಿದ್ದು ಪ್ರವೇಶ ದ್ವಾರದ ಒಳಭಾಗಕ್ಕೆ ಶಾಲಾ ಮಕ್ಕಳ ವಾಹನ ಹೊರತುಪಡಿಸಿ ಕಾರು ಮತ್ತು ಬೈಕ್​ಗೆ ಮಾತ್ರ ಪ್ರವೇಶ ನೀಡಲಾಗá-ತ್ತದೆ ಎಂದು ಹೇಳಿದರು.

    ಒಳಭಾಗದಲ್ಲಿ ತಾವು ತಂದ ತಿಂಡಿ ಹಾಗೂ ಊಟವನ್ನು ಪ್ರವಾಸಿಗರು ಮಾಡುವಂತಿಲ್ಲ. ಪ್ರವೇಶ ದ್ವಾರದಿಂದ ಒಳ ಬಂದ ಪ್ರವಾಸಿಗರು ಒಂದೇ ಕಡೆಯಿಂದ ಏಕಮುಖವಾಗಿ ಸಂಚರಿಸಬೇಕು. ಜಲಪಾತ ವೀಕ್ಷಣೆ ನಡೆಸಿ ಮತ್ತೊಂದು ಕಡೆಯಿಂದ ಹೊರಬರುವ ವ್ಯವಸ್ಥೆ ಮಾಡಲಾಗುತ್ತಿದ್ದು ಇದರಿಂದ ಪ್ರವಾಸಿಗರು ಸುಲಭವಾಗಿ ವೀಕ್ಷಣೆಯನ್ನು ಮುಗಿಸಿ ತೆರಳಬಹá-ದು. ಜೋಗ ಜಲಪಾತದ ಪ್ರವೇಶ ದ್ವಾರಕ್ಕೆ ಬ್ಯಾರಿಕೇಡ್ ಹಾಕá-ವ ಜತೆಗೆ ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.

    ಮೈಕ್ ಮೂಲಕ ಜಾಗೃತಿ: ಪ್ರಾಧಿಕಾರದ ನಿಯಮ ಪಾಲಿಸುವಂತೆ ಧ್ವನಿವರ್ಧಕದ ಮೂಲಕ ಮೈಕ್​ನಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಡಿಸಿ ತಿಳಿಸಿದರು. ವಿಶೇಷವಾಗಿ ಶನಿವಾರ ಹಾಗೂ ಭಾನುವಾರ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಲಪಾತದ ಪ್ರಮುಖ ವೀಕ್ಷಣಾ ಪ್ರದೇಶವಾದ ಮೈಸೂರು ಬಂಗಲೆ ಮುಂಭಾಗದಲ್ಲಿ ಅತಿ ಹೆಚ್ಚು ನೂಕು ನುಗ್ಗಲು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಮೈಕ್ ಮೂಲಕ ಪ್ರವಾಸಿಗರು ಅಗತ್ಯವಾಗಿ ಮಾಸ್ಕ್ ಧರಿಸುವಂತೆ, ಅಂತರ ಕಾಪಾಡುವಂತೆ, ಹೆಚ್ಚು ಸಮಯವನ್ನು ವ್ಯಯ ಮಾಡದಂತೆ ತಿಳಿ ಹೇಳಲಾಗá-ವುದು ಎಂದು ಅವರು ತಿಳಿಸಿದರು.

    ಉಪವಿಭಾಗಾಧಿಕಾರಿ ಡಾ. ಎಲ್.ನಾಗರಾಜ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಸ್.ರಾಮಕೃಷ್ಣ, ಡಿವೈಎಸ್ಪಿ ವಿನಾಯಕ್, ಜೆಎಂಎ ವ್ಯವಸ್ಥಾಪಕ ನಿಸ್ಸಾರ್, ಮಯೂರ ವ್ಯವಸ್ಥಾಪಕ ವಿಜಯೇಂದ್ರ ನಾಯಕ್, ಪಿಎಸ್​ಐ ನಿರ್ಮಲಾ, ಮುಖ್ಯಾಧಿಕಾರಿ ಲಕ್ಷ್ಮೀನಾರಾಯಣ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts