More

    ಜಾನುವಾರು ಸಂವರ್ಧನಾ ಕೇಂದ್ರ ಸ್ಥಾಪನೆಗೆ ಸ್ಥಳ ಪರಿಶೀಲನೆ

    ಔರಾದ್: ಪಶು ಸಂಗೋಪನಾ ಇಲಾಖೆಯಿಂದ ತಾಲೂಕಿಗೆ ಮಂಜೂರಾದ ಜಾನುವಾರು ಸಂವರ್ಧನಾ ಕೇಂದ್ರ ಸ್ಥಾಪಿಸಲು ಅಧಿಕಾರಿಗಳು ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದರು.

    ಹೆಡಗಾಪುರ ಬಳಿ ಇದಕ್ಕಾಗಿ ಈಗಾಗಲೇ 33 ಎಕರೆ ಜಮೀನು ಗುರುತಿಸಲಾಗಿದೆ. ಮುಂದಿನ ತಿಂಗಳು ಭೂಮಿ ಪೂಜೆ ನಿಗದಿಯಾದ ಹಿನ್ನೆಲೆಯಲ್ಲಿ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಪ್ರಕಾಶ ಮಠಪತಿ, ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಬಂಡೆಪ್ಪ ಕಂಟೆ, ಶಿವಾಜಿರಾವ ಕಾಳೆ, ಮುಖಂಡ ಶ್ರೀಮಂತ ಪಾಟೀಲ್, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಗೌತಮ ಅರಳಿ ಸ್ಥಳ ಪರಿಶೀಲಿಸಿದರು.

    ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರ ಸತತ ಪ್ರಯತ್ನದಿಂದ ಹೆಡಗಾಪುರ ಬಳಿ 33 ಎಕರೆ ಪ್ರದೇಶದಲ್ಲಿ ಜಾನುವಾರು ಸಂವರ್ಧನಾ ಕೇಂದ್ರ ಸ್ಥಾಪನೆಯಾಗಲಿದೆ. ಇದಕ್ಕಾಗಿ 33 ಕೋಟಿ ರೂ. ಅನುದಾನ ಮಂಜೂರಿಯಾಗಿದೆ. ಈ ಸಂವರ್ಧನಾ ಕೇಂದ್ರದ ಪಕ್ಕದಲ್ಲೇ ಗೋಶಾಲೆ ತೆರೆಯಲಾಗುವುದು. ಇದಕ್ಕೂ ಈಗಾಗಲೇ 36 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಬಂಡೆಪ್ಪ ಕಂಟೆ ತಿಳಿಸಿದ್ದಾರೆ.

    ಜಾನುವಾರು ಸಂವರ್ಧನಾ ಕೇಂದ್ರ ಸ್ಥಾಪನೆಯಿಂದ ತಾಲೂಕಿನ ಹಾಗೂ ಜಿಲ್ಲೆಯ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಜರ್ಸಿ ಶುದ್ಧ ತಳಿ ಹಸುಗಳ ಸಾಕಾಣಿಕೆ, ವೀರ್ಯ ಸಂಗ್ರಹಣೆಗೆ ಯೋಗ್ಯವಾದ ಜರ್ಸಿ ಹೋರಿ ಕರುಗಳ ಉತ್ಪಾದನೆ, ಭ್ರೂಣ ವರ್ಗಾವಣೆ ಕಾರ್ಯಕ್ರಮ, ಪಶು ವೈದ್ಯ ವಿದ್ಯಾರ್ಥಿಗಳಿಗೆ ತರಬೇತಿ, ಹಸಿರು ಮತ್ತು ಒಣ ಮೇವು ಉತ್ಪಾದನೆಯಂಥ ಹತ್ತಾರು ಚಟುವಟಿಕೆಗಳು ಇಲ್ಲಿ ನಡೆಯಲಿವೆ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts