More

    ಜಾತಿ ಗಣತಿ ವರದಿ ಬಿಡುಗಡೆ ಮಾಡಿ

    ಶಿವಮೊಗ್ಗ: ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಜ್ಞೆ ಮೂಡಲು ಜಾತಿ ಮಾಹಿತಿ ಅವಶ್ಯಕವಾಗಿದ್ದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಿದ್ಧಪಡಿಸಿರುವ ಜಾತಿ ಗಣತಿ ವರದಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು ಎಂದು ವಿಶ್ವಕರ್ಮ ಸಮಾಜದ ಮುಖಂಡ, ಎಂಎಲ್​ಸಿ ಕೆ.ಪಿ.ನಂಜುಂಡಿ ಒತ್ತಾಯಿಸಿದರು.

    ರಾಜ್ಯದಲ್ಲಿ 103 ಹಿಂದುಳಿದ ಜನಾಂಗಗಳಿದ್ದು ಅವುಗಳ ಜಾತಿ ಗಣತಿ ಹಿಂದಿನ ಸರ್ಕಾರದ ವೇಳೆ ಪೂರ್ಣಗೊಂಡಿದೆ. ಆದರೆ ಬಿಜೆಪಿ ಸರ್ಕಾರ ಆ ವರದಿಯನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ. ಸಾಮಾಜಿಕ ನ್ಯಾಯ ಸಿಗಲು ಜಾತಿ ಜನಸಂಖ್ಯೆ ಲೆಕ್ಕವನ್ನಾದರೂ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಡುಗಡೆ ಮಾಡಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

    ರಾಜ್ಯದಲ್ಲಿ ವಿಶ್ವಕರ್ಮ ಸಮಾಜದ 45 ಲಕ್ಷ ಜನರಿದ್ದಾರೆಂದು ತಿಳಿದಿದ್ದೇವೆ. ಆದರೆ ಕೆಲವರು ಅಷ್ಟಿಲ್ಲವೆಂದು ವಾದಿಸುತ್ತಿದ್ದಾರೆ. ಸರ್ಕಾರದ ಬಳಿ ಇರುವ ಜಾತಿ ಗಣತಿ ದಾಖಲೆ ಬಿಡುಗಡೆ ಮಾಡಬೇಕು. ಜನಗಣತಿ ವರದಿ ಬಹಿರಂಗವಾಗುವವರೆಗೂ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಸಿಗುವುದಿಲ್ಲ ಎಂದರು.

    ವಿಶ್ವಕರ್ಮ ಜನಾಂಗದಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಲು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ಪ್ರವಾಸ ಕೈಗೊಂಡಿದ್ದು ಈಗಾಗಲೇ ನಾಲ್ಕು ಜಿಲ್ಲೆ ಪ್ರವಾಸ ಮುಗಿಸಿದ್ದೇನೆ. ಹಂತ ಹಂತವಾಗಿ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಮಾಡುತ್ತೇನೆ. ರಾಜಕೀಯ ಪ್ರಜ್ಞೆ ಬೆಳೆಸುವ ಜತೆಗೆ ಸಮಾಜವನ್ನು ಸಂಘಟಿಸುವುದು ಪ್ರವಾಸ ಉದ್ದೇಶವಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts