More

    ಜಾಜಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಇನ್ನಿಲ್ಲ

    ಕಲಬುರಗಿ: ಜಿಲ್ಲೆಯ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಗುರುಕುಲ ಸಮೂಹ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ, ಹಿರಿಯ ಶಿಕ್ಷಣ ತಜ್ಞ ವಿಜಯಕುಮಾರ ಜಾಜಿ (೮೪) ಸೋಮವಾರ ನಿಧನ ಹೊಂದಿದರು. ಪತ್ನಿ ಪ್ರೇಮಲೀಲಾ ಜಾಜಿ, ಪುತ್ರರಾದ ಲಕ್ಷ್ಮೀಪ್ರಸಾದ ಜಾಜಿ, ಶಿವಪ್ರಸಾದ ಜಾಜಿ, ಪುತ್ರಿ ವೀಣಾ ಮುಕುಂದ ಸೇರಿ ಅಪಾರ ಶಿಷ್ಯ ಬಳಗವನ್ನು ಅಗಲಿದ್ದಾರೆ. ಕಲಬುರಗಿಯಲ್ಲಿ ಜಾಜಿ ಶಿಕ್ಷಣ ಸಂಸ್ಥೆ ಆರಂಭಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನುAಟು ಮಾಡಿದ್ದರು. ಸಾವಿರಾರು ಕುಟುಂಬಗಳಿಗೆ ಉದ್ಯೋಗ ಹಾಗೂ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣದಾತರಾಗಿ ಅಜಾತಶತ್ರು ಎನಿಸಿಕೊಂಡಿದ್ದರು. ಹೊಸ ಪೀಳಿಗೆಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದೊಂದಿಗೆ ೨೦೦೧ರಲ್ಲಿ ಗುರುಕುಲ ಸಮೂಹ ಸಂಸ್ಥೆ ಸ್ಥಾಪಿಸಿದರು. ಹಿಂದುಳಿದಿದ್ದ ಕಲ್ಯಾಣ ಕರ್ನಾಟಕದ ಬಡವರಿಗೆ ಕೈಗೆಟುಕುವ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ಕೊಡಿಸಲು ಶ್ರಮಿಸಿದ್ದರು. ಅವರ ಅಗಲಿಕೆಯಿಂದಾಗಿ ಶ್ರೇಷ್ಠ ಶಿಕ್ಷಣ ತಜ್ಞರೊಬ್ಬರನ್ನು ಕಳೆದುಕೊಂಡಂತಾಗಿದೆ. ಸಂಘತ್ರಾಸವಾಡಿಯ ಜಾಜಿ ಮುಕ್ತಿಧಾಮದಲ್ಲಿ ಮಂಗಳವಾರ ಬೆಳಗ್ಗೆ ೭.೩೦ಕ್ಕೆ ಅಂತ್ಯಕ್ರಿಯೆ ನೆರವೇರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts