More

    ಜಿಲ್ಲಾದ್ಯಂತ ಮತದಾರರ ಪರಿಷ್ಕರಣೆ

    ಚಿತ್ರದುರ್ಗ: ಜಿಲ್ಲೆಯಲ್ಲಿ ಪ್ರಸ್ತುತ 1661 ಮತಗಟ್ಟೆಗಳು ಹಾಗೂ 14,01,830 ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ಮಾಹಿತಿ ನೀಡಿದರು.
    ಡಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 6,98,024 ಪುರುಷ, 7,03, 728 ಮಹಿಳಾ ಹಾಗೂ 78 ಇತರೆ ಮತದಾರರು ಇದ್ದಾರೆ ಎಂದರು.
    ಮತಗಟ್ಟೆಗಳ ಸಂಖ್ಯೆಯನ್ನು 1648 ರಿಂದ 1661ಕ್ಕೆ ಹೆಚ್ಚಿಸಲಾಗಿದೆ. ಅ.27ರಿಂದ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಆರಂಭವಾಗಿದೆ. ಈ ಕುರಿತ ಜಾಗೃತಿಗಾಗಿ ವಿವಿಧ ಕಾರ‌್ಯಕ್ರಮ ಆಯೋಜಿಸಲಾಗುವುದು. ಡಿ.9ರೊಳಗೆ ಸಲ್ಲಿಕೆಯಾಗುವ ಹಕ್ಕು ಮತ್ತು ಆಕ್ಷೇಪಣೆಗಳನ್ನು 26 ರೊಳಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
    2024ರ ಜನವರಿ 5ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಣೆಗೊಳ್ಳಲಿದೆ. 18 ವರ್ಷದ ಯುವ ಜನರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಅವಕಾಶವಿದೆ. ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆ ವೇಳೆ 46,906 ಯುವ ಮತದಾರರು ಹಾಗೂ 80 ವರ್ಷ ದಾಟಿದ ಮತದಾರರ ಸಂಖ್ಯೆ 30 ಸಾವಿರವಿದೆ. ಜಿಲ್ಲೆಯಲ್ಲಿ 86 ಶತಾಯುಷಿ ಮತದಾರರು ಇದ್ದಾರೆ ಎಂದರು.
    ಮತಪಟ್ಟಿಗೆ ಹೊಸದಾಗಿ ಹೆಸರು ಸೇರಿಸಲು ನಮೂನೆ-6, ಹೆಸರು ಕೈಬಿಡಲು ಅಥವಾ ಆಕ್ಷೇಪಣೆ ಸಲ್ಲಿಸಲು ನಮೂನೆ-7, ತಿದ್ದುಪಡಿ, ವರ್ಗಾವಣೆ, ಎಪಿಕ್ ಕಾರ್ಡ್ ಬದಲಾವಣೆ ಹಾಗೂ ಅಂಗವಿಕಲ ಮತದಾರರನ್ನು ಗುರುತು ಮಾಡಲು ನಮೂನೆ-8 ಹಾಗೂ ಆಧಾರ್ ಜೋಡಿಸಲು ನಮೂನೆ-6ಬಿ ಅನ್ನು ಬಳಸಿ ಮತದಾನ ಕೇಂದ್ರ, ತಾಲೂಕು ಕಚೇರಿ ಅಥವಾ ಎಸಿ ಕಚೇರಿಯಲ್ಲಿ ಸಲ್ಲಿಸಬಹುದು. ಎಂದು ಹೇಳಿದರು.
    ಜಿಲ್ಲೆಯಲ್ಲಿ ಶೇ.89ರಷ್ಟು ಮತದಾರರ ಆಧಾರ್ ಜೋಡಣೆ ಆಗಿದೆ. ನೋಂದಣಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಹಾಯವಾಣಿ 08194-222176 ಅಥವಾ ಟೋಲ್ ಫ್ರೀ ಸಂಖ್ಯೆ 1950ಕ್ಕೆ ಕರೆ ಮಾಡಬಹುದು ಎಂದು ತಿಳಿಸಿದರು.

    *ವಿವಿಧ ಪಕ್ಷಗಳ ಪ್ರತಿನಿಧಿಗಳ ಸಭೆ:

    ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ದಿವ್ಯಾಪ್ರಭು ಶುಕ್ರವಾರ ಪ್ರಕಟಿಸಿದರು. ಡಿಸಿ ಕಚೇರಿಯಲ್ಲಿ ಪಟ್ಟಿ ಪ್ರಕಟಣೆಗೆ ಸಂಬಂಧಿಸಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಪಟ್ಟಿ ಪ್ರಕಟಿಸಿದರು. ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಚುನಾವಣಾ ಶಿರಸ್ತೇದಾರ್ ಮಲ್ಲಿಕಾರ್ಜುನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ರಾಮಪ್ಪ, ಗೌಸ್‌ಪೀರ್, ಡಿ.ಎನ್.ಮೈಲಾರಪ್ಪ, ಗೋಪಾಲಸ್ವಾಮಿ, ನರೇಂದ್ರ ಹೊನ್ಯಾಳ್ ಇದ್ದರು.

    (ಸಿಟಿಡಿ 27 ಡಿಸಿ ಮೀಟಿಂಗ್)
    ಚಿತ್ರದುರ್ಗದಲ್ಲಿ ಶುಕ್ರವಾರ ಡಿಸಿ ದಿವ್ಯಾಪ್ರಭು ಅವರು ಮತದಾರರ ಕರಡು ಪಟ್ಟಿ ಪ್ರಕಟಿಸಿದರು. ಚುನಾವಣಾ ಶಿರೇಸ್ತದಾರ್ ಮಲ್ಲಿಕಾರ್ಜುನ್, ಎಸಿ ಎಂ.ಕಾರ್ತಿಕ್, ವಿವಿಧ ಪಕ್ಷಗಳ ಪ್ರತಿನಿಧಿಗಳಾದ ಗೌಸ್‌ಪೀರ್, ರಾಮಪ್ಪ, ಗೋಪಾಲಸ್ವಾಮಿ, ಡಿ.ಎನ್.ಮೈಲಾರಪ್ಪ, ನರೇಂದ್ರ ಹೊನ್ಯಾಳ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts