More

    ಜಿಲ್ಲೆಯಲ್ಲಿ 158 ಜನ ಗುಣ, ನಾಲ್ವರು ಸಾವು

    ಹಾವೇರಿ: ಪೊಲೀಸ್, ಆರೋಗ್ಯ, ತಹಸೀಲ್ದಾರ್ ಕಚೇರಿ, ನಗರಸಭೆಯ ನೌಕರರು ಸೇರಿ ಜಿಲ್ಲೆಯಲ್ಲಿ ಸೋಮವಾರ 89 ಜನರಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ. 158 ಜನರು ಗುಣವಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ತಿಳಿಸಿದ್ದಾರೆ.

    ಈವರೆಗೆ 8,614 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇಂದಿನವರೆಗೆ 7,172 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. ಈವರೆಗೆ 162 ಜನರು ಕೋವಿಡ್​ನಿಂದ ಮೃತಪಟ್ಟಿದ್ದಾರೆ. 1,280 ಸಕ್ರಿಯ ಪ್ರಕರಣಗಳಿದ್ದು, 583 ಸೋಂಕಿತರು ಹೋಂ ಐಸೋಲೇಷನ್​ನಲ್ಲಿ ಹಾಗೂ 241 ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್​ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

    ತಾಲೂಕುವಾರು ವಿವರ: ಹಾವೇರಿ-28, ರಾಣೆಬೆನ್ನೂರ-27, ಹಾನಗಲ್ಲ-18, ಬ್ಯಾಡಗಿ-6, ಹಿರೇಕೆರೂರ-5, ಸವಣೂರ-3, ಶಿಗ್ಗಾಂವಿ-2 ಜನ ಸೇರಿ ಸೋಮವಾರ 89 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿನಿಂದ ಗುಣವಾಗಿ ಹಾವೇರಿ-57, ರಾಣೆಬೆನ್ನೂರ-27, ಹಾನಗಲ್ಲ-10, ಬ್ಯಾಡಗಿ-42, ಹಿರೇಕೆರೂರ-12, ಸವಣೂರ ಹಾಗೂ ಶಿಗ್ಗಾಂವಿ ತಾಲೂಕಿನ ತಲಾ 5 ಜನರು ಸೇರಿ ಸೋಮವಾರ 158 ಜನರು ಸೋಂಕಿನಿಂದ ಬಿಡುಗಡೆ ಹೊಂದಿದ್ದಾರೆ.

    ಹಾವೇರಿ ಶಿವಲಿಂಗ ನಗರದ 58 ವರ್ಷದ ಪುರುಷ, ನಾಗೇಂದ್ರನಮಟ್ಟಿಯ 45 ವರ್ಷದ ಮಹಿಳೆ, ಹಾವೇರಿ ನಗರದ 60 ವರ್ಷದ ವೃದ್ಧ, ರಾಣೆಬೆನ್ನೂರ ತಾಲೂಕು ಹರನಗಿರಿ 54 ವರ್ಷದ ಪುರುಷ ಕೋವಿಡ್​ನಿಂದ ಮೃತಪಟ್ಟಿದ್ದಾರೆ. ಕೋವಿಡ್ ನಿಯಮಾನುಸಾರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts