More

    ಜೈನ ಸಮುದಾಯದ ಅಭಿವೃದ್ಧಿಗೆ ಯತ್ನ

    ಸಾಂಗಲಿ: ಕರ್ನಾಟಕದಂತೆ ಮಹಾರಾಷ್ಟ್ರದಲ್ಲಿಯೂ ಜೈನ ಸಮುದಾಯದ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ ಪವಾರ ಹೇಳಿದರು.

    ಸಾಂಗಲಿ ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಕ್ಷಿಣ ಭಾರತ ಜೈನ ಸಭೆ ಶತಮಾನೋತ್ಸವ ಅಧಿವೇಶದಲ್ಲಿ ಮಾತನಾಡಿದ ಅವರು, ಅಹಿಂಸಾ ಪರಮೋ ಧರ್ಮ ಭಾವನೆಯಿಂದ ಸಾಗುತ್ತಿದ್ದ ಜೈನ ಸಮುದಾಯ ದೇಶದ ಎಲ್ಲ ಸಮುದಾಯದವರಿಗೆ ಮಾದರಿಯಾಗಿದೆ. ಸಂಸ್ಕಾರ ಹಾಗೂ ಸಂಸ್ಕೃತಿ ಮೂಲ ಪ್ರತೀಕವಾಗಿರುವ ಜೈನ ಸಮುದಾಯದ ಅನೇಕ ಬೇಡಿಕೆಗಳಿವೆ. ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಯೋಜನೆ ಅಡಿ ಜೈನ ಸಮುದಾಯದವರಿಗೆ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಅದರಂತೆ ಮಹಾರಾಷ್ಟ್ರ ರಾಜ್ಯದ ಜೈನ ಸಮುದಾಯದವರ ವಿವಿಧ ಬೇಡಿಕೆಗಳನ್ನು ಚಳಿಗಾಲದ ಅಧಿವೇಶನ ಪೂರ್ವ ಸಭೆ ಆಯೋಜಿಸಿ ಈಡೇರಿಸಲು ಪ್ರಯತ್ನಿಸಲಾಗುವುದು ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಜಯಂತ ಪಾಟೀಲ ಮಾತನಾಡಿ, ಜಗತ್ತಿನಲ್ಲಿ ಶಾಂತತೆಯ ಪ್ರಾರಂಭ ಜೈನ ಸಮುದಾಯದವರಿಂದ ಆಗಿದೆ. ಜೈನ ಮುನಿಗಳು ನೀಡಿರುವ ಸಿದ್ಧಾಂತದಂತೆ ನಮ್ಮ ನಡೆ ಆಗಬೇಕಾಗಿದೆ. ರಾವಸಾಹೇಬ ಪಾಟೀಲ ಅವರು ಸಭೆಯ ಅಧ್ಯಕ್ಷರಾದ ಬಳಿಕ ಸಭೆಯ ಕಾರ್ಯವು ದೇಶಕ್ಕೆ ತಿಳಿದಿದೆ ಎಂದರು. ಮಹಾರಾಷ್ಟ್ರ ಉನ್ನತ ಶಿಕ್ಷಣ ಸಚಿವ ಉದಯ ಸಾಮಂತ ಮಾತನಾಡಿ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯ ಭಗವಾನ ಮಹಾವೀರ ಅಧ್ಯಾಯನ ಕೇಂದ್ರಕ್ಕೆ 3 ಕೋಟಿ ರೂ. ಅನುದಾನ ನೀಡಲಾಗುವುದು. ಜೈನ ಸಮುದಾಯಲ್ಲಿ ಶಾಂತಿಸಾಗರ ಮುನಿ ಮಹಾರಾಜರು ಶ್ರೇಷ್ಠರಾಗಿದ್ದರು. ಯುವಕರು ಅವರ ಆಚಾರ ವಿಚಾರಗಳಿಂದ ಸಾಗಬೇಕಾಗಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ರಾವಸಾಹೇಬ ಪಾಟೀಲ ಮಾತನಾಡಿ, ದೇಶದಲ್ಲಿ ಜೈನ ಸಮುದಾಯವರಿಗೆ ಯೋಗ್ಯ ಸ್ಥಾನಮಾನ ಸಿಗಲು ದ.ಭಾ. ಜೈನ ಸಭೆ ಪ್ರಯತ್ನಿಸುತ್ತಿದೆ. ಸರ್ವ ಧರ್ಮ ಸಮಭಾವ ಭಾವನೆ ಹೊಂದಿದ ಜೈನ ಸಮುದಾಯವು ಶಾಂತಿ ಪ್ರತೀಕವಾಗಿದೆ. ಕರ್ನಾಟಕ ರಾಜ್ಯದಲ್ಲಿ ಜೈನ ಸಮುದಾಯದ ರೈತರಿಗೆ, ವಿದ್ಯಾರ್ಥಿಗಳಿಗೆ ವಿವಿಧ ಯೋಜನೆಗಳನ್ನು ನೀಡಲಾಗುತ್ತಿದೆ. ಅದರಂತೆ ಮಹಾರಾಷ್ಟ್ರ ಸರ್ಕಾರವು ಕೂಡ ವಿವಿಧ ಯೋಜನೆಗಳನ್ನು ಜಾರಿಗೊಳಿಸಬೇಕು. ಸಭೆಯಿಂದ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಪ್ರಾರಂಭಿಸುತ್ತಿದ್ದು, ಕಡಿಮೆ ದರದಲ್ಲಿ ಜಾಗ ನೀಡಿ ಸಹಕರಿಸಬೇಕು ಎಂದರು.

    ಗ್ರಾಮಾಭಿವೃದ್ಧಿ ಸಚಿವ ಹಸನ್ ಮುಶ್ರ್, ಗೃಹ ಸಚಿವ ಸತೇಜ ಪಾಟೀಲ, ಸಹಕಾರ ಸಚಿವ ವಿಶ್ವಜೀತ ಕದಂ, ಮಾಜಿ ಸಂಸದರಾದ ರಾಜು ಶೆಟ್ಟಿ, ಪ್ರಕಾಶ ಹುಕ್ಕೇರಿ ಮಾತನಾಡಿದರು. ಮಾಜಿ ಸಂಸದ ಕಲ್ಲಪ್ಪಣ್ಣ ಆವಾಡೆ ಅವರಿಗೆ ಕರ್ಮವೀರ ಭಾವುರಾವ ಪಾಟೀಲ ಪುರಸ್ಕಾರ ಹಾಗೂ ದಿ. ಬಾಪುಸಾಹೇಬ ಬೋರಗಾಂವೆ ಅವರಿಗೆ ಜೀವನಗೌರವ ಪುರಸ್ಕಾರ ನಿಡಿ ಗೌರವಿಸಲಾಯಿತು.

    ಸಚಿವ ರಾಜೇಂದ್ರ ಪಾಟೀಲ, ಶಾಸಕ ಅಭಯ ಪಾಟೀಲ, ಶ್ರೀಮಂತ ಪಾಟೀಲ, ರಾಷ್ಟ್ರಿಯ ಅಲ್ಪಸಂಖ್ಯಾತ ಸದಸ್ಯ ಧನಂಜಯ ಗುಂಡೆ, ಪ್ರಕಾಶ ಅವಾಡೆ, ಸಂಸದ ಸಂಜಯಕಾಕಾ ಪಾಟೀಲ, ವೀರಕುಮಾರ ಪಾಟೀಲ, ಶಾಸಕ ಸುರೇಶ ಖಾಡೆ, ಸುಧೀರ ಗಾಡಗಿಳ, ದಿಗ್ವಿಜಯ ಸೂರ್ಯವಂಶಿ, ಸಂಜಯ ಪಾಟೀಲ, ಬಾಲಚಂದ್ರ ಪಾಟೀಲ, ದತ್ತಾ ಡೋರ್ಲೆ, ಉತ್ತಮ ಪಾಟೀಲ, ಅಭಿನಂದನ ಪಾಟೀಲ, ಗಣ್ಯರು, ಜೈನ ಸಮುದಾಯದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

    | ಸುಯೋಗ ಕಿಲ್ಲೇದಾರ ಸಾಂಗಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts