More

    ಜೀವರಕ್ಷಕ ರಕ್ತದಾನ ಶ್ರೇಷ್ಠ ಕಾರ್ಯ

    ಗಜೇಂದ್ರಗಡ: ಎಲ್ಲ ದಾನಕ್ಕಿಂತ ರಕ್ತದಾನ ಶ್ರೇಷ್ಠ. ಮತ್ತೊಂದು ಜೀವ ಉಳಿಸಿದ ಶ್ರೇಯಸ್ಸು ರಕ್ತದಾನಿಗೆ ಸಲ್ಲುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸೇವಾ ಪ್ರಮುಖ ನರಸಿಂಹ ಕಾಮರ್ತಿ ಹೇಳಿದರು. ಪಟ್ಟಣದ ಜಿ.ಕೆ. ಬಂಡಿ

    ಗಾರ್ಡನ್​ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ರಾಷ್ಟ್ರೋತ್ಥಾನ ರಕ್ತನಿಧಿ ಹುಬ್ಬಳ್ಳಿ ಸಹಯೋಗದೊಂದಿಗೆ ಭಾನುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. ಒಬ್ಬ ವ್ಯಕ್ತಿ ಸ್ವಯಂಪ್ರೇರಿತವಾಗಿ, ಪ್ರತಿಫಲಾಪೇಕ್ಷೆ ಇಲ್ಲದೆ ಮತ್ತೊಬ್ಬರಿಗೆ ರಕ್ತದಾನ ಮಾಡುವುದರಿಂದ ಜೀವದಾನ ಮಾಡಿದಂತಾಗುತ್ತದೆ ಎಂದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಪರ್ಕ ಪ್ರಮುಖ ರವಿ ಬಡಿಗೇರ ಮಾತನಾಡಿ, ರಕ್ತದಾನಕ್ಕೆ ಜೀವದಾನ ಶಕ್ತಿ ಇದೆ. ರಕ್ತದಾನದಿಂದ ಅಪಾಯವಿಲ್ಲ. ಆರೋಗ್ಯವಂತರು ಸ್ವಯಂಪ್ರೇರಿತವಾಗಿ ರಕ್ತದಾನಕ್ಕೆ ಮುಂದಾಗಬೇಕು ಎಂದರು. 120ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದ್ದು, 120 ಯೂನಿಟ್ ರಕ್ತ ಸಂಗ್ರಹವಾಯಿತು. ಡಾ. ಗೋಪಾಲರಾವ್, ಅಂದಪ್ಪ ಸಂಕನೂರ, ವಿನಾಯಕ ಜಾಧವ, ಸಂಜೀವ ಜೋಷಿ, ವಿಷ್ಣು ಮಾಂಡ್ರೆ, ಪೃಥ್ವಿರಾಜ ಪಾಟೀಲ, ಸಂತೋಷ ವಸ್ತ್ರದ, ಶ್ಯಾಮಣ್ಣ ವನ್ನಾಲ, ಮಹಾಂತೇಶ ಗಂಧದ, ಉಮೇಶ ಪಾಟೀಲ, ಜಗದೀಶ ಗಾಂಜಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts