More

    ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬೇಕಿದೆ ಎಲ್ಲರ ಸಹಕಾರ


    ಚಿತ್ರದುರ್ಗ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ,ಬಲಿದಾನದದಿಂದಾಗಿ ಪರಕೀಯರ ಆಳ್ವಿಕೆಯಲ್ಲಿದ್ದ ದೇಶ ಬಂಧನದಿಂದ ಬಿಡುಗಡೆ ಪಡೆದಿದೆ ಎ ಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
    ಜಿಲ್ಲಾಡಳಿತ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ಸಮಾರಂಭ ದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
    ಕೋಟ್ಯಂತರ ಸ್ವಾತಂತ್ರೃಹೋರಾಟಗಾರರ ತ್ಯಾಗ,ಬಲಿದಾನದಿಂದಾಗಿ ಬಿಡುಗಡೆ ಪಡೆದಿರುವ ಈ ನೆಲದಲ್ಲಿ ನಾವಿಂದು ಸುಖ,ಸ ಮೃದ್ಧಿ ಹಾಗೂ ಸುಸ್ಥಿರ ಬದುಕನ್ನು ಕಟ್ಟಿಕೊಳ್ಳುತ್ತಿದ್ದೇವೆ.
    ಸಂವಿಧಾನದ ಮಹಾಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು, ಜಗತ್ತಿನಲ್ಲೇ ಪ್ರಜಾಪ್ರಭುತ್ವಕ್ಕೆ ಮಾದರಿ ಎನ್ನುವಂಥ ಸಂವಿಧಾನವನ್ನು ನಮಗೆ ಕೊಟ್ಟಿದ್ದಾರೆ. ಅದರಡಿ ನಾವಿಂದು ಮುಂದುವರಿದ ರಾಷ್ಟ್ರಗಳೊಂದಿಗೆ ಅಭಿವೃದ್ಧಿ ಹಾದಿಯಲ್ಲಿ ಮುನ್ನಡಿ ಇಡುತ್ತಿದ್ದೇವೆ. ಇದಕ್ಕಾಗಿ ಅಂಬೇಡ್ಕರ್ ಹಾಗೂ ಅವರೊಂದಿಗೆ ಕೈ ಜೋಡಿಸಿ ದುಡಿದ ಮಹನೀಯರಿಗೆ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ.
    ಭಾರತವಿಂದು ಸದೃಢ ದೇಶವಾಗಿ ರೂಪುಗೊಳ್ಳುತ್ತಿದೆ ಎಂದರೆ ಅದಕ್ಕೆ ಸ್ವಾತಂತ್ರ್ಯಚಳವಳಿ ಕಾರಣವಾಗಿದೆ ಎಂದ ಸಚಿವರು,ವಚನ ಸಾ ಹಿತ್ಯದ ಹರಿಕಾರ ಬಸವಣ್ಣವನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
    ರಾಜ್ಯದಲ್ಲಿ ಜಾರಿಗೆ ತಂದಿರುವ ಗ್ಯಾರಂಟಿಗಳು ಬಡವರನ್ನು,ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಯ ಶಸ್ವಿಯಾಗುತ್ತಿವೆ. ಜಿಲ್ಲೆ ಯಲ್ಲಿ ಅನ್ನಭಾಗ್ಯ ಯೋಜನೆಯಡಿ 4.50 ಲಕ್ಷ, ಗೃಹಜ್ಯೋತಿ-3.71 ಲಕ್ಷ, ಗೃಹಲಕ್ಷ್ಮೀ-3.70 ಲಕ್ಷ,ಯುವನಿಧಿ-3040 ಹಾಗೂ ಶಕ್ತಿ ಯೋಜನೆಯಡಿ 1.36 ಕೋಟಿ ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ.
    ಭದ್ರಾ ಮೇಲ್ದಂಡೆ
    ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಕಾಮಗಾರಿ ಶೀಘ್ರಪೂರ್ಣಗೊಂಡು 2024ರ ಅಕ್ಟೋಬರ್ ತಿಂಗಳ ಅಂತ್ಯದೊಳಗೆ ಸಂಪೂ ರ್ಣವಾಗಿ ನೀರು ಹರಿಸುವ ಗುರಿ ಸರ್ಕಾರದ್ದಾಗಿದೆ. ಚಿತ್ರದುರ್ಗ ಕೋಟೆ,ಚಂದ್ರವಳ್ಳಿತೋಟ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳ ಅ ಭಿವೃದ್ಧಿಗೆ 29 ಕೋಟಿ ರೂ.ವೆಚ್ಚದ ಯೋಜನೆ ರೂಪಿಸಲಾಗುತ್ತಿದೆ.
    ಮೆಡಿಕಲ್ ಕಾಲೇಜು
    ಸರ್ಕಾರಿ ಮೆಡಿಕಲ್ ಕಾಲೇಜು ಪ್ರಾರಂಭವಾಗಿದೆ. ಕಾಲೇಜು-ಆಸ್ಪತ್ರೆ ಕಟ್ಟಡಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಮೊಳ ಕಾಲ್ಮೂರು ತಾಲೂಕಿನಲ್ಲಿ ಟೆಕ್ಸ್‌ಟೈಲ್ ಪಾರ್ಕ್,ಚಿತ್ರದುರ್ಗ ತಾಲೂಕಿನಲ್ಲಿ ವಿವಿಧ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲಾಗುವುದು. ಜಿಲ್ಲೆ ಮತ್ತು ನಗರದ ಅಭಿವೃದ್ಧಿಗೆ ಎಲ್ಲರ ಸಹಕಾರದ ಅಗತ್ಯವಿದೆ.
    ಗೋಶಾಲೆಗಳ ಸ್ಥಾಪನೆ
    ಜಿಲ್ಲೆಯ ಆರು ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಬರ ನಿರ್ವಹಣೆಗೆ ಸರ್ಕಾರದಿಂದ 9 ಕೋಟಿ ರೂ.ಬಿಡುಗ ಡೆಯಾಗಿದೆ. ಜಾನುವಾರುಗಳಿಗೆ ಮೇವು ಪೂರೈಸಲು ಪ್ರತಿ ತಾಲೂಕಿನ ಎಲ್ಲ ಹೋಬಳಿಗಳಲ್ಲಿ ಗೋಶಾಲೆ ತೆರೆಯಲಾಗುವುದು. ಚಳ್ಳಕೆರೆ ತಾಲೂಕು ಚೌಳೂರಲ್ಲಿ ಗೋಶಾಲೆ ಪ್ರಾರಂಭಿಸಲಾಗಿದೆ ಎಂದರು.
    ಕೂಸಿನ ಮನೆ ಅನಾವರಣ
    ಮೂರು ವರ್ಷದೊಳಗಿನ ಮಕ್ಕಳ ಆರೈಕೆಗಾಗಿ ನರೇಗಾದಡಿ ಜಿಲ್ಲಾದ್ಯಂತ ನಿರ್ಮಿಸುತ್ತಿರುವ ಕೂಸಿನಮನೆ ಕಾರ‌್ಯಕ್ರಮಕ್ಕೆ ಸಚಿವರು ಚಾ ಲನೆ ನೀಡಿದರು. ಜಿಲ್ಲೆಯಲ್ಲಿ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಿದ ಜಿಲ್ಲೆಯ ವಿವಿಧ ಐದು ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಗೆ ಪ್ರ ಮಾಣ ಪತ್ರ ವಿತರಿಸಿದರು.
    ಆಕರ್ಷಕ ಪಥ ಸಂಚಲನ
    ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯ ಆರ್‌ಪಿಐ ಪರೇಡ್ ಕಮಾಂಡರ್‌ಎಚ್.ಡಿ.ರುದ್ರೇಶ್ ನೇತೃತ್ವದಲ್ಲಿ 20 ವಿವಿಧ ತಂಡಗಳಿಂದ ಆ ಕರ್ಷಕ ಪಥಸಂಚಲನ ಜರುಗಿತು. ಆರ್‌ಎಸ್‌ಐ ಶಿವರಾಜ್ ನೇತೃತ್ವದಲ್ಲಿ-ಸಶಸ್ತ್ರ ಮೀಸಲು ಪಡೆ,ಪಿಎಸ್‌ಐ ರಘು-ಪೊಲೀಸ್,ಪ್ರಹ್ಲಾ ದ್-ಗೃಹ ರಕ್ಷಕ ದಳ ಹಾಗೂ ವಸಂತ್‌ಕುಮಾರ್‌ನೇತೃತ್ವದಲ್ಲಿ ಅರಣ್ಯಇಲಾಖೆ ತುಕಡಿ, ಸರ್ಕಾರಿವಿಜ್ಞಾನ ಕಾಲೇಜು ಎನ್‌ಸಿಸಿ,ಸಂತ ಜೋಸೆಫರ ಕಾನ್ವೆಂಟ್ ಪ್ರೌಢಶಾಲೆಯ ಎನ್‌ಸಿಸಿ ಮತ್ತು ಗೈಡ್ಸ್ ತಂಡಗಳು.
    ವಿದ್ಯಾವಿಕಾಸ ಆಂಗ್ಲ ಪ್ರೌಢಶಾಲೆ,ಎಸ್‌ಜೆಎಂಆರ್ ಸಿಬಿಎಸ್‌ಸಿ ಬಾಲಕಿಯರು,ಬಾಲಕರು ಹಾಗೂ ಬಾಲಕಿಯರ ಸರ್ಕಾರಿ ಪಪೂ ಕಾ ಲೇಜು, ವಿದ್ಯಾವಿಕಾಸ ಆಂಗ್ಲ ಪ್ರೌಢಶಾಲೆ, ಗೂಳಯ್ಯನಹಟ್ಟಿ ಮುರಾರ್ಜಿ ದೇಸಾಯಿ ಬಾಲಕಿಯರು ಮತ್ತು ಬಾಲಕರ ತಂಡ, ಪಾರ್ಶ್ವನಾಥ, ಎಸ್‌ಜೆಎಂ, ಎಸ್‌ಜೆಎಂ ಆಂಗ್ಲಪ್ರೌಢಶಾಲೆ, ವಾಸವಿ ಪ್ರೌಢಶಾಲೆ, ಕ್ರೆಸೆಂಟ್ ಪ್ರೌಢಶಾಲೆ ಹಾಗೂ ತರಳುಬಾಳು ಪ್ರೌಢಶಾಲೆ ವಿದ್ಯಾ ರ್ಥಿ ತಂಡಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದವು. ಬ್ಯಾಂಡ್‌ಮಾಸ್ಟರ್ ಸಿ.ಪಾಂಡುರಂಗ ನೇತೃತ್ವದ ಪೊಲೀಸ್‌ಬ್ಯಾಂಡ್ ಹಾಗೂ ಅಜಯ್‌ನೇತೃತ್ವದ ಸಂತ ಜೋಸೆಫರ ಕಾನ್ವೆಂಟ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬ್ಯಾಂಡ್ ತಂಡ ಪಥ ಸಂಚಲನಕ್ಕೆ ಸಾಥ್ ನೀಡಿತು.
    ಸಾಂಸ್ಕೃತಿಕ ಕಾರ್ಯಕ್ರಮಗಳು
    ವಿವಿಧ ಶಾಲೆ,ಕಾಲೇಜುಗಳ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ‌್ಯಕ್ರಮಗಳು ದೇಶದ ಸಂಸ್ಕೃತಿ,ವಿವಿಧತೆಯಲ್ಲಿ ಏಕತೆಗೆ ಸಾಕ್ಷಿಯಾದವು. ಡಾನ್‌ಬಾಸ್ಕೋ ಶಾಲೆಯ 500 ವಿದ್ಯಾರ್ಥಿಗಳು,ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ ಹಾಗೂ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನ 200 ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳ ನೃತ್ಯರೂಪಕ ಮನಸೂರೆಗೊಂಡಿತು.
    ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಅಧ್ಯಕ್ಷತೆ ವಹಿಸಿದ್ದರು. ಡಿಸಿ ಟಿ.ವೆಂಕಟೇಶ್, ಜಿಪಂ ಸಿಇಒ ಎಸ್.ಜೆ.ಸೋಮಶೇಖರ್,ಎಸ್‌ಪಿ ಧಮೇ ಂರ್ದರ್ ಕುಮಾರ್‌ಮೀನಾ, ಎಡಿಸಿ ಬಿ.ಟಿ.ಕುಮಾರಸ್ವಾಮಿ, ಪ್ರಭಾರ ಎಸಿ ವಿವೇಕ್,ನಗರಸಭೆ ಪೌರಾಯುಕ್ತೆ ಎಂ.ರೇಣುಕಾ,ತಹಸೀ ಲ್ದಾರ್.ಡಾ.ನಾಗವೇಣಿ ಮತ್ತಿತರ ಅಧಿಕಾರಿಗಳಿದ್ದರು.


    ನೀಲಿಪೇಟದಲ್ಲಿ ಕಂಗೊಳಿಸಿದ ಸಚಿವ
    ಸಚಿವ ಸುಧಾಕರ್ ಅವರು ಸಮಾರಂಭಕ್ಕೆ ನೀಲಿ ಬಣ್ಣದ ಪೇಟ ಧರಿಸಿ ಹಾಜರಾಗಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಸಚಿವರು, ತಾ ವು ಧರಿಸಿರುವ ಈ ಪೇಟ ಅಂಬೇಡ್ಕರ್‌ವಾದದ ದ್ಯೋತಕವಾಗಿದೆ ಎಂದು ಹೆಮ್ಮೆಯಿಂದ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts