More

    ಜಾತಿ ವ್ಯವಸ್ಥೆಯೆಂಬ ವಿಚಿತ್ರ ಸಂಕಟದಲ್ಲಿ ಸಿಲುಕಿದೆ ಭಾರತ : ಹಿರಿಯ ಕವಿ, ಚಿಂತಕ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯ


    ಚಾಮರಾಜನಗ : ಯುವ ಬರಹಗಾರ ದಿಲೀಪ್ ಎನ್ಕೆ ಅವರು ಬರೆದಿರುವ ಚೆಗ್ಗಿ ಮಾರಿ ಕುಣಿತದ ಸೊಲ್ಲು ಕವನಸಂಕಲನ ವಿಶೇಷವಾದದ್ದು. ಎಷ್ಟು ಭಾರಿ ಓದಿದರೂ ಮತ್ತೆ ಓದಿ ಆನಂದಿಸಬೇಕೆನಿಸುವ ಬರಹ ಎಂದು ಹಿರಿಯ ಕವಿ ಹಾಗೂ ಚಿಂತಕ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟರು.

    ಕೊಳ್ಳೇಗಾಲ ಪಟ್ಟಣದ ಪತಂಜಲಿ ಯೋಗ ಮಂದಿರದಲ್ಲಿ ಭಾನುವಾರ ಸಾಹಿತ್ಯ ಮಿತ್ರಕೂಟ ಸಹಯೋಗದೊಂದಿಗೆ ಡಾ.ದಿಲೀಪ್ ಎನ್ಕೆ ಬರೆದಿರುವ ಚೆಗ್ಗಿ ಮಾರಿ ಕುಣಿತ ಸೊಲ್ಲು ಎಂಬ ಕವನ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡಿದರು.


    ಭಾರತ ದೇಶ ಜಾತಿ ವ್ಯವಸ್ಥೆಯೆಂಬ ವಿಚಿತ್ರವಾದ ಸಂಕಟಕ್ಕೆ ಸಿಲುಕಿದೆ. ಕೆಳವರ್ಗದ ಬರಹಗಾರರು, ಕಲಾವಿದರ ಪ್ರಯಾಣ ಮುಳ್ಳಿನ ದಾರಿಯಾಗಿದೆ. 70ರ ದಶಕದ ಬಳಿಕ ಬಂದ ದಲಿತ ಬಂಡಾಯ ಸಾಹಿತ್ಯದಿಂದ ಧ್ವನಿ ಇಲ್ಲದವರಿಗೆ ದನಿ ಸಿಕ್ಕಂತೆ ಆಯಿತು. ನಂತರ, ದಲಿತ ಬಂಡಾಯ ಸಾಹಿತ್ಯಗಳು ಭಾರತದ ಬದುಕಿನ ಚಿತ್ರಣವನ್ನು ಅನಾವರಣಗೊಳಿಸಿದವು. ಹಿಂದೆ ಸಮಾನತೆ, ಭ್ರಾತೃತ್ವ, ಸಾಮಾಜಿಕ ನ್ಯಾಯ ಇರಲಿಲ್ಲ. ನಂತರ ಇವೆಲ್ಲವನ್ನು ಕೊಡುವ ಸಂವಿಧಾನ ಬಂದರೂ ಅದು ಕಾಗದದಲ್ಲಿ ಮಾತ್ರ ಉಳಿದಿದ್ದು ಇನ್ನೂ ಅನುಷ್ಠಾನಗೊಂಡಿಲ್ಲ ಎಂದು ಬೇಸರಿಸಿದರು.


    ಕನ್ನಡ ರಾಜೋತ್ಸವ ಪ್ರಶಸ್ತಿ ಪುರಸ್ಕೃತ, ಸಾಹಿತಿ ಮಹದೇವ ಶಂಕನಪುರ ಮಾತನಾಡಿ, ಚೆಗ್ಗಿ ಮಾರಿಕುಣಿತದ ಸೊಲ್ಲು ಕವನ ಸಂಕಲನ ಕೊಳ್ಳೇಗಾಲ ಪಟ್ಟಣದ ಭೀಮ ನಗರದ ಸಂಸ್ಕೃತಿ, ಪರಂಪರೆ, ಇತಿಹಾಸವನ್ನು ಪ್ರತಿನಿಧಿಸುವ ಕಾವ್ಯವಾಗಿದೆ.

    ನಮ್ಮ ಎಲ್ಲ ಮನೆ ಮನೆಯ ಆದಿ ಬೀದಿಗಳಿಂದ ಎದ್ದು ಬಂದು ಕವಿತೆಗಳಾಗಿವೆ. ಜಿಲ್ಲೆ ಹಾಗೂ ಕೊಳ್ಳೇಗಾಲ ಪರಿಸರದ ಅಸ್ಮಿತೆಯನ್ನು ವಸ್ತುವನ್ನಾಗಿ ಒಳಗೊಂಡಿರುವಂತಹದ್ದು. ಊರು, ಕೇರಿ ದಲಿತ ಸಮುದಾಯದ ಸ್ವಾಭಿಮಾನ, ಸಂಘರ್ಷ ಮತ್ತು ಮುನ್ನೋಟಗಳನ್ನು ಈ ಪುಸ್ತಕದಲ್ಲಿ ಕವಿ ವಸ್ತುವನ್ನಾಗಿ ಮಾಡಿಕೊಂಡಿದ್ದಾರೆ. ಕವಿ ದಿಲೀಪ್ ಮುಖ್ಯವಾಗಿ ಮಾರಿಕುಣಿತ ಸೊಲ್ಲು ಎಂಬುದನ್ನೇ ಬದುಕಿಗೆ ಅನ್ವಯ ಮಾಡಿದ್ದಾರೆ ಎಂದರು.


    ಮೈಸೂರು ವಿವಿ ಕುವೆಂಪು ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕರಾದ ಪ್ರೀತಿ ಶುಭಚಂದ್ರ, ಸಾಹಿತ್ಯ ಮಿತ್ರಕೂಟ ಅಧ್ಯಕ್ಷ ಮದ್ದೂರು ದೊರೆಸ್ವಾಮಿ, ಬರಹಗಾರ ಡಾ.ದಿಲೀಪ್ ಎನ್ಕೆ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts