More

    ಜಿಲ್ಲೆಯಲ್ಲಿ ಶೇ.೮೭.೫೪ ರಷ್ಟು ಪಿಯುಸಿ ಫಲಿತಾಂಶ

    ಬಾಗಲಕೋಟೆ: ಪ್ರಸಕ್ತ ೨೦೨೪ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಪರೀಕ್ಷೆ ಬರೆದ ೨೨೮೪೮ ವಿದ್ಯಾರ್ಥಿಗಳ ಪೈಕಿ ೨೦೦೦೧ ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಶೇ.೮೭.೫೪ ರಷ್ಟು ಫಲಿತಾಂಶ ಪಡೆದು ರಾಜ್ಯ ಮಟ್ಟದಲ್ಲಿ ೧೧ನೇ ಸ್ಥಾನ ಪಡೆದುಕೊಂಡಿದೆ.

    ಕಳೆದ ೨೦೨೩ ರಲ್ಲಿ ಶೇ.೭೮.೭೯ ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯ ಮಟ್ಟದಲ್ಲಿ ೧೫ನೇ ಸ್ಥಾನ ಪಡೆದುಕೊಂಡಿತ್ತು. ಪ್ರಸಕ್ತ ೨೦೨೪ ರಲ್ಲಿ ೧೧ನೇ ಸ್ಥಾನ ಪಡೆದುಕೊಂಡಿದೆ. ಪ್ರಸಕ್ತ ಪರೀಕ್ಷೆಯಲ್ಲಿ ಹೊಸ ವಿದ್ಯಾರ್ಥಿಗಳು ೨೨೮೪೮ ಪೈಕಿ ೨೦೦೦೧, ಪುನರಾವರ್ತಿತ ವಿದ್ಯಾರ್ಥಿಗಳು ೧೯೦೩ ಪೈಕಿ ೯೯೨, ಖಾಸಗಿ ವಿದ್ಯಾರ್ಥಿಗಳು ೧೦೮೩ ಪೈಕಿ ೪೨೮ ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ.

    ಕಲಾ ವಿಭಾಗದಲ್ಲಿ ೯೦೫೬ ವಿದ್ಯಾರ್ಥಿಗಳ ಪೈಕಿ ೭೩೫೭ ಜನ ತೇರ್ಗಡೆ ಹೊಂದಿ, ಶೇ.೮೧.೨೪ ರಷ್ಟು ಫಲಿತಾಂಶವಾದರೆ, ವಾಣಿಜ್ಯ ವಿಭಾಗದಲ್ಲಿ ೪೬೧೧ ಪೈಕಿ ೪೦೩೮ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ.೮೭.೫೭, ವಿಜ್ಞಾನ ವಿಭಾಗದಲ್ಲಿ ೯೧೮೧ ವಿದ್ಯಾರ್ಥಿಗಳ ಪೈಕಿ ೮೬೦೬ ವಿದ್ಯಾರ್ಥಿಗಳು ತೇರ್ಗಡೆಹೊಂದಿ ಶೇ.೯೩.೭೪ ರಷ್ಟು ತೇರ್ಗಡೆ ಹೊಂದಿದ್ದಾರೆ.

    ಈ ಬಾರಿ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ಗಂಡು ವಿದ್ಯಾರ್ಥಿಗಳ ಶೇ.೬೬.೪೫ ಕ್ಕಿಂತ ಶೇ.೮೩.೦೧ ರಷ್ಟು ಫಲಿತಾಂಶ ಪಡೆಯುವ ಮೂಲಕ ಮಹಿಳೆಯರು ಮೇಲುಗೈ ಸಾಧಿಸಿದರೆ, ವಾಣಿಜ್ಯ ವಿಭಾಗದಲ್ಲಿ ಪುರುಷರು ಶೇ.೭೮.೧ ಕ್ಕಿಂತ ಮಹಿಳೆಯರು ಶೇ.೮೮.೪೩ ರಷ್ಟು ಪಡೆಯುವ ಮೂಲಕ ಮೇಲುಗೈ ಸಾಧಿಸಿದ್ದಾರೆ. ಆದರೆ ವಿಜ್ಞಾನ ವಿಭಾಗದಲ್ಲಿ ಮಹಿಳಾ ವಿದ್ಯಾರ್ಥಿಗಳು ಶೇ.೯೨.೫೨ ರಷ್ಟು ತೇರ್ಗಡೆ ಹೊಂದಿದರೆ, ಪುರುಷ ವಿದ್ಯಾರ್ಥಿಗಳು ಶೇ.೯೨.೬೫ ರಷ್ಟು ತೆರ್ಗಡೆಹೊಂದುವ ಮೂಲಕ ಮೇಲುಗೈ ಸಾಧಿಸಿದ್ದಾರೆ.

    ಕನ್ನಡ ಮಾಧ್ಯಮದಲ್ಲಿ ಒಟ್ಟು ೧೫೫೫೧ ವಿದ್ಯಾರ್ಥಿಗಳ ಪೈಕಿ ೧೧೯೩೧ ಜನ ತೇರ್ಗಡೆ ಹೊಂದಿ, ಶೇ.೭೬.೭೨ ರಷ್ಟು ಫಲಿತಾಂಶವಾದರೆ, ಅದರಲ್ಲಿ ಕಲಾ ವಿಭಾಗದಲ್ಲಿ ಶೇ.೭೪.೩೮, ವಾಣಿಜ್ಯ ವಿಭಾಗದಲ್ಲಿ ಶೇ.೮೩.೨ ಹಾಗೂ ವಿಜ್ಞಾನ ವಿಭಾಗದಲ್ಲಿ ೪೮.೨೮ ರಷ್ಟು ತೇರ್ಗಡೆ ಹೊಂದಿದ್ದಾರೆ. ನಗರ ಪ್ರದೇಶದ ವಿದ್ಯಾರ್ಥಿಗಳು ಶೇ.೮೭.೪೩ ರಷ್ಟು ತೇರ್ಗಡೆ ಹೊಂದಿದರೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೇ.೮೭.೮೧ ರಷ್ಟು ತೇರ್ಗಡೆ ಹೊಂದಿರುತ್ತಾರೆ.

    ಜಾತಿವಾರು ಫಲಿತಾಂಶ ಕಲಾವಿಭಾಗದಲ್ಲಿ ಪರಿಶಿಷ್ಟ ಜಾತಿ ಶೇ.೭೧.೬೯, ಪರಿಶಿಷ್ಟ ಪಂಗಡ ಶೇ.೬೮.೧೮, ಕೆಟಗರಿ-೧ ಶೇ.೭೮.೫೧, ೨ಎ ಶೇ.೭೭.೬೨, ೨ಬಿ ಶೇ.೭೩.೨೫, ೩ಎ ಶೇ.೮೦.೬೬, ೩ಬಿ ಶೇ.೭೯.೧೫ ಹಾಗೂ ಸಾಮಾನ್ಯ ಶೇ.೫೨.೦೪ ರಷ್ಟು ಫಲಿತಾಂಶವಾಗಿದೆ. ವಾಣಿಜ್ಯ ವಿಭಾಗದಲ್ಲಿ ಪರಿಶಿಷ್ಟ ಜಾತಿ ಶೇ.೮೨.೦೯, ಪರಿಶಿಷ್ಟ ಪಂಗಡ ಶೇ.೭೧.೮೧, ಕೆಟಗರಿ-೧ ಶೇ.೮೩.೬೩, ೨ಎ ಶೇ.೮೬.೨೧, ೨ಬಿ ಶೇ.೭೬.೪೭, ೩ಎ ಶೇ.೯೦.೬೫, ೩ಬಿ ಶೇ.೮೬.೫ ಹಾಗೂ ಸಾಮಾನ್ಯ ಶೇ.೭೪.೬೧ ರಷ್ಟು ಫಲಿತಾಂಶವಾಗಿದೆ. ವಿಜ್ಞಾನ ವಿಭಾಗದಲ್ಲಿ ಪರಿಶಿಷ್ಟ ಜಾತಿ ಶೇ.೮೭.೪೬, ಪರಿಶಿಷ್ಟ ಪಂಗಡ ಶೇ.೮೬.೭೬, ಕೆಟಗರಿ-೧ ಶೇ.೯೨.೯೭, ೨ಎ ಶೇ.೯೩.೭೬, ೨ಬಿ ಶೇ.೮೫.೭೫, ೩ಎ ಶೇ.೯೭.೦೭, ೩ಬಿ ಶೇ.೯೫.೫೬ ಹಾಗೂ ಸಾಮಾನ್ಯ ಶೇ.೯೨.೬೫ ರಷ್ಟು ಫಲಿತಾಂಶವಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts