More

    ಜಲಕೃಷಿಯಿಂದ ಅಲ್ಪಾವಧಿಯಲ್ಲೇ ಮೇವು

    ಹಾವೇರಿ: ಕರೊನಾ ಮಹಾಮಾರಿ ಹರಡುತ್ತಿರುವ ಈ ಸಂದರ್ಭದಲ್ಲಿ ಕಡಿಮೆ ಕೂಲಿಕಾರರನ್ನು ಬಳಸಿಕೊಂಡು, ಜಲಕೃಷಿ ಪದ್ಧತಿಯಲ್ಲಿ ಮೇವು ಬೆಳೆಯುವ ಕುರಿತು ರಾಣೆಬೆನ್ನೂರ ತಾಲೂಕಿನ ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಜಿಲ್ಲೆಯ ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸುತ್ತಿದ್ದಾರೆ.

    ರಾಸುಗಳಿಗೆ ಈ ಮೊದಲು ತೋಟಗಾರಿಕೆ ಜಮೀನಿನಲ್ಲಿ ಕೂಲಿಕಾರರನ್ನು ಬಳಸಿಕೊಂಡು ಹಸಿಮೇವು ಉತ್ಪಾದಿಸಲಾಗುತ್ತಿತ್ತು. ಈ ರೀತಿ ಮೇವು ಬೆಳೆಯಲು ತಿಂಗಳುಗಟ್ಟಲೆ ಸಮಯವೂ ಬೇಕಾಗಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಮೇವು ಬೆಳೆಯಲು ಕೂಲಿಕಾರ್ವಿುಕರು ಸರಿಯಾಗಿ ಸಿಗುತ್ತಿಲ್ಲ. ಹೀಗಾಗಿ, ಜಲಕೃಷಿ (ಹೈಡ್ರೋಪೋನಿಕ್ಸ್) ಪದ್ಧತಿಯಲ್ಲಿ ಕಡಿಮೆ ನೀರು ಬಳಸಿ ಉತ್ತಮ ಮೇವು ಬೆಳೆಯುವ ವಿಧಾನವನ್ನು ರೈತರಿಗೆ ತಿಳಿಸಲಾಗುತ್ತಿದೆ.

    ಕೆವಿಕೆಯ ಪಶು ವಿಜ್ಞಾನಿ ಡಾ. ಮಹೇಶ ಕಡಗಿ, ಮುಖ್ಯಸ್ಥ ಡಾ. ಅಶೋಕ ಪಿ. ಅವರು ಜಿಲ್ಲೆಯ ಚಳಗೇರಿ ಸೇರಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ರೈತರೊಂದಿಗೆ ರ್ಚಚಿಸಿದರು. ಬೇಸಿಗೆಯಲ್ಲಿ ಮೇವಿನ ಕೊರತೆಯಿಂದಾಗಿ ಹಾಲಿನ ಉತ್ಪಾದನೆ ಕಡಿಮೆಯಾಗುತ್ತಿದೆ. ಈ ಸಂದರ್ಭದಲ್ಲಿ ರಾಸುಗಳಿಗೆ ಮೇವು ಪಡೆಯುವುದು ಹೇಗೆ ಎಂದು ರೈತರಿಗೆ ಮಾಹಿತಿ ನೀಡಿದರು.

    ಚಳಗೇರಿಯ ರೈತ ಬಸವರಾಜ ಹೂಲಿಕಟ್ಟಿ ಅವರ ಜಮೀನಿನಲ್ಲಿ ಕೈಗೊಂಡಿರುವ ಜಲಕೃಷಿ ಕುರಿತು ಇತರ ರೈತರಿಗೆ ಪ್ರಾತ್ಯಕ್ಷಿಕೆ ನೀಡಿದ ಡಾ. ಮಹೇಶ ಕಡಗಿ, ‘ಜಲಕೃಷಿಯು ಯಾವುದೇ ರೀತಿಯ ಮಣ್ಣಿಲ್ಲದೆ, ಕೇವಲ ನೀರಿನ ಸಹಾಯದಿಂದ, ಕಡಿಮೆ ಅವಧಿಯಲ್ಲಿ ಉತ್ತಮ ಹಸಿ ಮೇವು ಅಥವಾ ಬೆಳೆಗಳನ್ನು ಪಡೆಯುವ ಒಂದು ವಿಧಾನವಾಗಿದೆ. ಇದರಿಂದ ಅನೇಕ ರೈತರಿಗೆ ಬೇಸಿಗೆಯಲ್ಲಿ ಹಸಿಮೇವಿನ ಕೊರತೆಯೂ ನೀಗುತ್ತದೆ. ಹಾಲು ಉತ್ಪಾದನೆಯೂ ಹೆಚ್ಚಲಿದೆ’ ಎಂದು ತಿಳಿಸಿದರು.

    ನೂತನ ತಂತ್ರಜ್ಞಾನ: ಕಡಿಮೆ ಭೂ ಹಿಡುವಳಿ ಇರುವ ಹಾಗೂ ಹೈನುಗಾರಿಕೆ ಮಾಡುವ ರೈತರು ವರ್ಷಪೂರ್ತಿ ಹಸಿರು ಮೇವನ್ನು ಪಡೆಯಬಹುದಾದ ತಂತ್ರಜ್ಞಾನವೇ ಜಲಕೃಷಿ ಮೇವಿನ ಘಟಕವಾಗಿದೆ. ಟ್ರೇಗಳಲ್ಲಿ ಮೇವಿನ ಬೀಜಗಳನ್ನು ಹಾಕಿ ಜಲಕೃಷಿ ಘಟಕದಲ್ಲಿ ವಿವಿಧ ವಿಭಾಗಗಳಲ್ಲಿ ಇಡಲಾಗುತ್ತದೆ. ತುಂತುರು ನೀರಾವರಿ ಮೂಲಕ ನಿರ್ದಿಷ್ಟ ಸಮಯದಲ್ಲಿ ನೀರನ್ನು ಚಿಮುಕಿಸಿ, 8ರಿಂದ 10 ದಿನಗಳಲ್ಲಿ ಹಸಿರು ಮೇವನ್ನು ಪಡೆಯಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts