More

    ಜೇನು ಕೃಷಿ ಅಭಿವೃದ್ಧಿಗೆ ಬೀದರ್ ಆಯ್ಕೆ

    ಬೀದರ್: ರಾಜ್ಯದ ಐದು ಜಿಲ್ಲೆಗಳನ್ನು ಜೇನು ಕೃಷಿ ಅಭಿವೃದ್ಧಿಗೆ ಸರ್ಕಾರ ಆಯ್ಕೆ ಮಾಡಿದೆ. ಇದರಲ್ಲಿ ಬೀದರ್ ಜಿಲ್ಲೆಯೂ ಸೇರಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶಿವಪುತ್ರ ಶಂಭು ಹೇಳಿದರು.
    ನೌಬಾದ್ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಶನಿವಾರ ಜೇನು ಕೃಷಿ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಬೀದರ್ ವಾತಾವರಣ ಜೇನು ಕೃಷಿಗೆ ಮಸ್ತ್ ಇದೆ. ಜೇನು ಸಾಕಣೆ ಮಾಡುವ ರೈತರಿಗೆ ಇಲಾಖೆಯಿಂದ ಜೇನು ಪೆಟ್ಟಿಗೆಗಳನ್ನು ಶೇ. 75ರಷ್ಟು ಸಹಾಯ ಧನದಲ್ಲಿ ವಿತರಿಸಲಾಗುತ್ತಿದೆ. ಜೇನು ಕೃಷಿಯಿಂದ ಜೇನು ತುಪ್ಪದ ಉತ್ಪಾದನೆ ಜತೆಗೆ ಜೇನು ಹುಳಗಳು ನಡೆಸುವ ಪರಾಗ ಸ್ಪರ್ಶ ಕ್ರಿಯೆಯಿಂದಾಗಿ ವಿವಿಧ ಬೆಳೆಗಳ ಉತ್ತಮ ಇಳುವರಿ ಪಡೆಯಬಹುದು. ಕಡಿಮೆ ಬಂಡವಾಳದ ಜೇನು ಕೃಷಿ ಸಸ್ಯ ಸಂಕುಲವನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
    ಜೇನು ತುಪ್ಪ ಅತ್ಯಂತ ಉತ್ಕೃಷ್ಟ ಆಹಾರ ಪದಾರ್ಥವಾಗಿದ್ದು, ಹಲವು ಔಷಧಿ ಗುಣಗಳು ಹೊಂದಿದೆ. ದಿನಕ್ಕೊಂದು ಚಮಚ ಜೇನು ತುಪ್ಪ ಸೇವಿಸಿದರೆ ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಬಹುದು. ಭಾರತ ವರ್ಷಕ್ಕೆ 1000 ಕೋಟಿ ರೂ. ಗಳಷ್ಟು ಜೇನು ತುಪ್ಪ ರಫ್ತು ಮಾಡುತ್ತಿದೆ. ಪರಿಶುದ್ಧ ಜೇನು ತುಪ್ಪಕ್ಕೆ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆಯಿದೆ. ಜಿಲ್ಲೆಯ ರೈತರು ಹೆಚ್ಚಿನ ಪ್ರಮಾಣದಲ್ಲಿ ಜೇನು ಕೃಷಿ ಕೈಗೊಂಡು ಆಥರ್ಿಕ ಸ್ಥಿತಿ ಸುಧಾರಿಸಿಕೊಳ್ಳಬಹುದು ಎಂದು ಹೇಳಿದರು.
    ಜೇನು ಕೃಷಿಕ ಇಂದುಶೇಖರ ಮತ್ತು ಶ್ರೀನಿವಾಸ ಅವರು ತರಬೇತಿ ಪ್ರಾತ್ಯಕ್ಷಿಕೆ ನೀಡಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಪ್ರಗತಿಪರ ರೈತ ಜಾಫರ್ಮಿಯಾ ಚಿಟ್ಟಾ, ಜೇನು ಕೃಷಿಕ ಡಾ.ಮಲ್ಲ್ಲಿಕಾಜರ್ುನ ಎಮ್ಮೆ ಇತರರಿದ್ದರು. ಸಹಾರ್ದ ಸಂಸ್ಥೆ ನಿದರ್ೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಎಸ್.ಜಿ. ಪಾಟೀಲ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts