More

    ಜೋಗದಲ್ಲಿ ಜಿಪ್​ಲೈನ್ ಸಾಹಸಕ್ಕೆ ವೇದಿಕೆ

    ಕಾರ್ಗಲ್: ರಾಜ್ಯದಲ್ಲಿ ಮೊದಲ ಬಾರಿಗೆ ಜಿಪ್​ಲೈನ್ ಸಾಹಸಯಾನವನ್ನು ಜೋಗ ಜಲಪಾತದಲ್ಲಿ ಪ್ರಾರಂಭಿಸಲಾಗುತ್ತಿದ್ದು ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಇದು ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

    ಜೋಗ ಜಲಪಾತದಲ್ಲಿ ಶನಿವಾರ ರಾಣಿಫಾಲ್ಸ್ ನೆತ್ತಿಯ ಮೇಲಿಂದ ಕೆಪಿಸಿ ಪ್ರವಾಸಿ ಮಂದಿರದ ಕೆಳಭಾಗದವರೆಗೆ ನಿರ್ವಿುಸಲು ಉದ್ದೇಶಿಸಿರುವ ಅಂದಾಜು 80 ಲಕ್ಷ ರೂ. ವೆಚ್ಚದ ಜಿಪ್​ಲೈನ್ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, 80 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಈಗಾಗಲೆ 40 ಲಕ್ಷ ರೂ. ಬಿಡುಗಡೆಯಾಗಿದೆ ಎಂದರು.

    ಒಂದು ಬಾರಿಗೆ ಇಬ್ಬರು ರೋಪ್​ವೇ ಮೂಲಕ ರಾಣಿಫಾಲ್ಸ್ ಜಲಪಾತದ ನೆತ್ತಿಯ ಮೇಲಿಂದ ಕೆಪಿಸಿ ಪ್ರವಾಸಿ ಮಂದಿರದ ವೀಕ್ಷಣಾ ಕೆಳಭಾಗಕ್ಕೆ ಹೋಗಬಹುದು. ಯೋಜನೆ ಕೈಗೊಳ್ಳುವಾಗ ಅಗತ್ಯ ಮುಂಜಾಗ್ರತೆಯನ್ನು ಸಹ ತೆಗೆದುಕೊಳ್ಳಲಾಗಿದೆ. ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಜಿಪ್​ಲೈನ್​ನಲ್ಲಿ ಡಬಲ್ ರೋಪ್​ನ್ನು ಅಳವಡಿಸಲಾಗುತ್ತಿದೆ. ಜಿಪ್​ಲೈನ್​ನನ್ನು 450 ಮೀಟರ್ ಉದ್ದದಲ್ಲಿ ಎರಡು ರೋಪ್​ಗಳ ಮೂಲಕ ನಿರ್ವಿುಸಲಾಗುತ್ತದೆ. ಜಿಪ್​ಲೈನ್​ಗೆ ಸಂಬಂಧಪಟ್ಟಂತೆ ಭದ್ರತೆಯನ್ನು ಗಮನದಲ್ಲಿ ಇರಿಸಿಕೊಳ್ಳಲಾಗಿದೆ ಎಂದು ಹೇಳಿದರು.

    ಗಾಜನೂರಿನಲ್ಲಿ ವೈಲ್ಡ್​ಲೈಫ್ ಪ್ರದೇಶದ 100 ಎಕರೆ ಪ್ರದೇಶದಲ್ಲಿ ಸಹ್ಯಾದ್ರಿ ಪಾರಂಪರಿಕಾ ಪ್ರಾಧಿಕಾರವನ್ನು ನಿರ್ವಿುಸಲಾಗುತ್ತಿದೆ. ಬನ್ನೇರುಘಟ್ಟದ ಮಾದರಿಯಲ್ಲಿ ಈ ಪ್ರಾಧಿಕಾರ ಕಾರ್ಯನಿರ್ವಹಿಸಲಿದೆ. ಈ ಪ್ರಾಧಿಕಾರವು ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪೂರಕವಾಗುತ್ತದೆ ಎಣದರಯ,

    ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಜೋಗ ಜಲಪಾತ ಪ್ರದೇಶ ಸಂಪೂರ್ಣ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈಗಾಗಲೇ ಜೋಗ ಅಭಿವೃದ್ಧಿ ಪ್ರಾಕಾರದ ಬದಲು ಜೋಗ ಅಭಿವೃದ್ಧಿ ಮಂಡಳಿ ಮಾಡುವಂತೆ ಪ್ರಸ್ತಾವನೆ ಸಹ ಸಲ್ಲಿಸಿದೆ. ಒಟ್ಟಾರೆ ವಿಶ್ವವಿಖ್ಯಾತ ಜೋಗ ಜಲಪಾತದ ವೈಭವ ಮರಳಿ ತರುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯಯೋಜನೆ ರೂಪಿಸಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts