More

    ಜಮೀನು ಫೌಂಡೇಷನ್‌ಗೆ ನೀಡಲು ವಿರೋಧ

    ಬೆಳಗಾವಿ: ಸಾರ್ವಜನಿಕ ಬಳಕೆಗೆ ಮೀಸಲಿಟ್ಟಿದ್ದ ಸರ್ಕಾರಿ ಜಾಗವನ್ನು ಭಾರತಿ ಡೆವಲಪ್ಮೆಂಟ್ ಫೌಂಡೇಷನ್‌ಗೆ 2 ಎಕರೆ ಜಮೀನು ಮಂಜೂರು ಮಾಡಿರುವುದನ್ನು ವಿರೋಧಿಸಿ, ಹಲಗಾ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿದರು.

    ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಜಮಾಯಿಸಿದ ಗ್ರಾಮಸ್ಥರು, ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಸರ್ವೇ ನಂ.262/ಅ ಕ್ಕೆ ಸೇರಿದ 21 ಎಕರೆ 30 ಗುಂಟೆ ಪೈಕಿ 2004ರಲ್ಲಿ ಸ್ಮಶಾನ, ಶಾಲೆ ಹಾಗೂ ಇನ್ನಿತರ ಸೌಲಭ್ಯ ಒದಗಿಸುವುದಕ್ಕಾಗಿ 18 ಎಕರೆ 37 ಗುಂಟೆ ಜಮೀನನ್ನು ಮೀಸಲಿಡಲಾಗಿತ್ತು. 2010ರಲ್ಲಿ ಭಾರತಿ ಡೆವಲಪ್ಮೆಂಟ್ ಫೌಂಡೇಷನ್‌ಗೆ ಸುವರ್ಣ ಕಾಯಕ ತರಬೇತಿ ಸಂಸ್ಥೆ ಆರಂಭಿಸಲು 2 ಎಕರೆ ಜಮೀನನ್ನು 2010ರಲ್ಲಿ ಮಂಜೂರು ಮಾಡಲಾಗಿದೆ. ಹೀಗಾಗಿ ಹಲಗಾ ಗ್ರಾಮದ ಜಾನುವಾರುಗಳಿಗೆ ಮೇಯಲು ಗೋಮಾಳ ಜಮೀನು ಇಲ್ಲದಂತಾಗಿದೆ ಅಂದು ಅಳಲು ತೋಡಿಕೊಂಡರು. ಜಾನುವಾರುಗಳು ಮೇಯಲು 2 ಎಕರೆ ಜಮೀನು ಮೀಸಲಿಡಬೇಕು. ಅದಕ್ಕಾಗಿ ಖಾಸಗಿ ಫೌಂಡೇಷನ್ ಅವರಿಗೆ ನೀಡಿದ ಜಮೀನನ್ನು ಸರ್ಕಾರ ಹಿಂಪಡೆದು. ರೈತಾಪಿ ಜನರ ಹಿತ ಕಾಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸದಾನಂದ ಬಿಳಗೂಜೆ, ರೂಪಾ ಸುತಾರ, ಪಿರಾಜಿ ಜಾಧವ್, ಸಾಗರ ಕಾಮನಾಚೆ, ಕಲ್ಪನಾ ಹಣಮಂತಾಚೆ, ಸರೋಜಾ ವಡಗಾವಿ, ಗಣಪತ ಮಾರಿಹಾಳಕರ, ವಿಲಾಸ ಪರೀಟ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts