More

    ಜಿಲ್ಲೆಯಲ್ಲಿ ಮತ್ತೆ 16 ಶಂಕಿತರು ಪತ್ತೆ

    ಧಾರವಾಡ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಶಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಆದರೆ, ಎಲ್ಲ ವರದಿಗಳೂ ನೆಗೆಟಿವ್ ಬರುತ್ತಿರುವ ಕಾರಣಕ್ಕೆ ಜನರು ಕೊಂಚ ನಿರಾಳರಾಗಿದ್ದಾರೆ.

    ಮಂಗಳವಾರ ಸಂಜೆಯಿಂದ 24 ಗಂಟೆ ಅವಧಿಯಲ್ಲಿ ಮತ್ತೆ 16 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನಿಗಾವಹಿಸಲಾಗಿರುವವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಮಂಗಳವಾರ 233 ಇದ್ದ ಶಂಕಿತರ ಸಂಖ್ಯೆ ಬುಧವಾರ 249ಕ್ಕೆ ಏರಿಕೆಯಾಗಿದ್ದರೆ, ನಿಗಾವಹಿಸಿದವರ ಸಂಖ್ಯೆ 738ರಿಂದ 754ಕ್ಕೆ ಏರಿಕೆಯಾಗಿದೆ. ಪ್ರಯೋಗಾಲಯಕ್ಕೆ ಕಳುಹಿಸಿದ್ದ ಇನ್ನೂ 20 ಜನರ ವರದಿ ಬರಬೇಕಿದೆ. ಮಂಗಳವಾರ ಸಂಜೆ ಬಾಕಿ ಇದ್ದ 121 ವರದಿಗಳ ಪೈಕಿ 117 ವರದಿಗಳು ನೆಗೆಟಿವ್ ಬಂದಿವೆ. ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯು ವಿದೇಶದಿಂದ ಆಗಮಿಸಿರುವ ಹಾಗೂ ಅವರ ಸಂಪರ್ಕಕ್ಕೆ ಒಳಗಾದ 754 ಜನರ ಮೇಲೆ ನಿಗಾ ಇಟ್ಟಿದೆ. ಈ ಪೈಕಿ 132 ಜನರು ಮನೆಯಲ್ಲೇ ಪ್ರತ್ಯೇಕವಾಗಿ (14 ದಿನ) ವಾಸವಾಗಿದ್ದಾರೆ. ಆಸ್ಪತ್ರೆಯ ಪ್ರತ್ಯೇಕ ವಾರ್ಡಗಳಲ್ಲಿ 2 ಜನ ದಾಖಲಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

    ಮತ್ತೆ ಕೆಲವರಿಗೆ ಕ್ವಾರಂಟೈನ್

    ಹುಬ್ಬಳ್ಳಿ: ಬುಧವಾರ ರಾತ್ರಿ ವೇಳೆಗೆ ಇನ್ನೂ ಕೆಲವರು ಶಂಕಿತ ಸೋಂಕಿತರನ್ನು ಪತ್ತೆ ಮಾಡಲಾಗಿದೆ. ಒಟ್ಟು 11 ಜನರನ್ನು ಪೊಲೀಸ್ ಬಂದೋಬಸ್ತ್​ನಲ್ಲಿ ಕರೆತಂದು ಇಲ್ಲಿಯ ಕೇಶ್ವಾಪುರದ ಹೋಟೆಲ್ ಒಂದರ ಪ್ರತ್ಯೇಕ ಕೋಣೆಗಳಲ್ಲಿ ಇರಿಸಲಾಗಿದೆ.

    ಸ್ಟೇಶನ್ ರಸ್ತೆಯ ಹೋಟೆಲ್ ಒಂದರಲ್ಲಿ ಸಹ 12ರಷ್ಟು ಕ್ವಾರಂಟೈನ್​ಗಳನ್ನು ಇರಿಸಲಾಗಿದೆ. ಪ್ರತ್ಯೇಕ ಕೊಠಡಿಯಲ್ಲಿ ಇರುವವರ ಮೇಲೆ ಆರೋಗ್ಯ ಇಲಾಖೆಯವರು ಸ್ಥಳದಲ್ಲೇ ಉಪಸ್ಥಿತರಿದ್ದು ನಿಗಾ ವಹಿಸುತ್ತಿದ್ದಾರೆ.

    ಸ್ಟೇಶನ್ ರಸ್ತಯ ಹೋಟೆಲ್​ನಲ್ಲಿದ್ದ ಇಬ್ಬರನ್ನು ಬುಧವಾರ ರಾತ್ರಿ ಪೊಲೀಸ್ ಬಂದೋಬಸ್ತ್​ನಲ್ಲಿ ಕಿಮ್ಸ್​ಗೆ ಕರೆದೊಯ್ದು ಗಂಟಲದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿರುವುದಾಗಿ ತಿಳಿದುಬಂದಿದೆ. ಈಗಾಗಲೇ ಕ್ವಾರಂಟೈನ್​ದಲ್ಲಿರುವವರಲ್ಲಿ ಒಬ್ಬಿಬ್ಬರು ಆಗಾಗ ಉದ್ಧಟತನದಿಂದ ನಡೆದುಕೊಂಡಿರುವುದಾಗಿ ತಿಳಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts