More

    ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಜೋಗ ಜಲಪಾತಕ್ಕೆ ಭೇಟಿ; ₹165 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

    ಕಾರ್ಗಲ್: ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಸೋಮವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಅವರು ಜಲಪಾತ ಪ್ರದೇಶದಲ್ಲಿ 165 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
    ಜೋಗ ಜಲಪಾತದ ಒಟ್ಟಾರೆ ಕಾಮಗಾರಿಗಳ ಪೈಕಿ ಜಲಪಾತದ ವೀಕ್ಷಣಾ ಸ್ಥಳದ ಸಾಕಷ್ಟು ಕೆಳಭಾಗದಿಂದ ಕೊರೆದು ನಿರ್ಮಾಣಗೊಳ್ಳುತ್ತಿರುವ ವೀಕ್ಷಣಾ ಗೋಪುರದ ಕಾಮಗಾರಿಯು ಅತ್ಯಂತ ಪ್ರಮುಖವಾಗಿದ್ದು, ಇದು ಸಂಸ್ಥೆಗೆ ಅತ್ಯಂತ ಸವಾಲಿನ ಕೆಲಸವಾಗಿತ್ತು. ಆದರೆ ಆ ಹಂತವನ್ನು ದಾಟಿ ಪಿಲ್ಲರ್ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಈಗ ಯಾವುದೇ ರೀತಿಯಲ್ಲೂ ಒತ್ತಡವಿಲ್ಲ. ಇದೀಗ ವೀಕ್ಷಣಾ ಗೋಪುರದ ಶೇ.50 ಕಾಮಗಾರಿ ಮುಗಿದಿದೆ ಎಂದು ಸಚಿವರಿಗೆ ಶಂಕರ ನಾರಾಯಣ ಕಂಪನಿ ಮ್ಯಾನೇಜರ್ ಟಿ.ಆರ್.ಸಂದೀಪ್ ಮಾಹಿತಿ ನೀಡಿದರು.
    ಮಳೆಗಾಲ ಸಂದರ್ಭವಾದ್ದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಕಾಮಗಾರಿ ನಡೆಸಲು ಸಾಕಷ್ಟು ತೊಡಕುಂಟಾಗುತ್ತಿದೆ. ಮಳೆ ಸ್ವಲ್ಪ ಕಡಿಮೆಯಾಗುತ್ತಿರುವಂತೆ ಈ ವೀಕ್ಷಣಾ ಗೋಪುರದ ಕಾಮಗಾರಿಯ ವೇಗವನ್ನು ಹೆಚ್ಚಿಸಲಾಗುವುದು. ಉಳಿದಂತೆ ಕಮಾನು, ದ್ವಾರ, ಕಾರಂಜಿ ಸೇರಿದಂತೆ ಕಾಮಗಾರಿಗಳಿಗೆ ಯಾವುದೇ ಅಡೆ ತಡೆ ಉಂಟಾಗುವುದಿಲ್ಲ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts