More

    ಜಮೀನು ಕಬಳಿಸಲು ಪ್ರತಿಭಟನೆ ಕುತಂತ್ರ

    ಚಿಕ್ಕಮಗಳೂರು: ದಸಂಸ ಹೆಸರಿನಲ್ಲಿ 8ರಿಂದ 10 ಮಂದಿ ಒಗ್ಗೂಡಿ ತಡಗಸೆ ಗ್ರಾಮದ ಸರ್ಕಾರಿ ಜಮೀನನ್ನು ಕಬಳಿಸಲು ರಾಜಸ್ವ ನಿರೀಕ್ಷಕರ ವಿರುದ್ಧ ಪ್ರತಿಭಟನೆ ನಡೆಸುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಡಗಸೆ ಗ್ರಾಮಸ್ಥರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಸೋಮವಾರ ದೂರು ಸಲ್ಲಿಸಿದರು. ತಡಗಸೆ ಗ್ರಾಮದ ನಿವಾಸಿ ದಸಂಸ ಹೆಸರು ಬಳಸಿಕೊಂಡು ಸರ್ಕಾರಿ ಜಮೀನನ್ನು ಕಬಳಿಸಲು ರಾಜಸ್ವ ನಿರೀಕ್ಷಕರ ತೇಜೋವಧೆಗೆ ಮುಂದಾಗುತ್ತಿದ್ದಾನೆ. ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

    ತಡಗಸೆ ಹಾಗೂ ಹಲಸುಮನೆ ಗ್ರಾಮದಲ್ಲಿ 8 ರಿಂದ 10 ಎಕರೆ ಕೃಷಿ ಭೂಮಿ ಹೊಂದಿದ್ದರೂ ಸರ್ಕಾರಿ ಜಮೀನು ಮಂಜೂರು ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದಾನೆ. ಈತನ ಅನರ್ಹತೆ ಗಮನಿಸಿದ ವಸ್ತಾರೆ ಹೋಬಳಿ ರಾಜಸ್ವ ನಿರೀಕ್ಷಕರು ಅರ್ಜಿ ವಜಾಗೊಳಿಸಲು ಮುಂದಾದಾಗ ಅವರ ವಿರುದ್ಧ ಪ್ರತಿಭಟನೆ ನಡೆಸಲು ಕುತಂತ್ರ ನಡೆಸಿದ್ದಾನೆ ಎಂದು ದೂರಿದರು.

    ಗ್ರಾಮದಲ್ಲಿ ದಲಿತ ಕುಟುಂಬ, ಅವಿದ್ಯಾವಂತರು, ಕೂಲಿಕಾರ್ವಿುಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದನ್ನು ಗಮನಿಸಿ ಗ್ರಾಮಸ್ಥರಿಗೆ ಆಶ್ರಯ ಮನೆ ಕೊಡಿಸುವುದಾಗಿ ಹೇಳಿ 3 ಲಕ್ಷ ರೂಪಾಯಿ ಸಂಗ್ರಹಿಸಿ ವಂಚನೆ ಮಾಡಿದ್ದಾನೆ ಎಂದು ದೂರಿದರು.

    ಗ್ರಾಮಸ್ಥರು ಆಶ್ರಯ ಮನೆ ಕೋರಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ತಹಸೀಲ್ದಾರರಿಗೆ ರಾಜಸ್ವ ನಿರೀಕ್ಷಕರ ವಿರುದ್ಧ ದೂರು ನೀಡಿದ್ದ. ಆದರೆ ತಹಸೀಲ್ದಾರ್ ಸ್ಥಳ ಪರಿಶೀಲಿಸಿ ರಾಜಸ್ವ ನಿರೀಕ್ಷಕರ ಆಶ್ರಯ ಮನೆ ಮಂಜೂರಿಗೆ ಕ್ರಮ ಕೈಗೊಂಡಿರುವುದನ್ನು ಗ್ರಾಮಸ್ಥರು ಸಮರ್ಥಿಸಿಕೊಂಡಿದ್ದರು. ಹಾಗಾಗಿ ಒತ್ತುವರಿದಾರ ಸರ್ಕಾರಿ ಜಮೀನು ಕಬಳಿಸಲು ಪ್ರತಿಭಟನೆ ಹಾಗೂ ಮನವಿ ಸಲ್ಲಿಸಿ ಮೋಸ ಮರೆಮಾಚುವ ಪ್ರಯತ್ನ ಮಾಡುತ್ತಿದ್ದಾನೆ. ಆತ ನೀಡಿದ ಮನವಿ ತಿರಸ್ಕರಿಸಿ ಬಡ ಹಾಗೂ ದಲಿತ ಕುಟುಂಬ ಆಶ್ರಯ ಮನೆಗೆ ಜಮೀನು ಕಾಯ್ದಿರಿಸಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts